ಮನೋರಂಜನೆ

ಇದುವರೆಗೂ ದೀಪಿಕಾ ಪಡುಕೋಣೆ ಜೊತೆ ನಟಿಸದೇ ಇರುವುದಕ್ಕೆ ಉತ್ತರ ಕೊಟ್ಟ ಸಲ್ಮಾನ್ ಖಾನ್!

Pinterest LinkedIn Tumblr


ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಇತ್ತೀಚೆಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆಗ ಅವರನ್ನು ದೀಪಿಕಾ ಪಡುಕೋಣೆ ಜೊತೆ ಇದುವರೆಗೂ ಸಿನಿಮಾ ಏಕೆ ಮಾಡಿಲ್ಲ ಎಂದು ಪ್ರಶ್ನಿಸಲಾಗಿತ್ತು. ಆಗ ಸಲ್ಮಾನ್, ಹೌದು. ನನಗೂ ಕೂಡ ಆಶ್ಚರ್ಯವಾಗುತ್ತಿದೆ. ನಾನು ದೀಪಿಕಾ ಜೊತೆ ಯಾವಾಗ ಸಿನಿಮಾ ಮಾಡುತ್ತೇನೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಅಲ್ಲದೆ ದೀಪಿಕಾ ಜೊತೆ ನಟಿಸಲು ಇದುವರೆಗೂ ನನಗೆ ಯಾರೂ ಕೇಳಿಲ್ಲ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಬಳಿಕ ದೀಪಿಕಾ ಬಹುದೊಡ್ಡ ನಟಿ. ಹಾಗಾಗಿ ನನ್ನ ಜೊತೆ ಸಿನಿಮಾ ಮಾಡುವ ಅರ್ಹತೆ ಅವರಿಗಿದೆ. ಆದರೆ ಸದ್ಯಕ್ಕೆ ಅಂತಹ ಸುದ್ದಿ ಇಲ್ಲ ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್ ಬಾಲಿವುಡ್ ಟಾಪ್ ನಟಿಯರ ಜೊತೆ ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ ಹೊಸ ಹೊಸ ಪ್ರತಿಭೆಗಳನ್ನು ತಮ್ಮ ಸಿನಿಮಾಗಳಿಗೆ ನಾಯಕಿ ಪಾತ್ರ ಮಾಡುವ ಅವಕಾಶಗಳು ನೀಡಿದ್ದಾರೆ. ಹೀಗಿರುವಾಗ ಅವರು ಬಾಲಿವುಡ್ ಟಾಪ್ ನಟಿ ದೀಪಿಕಾ ಜೊತೆ ಇದುವರೆಗೂ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

ಸಲ್ಮಾನ್ ಖಾನ್ ‘ಭಾರತ್’ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್‍ಗೆ ನಾಯಕಿಯಾಗಿ ಕತ್ರಿನಾ ಕೈಫ್ ನಟಿಸಿದ್ದಾರೆ. ಈ ಚಿತ್ರದಲ್ಲಿ ತಬು, ದಿಶಾ ಪಠಾಣಿ, ಶಶಾಂಕ್ ಅರೋರಾ, ಜಾಕಿ ಶ್ರಾಫ್, ಸುನೀಲ್ ಗ್ರೋವರ್, ಆಸೀಫ್ ಶೇಖ್, ನೋರಾ ಫತೇಹಿ ಸೇರಿದಂತೆ ಹಲವರು ನಟಿಸಿದ್ದಾರೆ. ಜೂನ್ 5ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.

Comments are closed.