ಅಂತರಾಷ್ಟ್ರೀಯ

ಖರೀದಿ ಮಾಡಿದ 2 ನಿಮಿಷದಲ್ಲಿ 2.2 ಕೋಟಿ ಲ್ಯಾಂಬೋರ್ಗಿನಿ ಕಾರು ಚೂರ್ ಚೂರು!

Pinterest LinkedIn Tumblr


ನ್ಯೂಯಾರ್ಕ್: ಕಾರು ಖರೀದಿಸಿದವರಿಗೆ ಗೊತ್ತು ಅದರ ಕಾಳಜಿ. ಧೂಳು ಕೂತರೂ, ಸಣ್ಣ ಸ್ಕ್ರಾಚ್ ಬಿದ್ದರೂ ಮಾಲೀಕನ ನೋವು ಮಾತ್ರ ಹೇಳತೀರದು. ಹೀಗಿರುವಾಗ ಕಾರು ಖರೀದಿಸಿದ 2 ನಿಮಿಷದಲ್ಲಿ ಅಪಘಾತವಾದರೆ ಒನರ್ ಕತೆ ಹೇಳೋದೇ ಬೇಡ. ಇದೀಗ ಇಂತಹ ಘಟನೆಯೊಂದು ನಡೆದಿದೆ. ಲ್ಯಾಂಬೋರ್ಗಿನಿ ಹುರಾಕೆನ್ ಕಾರು ಖರೀದಿಸಿದ 2 ನಿಮಿಷದಲ್ಲಿ ಕಾರಿನ ಸ್ವರೂಪವೇ ಬದಲಾಗಿದೆ.

ಲ್ಯಾಂಬೋರ್ಗಿನಿ ಕಾರುಗಳ ಲಾಂಚಿಂಗ್ ಆಯೋಜಿಸಲಾಗಿತ್ತು. ಇದೇ ದಿನ ಲ್ಯಾಂಬೋರ್ಗಿನಿ ಹುರಾಕೆನ್ ಸ್ಪೋರ್ಟ್ಸ್ ಕಾರು ಖರೀದಿಸಿದ ಮಾಲೀಕ ಡೆಲಿವರಿ ಪಡೆದಿದ್ದ. ಬರೋಬ್ಬರಿ 2.2 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರಿನ ಕೀಯನ್ನು ಲಾಂಚಿಂಗ್ ವೇಳೆ ಮಾಲೀಕನಿಗೆ ಹಸ್ತಾಂತರಿಸಲಾಯಿತು. ಇನ್ನು ಕಾರು ಪಡೆದ ಸಂತಸದಲ್ಲಿ, ಸ್ಟಾರ್ಟ್ ಮಾಡಿದ್ದಾನೆ. ಬಳಿಕ ಕಾರನ್ನು ಚಲಾಯಿಸಿದ್ದಾನೆ.

ಎರಡೇ ನಿಮಿಷ, ಅಷ್ಟರಲ್ಲೇ ಕಾರು ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಮರಕ್ಕೆ ಗುದ್ದಿ, ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ,ಹಿಂಭಾಗ ಹಾಗ ಸೈಡ್ ಸಂಪೂರ್ಣ ಪುಡಿ ಪುಡಿಯಾಗಿದೆ. ಕಾರಿನಿಂದ ಇಳಿದ ಮಾಲೀಕ ಕಣ್ಣೀರು ತಡೆಯಲು ಆಗಲೇ ಇಲ್ಲ. ಕಾರು ಲಾಂಚಿಂಗ್ ನೋಡಲು ಹಲವರು ಕಾರು ಪ್ರೀಯರು ಆಗಮಿಸಿದ್ದರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

Comments are closed.