ಮನೋರಂಜನೆ

ಕಾರ್ಗಿಲ್ ಹುತಾತ್ಮ ವೀರರಿಗೆ 175 ಎಕರೆ ಭೂಮಿ ದಾನ ನೀಡಲಿರುವ ನಟ ಸುಮನ್‌

Pinterest LinkedIn Tumblr


ಬೆಂಗಳೂರು: ಬಹುಭಾಷಾ ಖ್ಯಾತ ನಟ ಸುಮನ್‌ ಅವರು ದೇಶಕ್ಕಾಗಿ ಹೋರಾಟ ಮಾಡಿರುವ ಸೈನಿಕರಿಗಾಗಿ ಬರೋಬ್ಬರಿ 175 ಎಕರೆ ಭೂಮಿಯನ್ನು ದಾನ ನೀಡುವುದಾಗಿ ಘೋಷಿಸಿದ್ದಾರೆ.

ಸದ್‌ಗುಣ ಸಂಪನ್ನ ಮಾಧವ ಚಿತ್ರದ ಸುದ್ದಿಗೋಷ್ಠಿ ವೇಳೆ ಸುಮನ್‌ ಅವರು ಈ ವಿಚಾರ ಬಹಿರಂಗ ಪಡಿಸಿದ್ದು, ನಾನು ಚಿತ್ರರಂಗಕ್ಕೆ ಬಂದು 400 ಚಿತ್ರಗಳನ್ನ ಮಾಡಿದ್ದೇನೆ.ದೇಶಕ್ಕಾಗಿ ಏನು ಮಾಡಿದ್ದೇನೆ ಅಂದುಕೊಂಡಾಗ ನನ್ನ ಹೆಂಡತಿ ಸಿರಿಶಾ ಸೈನಿಕರಿಗಾಗಿ ಭೂಮಿ ನೀಡುವ ಯೋಚನೆ ಮಾಡಿದಳು. ಹೈದ್ರಾಬಾದ್‌ನಲ್ಲಿ ಸ್ಟುಡಿಯೋ ಮಾಡಲೆಂದು ಇರಿಸಿದ್ದ ಸ್ವಂತ 175 ಎಕರೆ ಭೂಮಿ ಇದೆ. ಆ ಭೂಮಿಯನ್ನು ಕಾರ್ಗಿಲ್‌ ಹುತಾತ್ಮ ವೀರರ ಕುಟುಂಬಸ್ಥರಿಗೆ ಮನೆ ಕಟ್ಟಿಕೊಳ್ಳಲು ನೀಡುವುದಾಗಿ ತಿಳಿಸಿದ್ದಾರೆ.

ಹೈದ್ರಾಬಾದ್‌ನಿಂದ 30 ಕಿ.ಮೀ ದೂರ ವಿರುವ ಗುಡ್ಡವೊಂದರ ಬಳಿ ಭೂಮಿ ಇದ್ದು ಸದ್ಯ ಉಬ್ಬು ತಗ್ಗುಗಳನ್ನು ಸಮತಟ್ಟು ಮಾಡುತ್ತಿದ್ದೇವೆ.ಸಣ್ಣ ಕಾನೂನು ತೊಡಕುಗಳನ್ನೂ ಸರಿಪಡಿಸುತ್ತಿದ್ದೇವೆ. ಸೈಟ್‌ ಅಲ್ಲ ಭೂಮಿಯನ್ನೇ ನೀಡುತ್ತೇವೆ ಎಂದು ತಿಳಿಸಿದರು.

ಸೈನಿಕರಿಗೆ ಯಾವುದೇ ಜಾತಿ ಧರ್ಮ ಇಲ್ಲ. ನಮ್ಮ ದೇಶಕ್ಕಾಗಿ ಪ್ರಾಣ ಕೊಡುವವರು ಅವರು ಅವರಿಗಾಗಿ ನಾವು ಎನನ್ನೂ ನೀಡಿದರೂ ಕಡಿಮೆಯೇ ಎಂದು ಸುಮನ್‌ ಹೇಳಿದರು.

Comments are closed.