ರಾಷ್ಟ್ರೀಯ

ಅಹಮದಾಬಾದ್ ಉತ್ತರ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಅಖಾಡಕ್ಕಿಳಿದ ‘ಅಖಿಲ ಭಾರತೀಯ ಪತ್ನಿ ಕಿರುಕುಳ ವಿರೋಧಿ ಸಂಘ’ದ ಅಧ್ಯಕ್ಷ!

Pinterest LinkedIn Tumblr

ಅಹಮದಾಬಾದ್: ಲೋಕಸಭೆ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ದೇಶಾದ್ಯಂತ ಪ್ರಚಾರ, ಚುನಾವಣಾ ರಣಕಣ ರಂಗೇರುತ್ತಿದೆ. ಮಾಜಿ ಸೈನಿಕರು, ಚಿತ್ರ ನಟ, ನಟಿಯರು, ವಿವಿಧ ಸಾಮಾಜಿಕ ಕ್ಷೇತ್ರದ ಸಾಧಕರು ಲೋಕಸಭೆ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲು ತೀರ್ಮಾನಿಸುವುದು ಸಾಮಾನ್ಯ. ಆದರೆ ದೌರ್ಜನ್ಯಕ್ಕೊಳಗಾದ ಪತಿಯರ ಸಂಘದ ಅಧ್ಯಕ್ಷನೂ ಈ ಬಾರಿ ಚುಉನಾವಣೆ ಎದುರಿಸುತ್ತಿದ್ದಾರೆ ಎಂದರೆ ನಂಬುವಿರಾ?

ಅಖಿಲ ಭಾರತೀಯ ಪತ್ನಿ ಕಿರುಕುಳ ವಿರೋಧಿ ಸಂಘ ಎಂಬ ಸರ್ಕಾರೇತರ ಸಂಘಟನೆ (ಎನ್ ಜಿಒ) ಒಂದರ ಅಧ್ಯಕ್ಷ ಧಶರಥ್‌ ದೇವ್ದಾ ಎಂಬಾತ ಈ ಬಾರಿ ಲೋಕಸಭೆ ಚುನಾವಣೆಗೆ ನಿಂತಿದ್ದಾರೆ.ಇವರು ಅಹಮದಾಬಾದ್ ಉತ್ತರ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಒಂದೊಮ್ಮೆ ತಾನು ಸಂಸತ್ತಿಗೆ ಆಯ್ಕೆಯಾದದ್ದಾದರೆ ನಿಮ್ಮ ಪತ್ನಿಯರಿಂದ ಕಿರುಕುಳಕ್ಕೆ ಒಳಗಾದ ಪುರುಷರ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತುತ್ತೇನೆ ಎಂದು ಧಶರಥ್‌ ಭರವಸೆ ನೀಡಿದ್ದಾರೆ.

ದಶರಥ್ ಅವರ ಎನ್ ಜಿಓ 69,000 ಸದಸ್ಯರನ್ನು ಒಳಗೊಂಡಿದೆ.ಹಾಗೆಯೇ ದಶರಥ್ ಪಾಲಿಗಿ ಇದು ಮೂರನೇ ಚುನಾವಣೆಯಾಗಿದ್ದು ಈ ಹಿಂದೆ 2014, 2017ರ ಗುಜರಾತ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಆದರೆ ಈ ಬಾರಿ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಎರಡೂ ಬಾರಿಯ ಸೋಲನ್ನು ಮರೆತು ಮತ್ತೆ ಸ್ಪರ್ಧೆಗೆ ಧುಮುಕಿದ್ದಾರೆ. ಅದೂ ಪ್ರಧಾನಿ ನರೇಂದ್ರ ಮೋದಿ ತವರಿನಲ್ಲೇ ಇಂತಹಾ ಅಭ್ಯರ್ಥಿಯೊಬ್ಬರು ಕಣದಲ್ಲಿರುವುದು ಎಲ್ಲರಿಗೆ ಅಚ್ಚರಿಯನ್ನುಂಟುಮಾಡಿದೆ.

“ನಾನು ಪಕ್ಷೇತರ ಅಭ್ಯರ್ಥಿ, ನಾನು ಇತರರಂತೆ ಹಣದ ರಾಜಕೀಯ ಮಾಡಲ್ಲ, ಮನೆ ಮನೆ ಪ್ರಚಾರ ನಡೆಸುತ್ತೇನೆ. ಪ್ರತಿಯೊಬ್ಬ ಪತಿ/ಪುರುಷರಿಗೆ ಸಹ ಸಮಾನ ಹಕ್ಕು ದೊರಕಿಸಿ ಕೊಡಬೇಕೆನ್ನುವುದು ನನ್ನ ಆಸೆ. ಇದನ್ನೇ ನಾನು ಪ್ರಚಾರದ ವೇಳೆ ಭರವಸೆಯನ್ನಾಗಿ ನೀಡುತ್ತಿದ್ದೇನೆ” ದರ್ಶರಥ್ ಹೇಳಿದ್ದಾರೆ.

Comments are closed.