ರಾಷ್ಟ್ರೀಯ

ಅಜರ್‌ ಮಸೂದ್‌ಗೆ ಜಾಗತಿಕ ಉಗ್ರ ಪಟ್ಟ ನೀಡಲು ಪ್ರಕ್ರಿಯೆ ಆರಂಭಿಸಿದ ಜರ್ಮನಿ

Pinterest LinkedIn Tumblr


ಹೊಸದಿಲ್ಲಿ: ಜೈಷೆ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ಕುರಿತಂತೆ ಐರೋಪ್ಯ ಒಕ್ಕೂಟದಲ್ಲಿ ಜರ್ಮನಿ ಪ್ರಕ್ರಿಯೆ ಆರಂಭಿಸಿದೆ.

ವಿಶ್ವಸಂಸ್ಥೆಯಲ್ಲಿ ಈ ಪ್ರಸ್ತಾವನೆಗೆ ಚೀನಾ ಅಡ್ಡಿವುಂಟು ಮಾಡಿದ ಕೆಲ ದಿನಗಳ ನಂತರ ಜರ್ಮನಿ ಈ ಕ್ರಮ ಕೈಗೊಂಡಿದೆ.

ಐರೋಪ್ಯ ಒಕ್ಕೂಟದ ಹಲವು ಸದಸ್ಯ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿರುವ ಜರ್ಮನಿ ಉಗ್ರ ಅಜರ್‌ಗೆ ತನ್ನ ರಾಷ್ಟ್ರದಲ್ಲಿ ಪ್ರವೇಶ ನಿರ್ಬಂಧ ಹಾಗೂ ಆತ 28 ರಾಷ್ಟ್ರಗಳಲ್ಲಿ ಹೊಂದಿರುವ ಆಸ್ತಿಗಳ ಮುಟ್ಟುಗೋಲಿಗೆ ಈಗಾಗಲೇ ಕ್ರಮ ಕೈಗೊಂಡಿದೆ.

ಪಾಕಿಸ್ತಾನ ಮೂಲಕದ ಭಯೋತ್ಪಾದಕ ಅಜರ್‌ನ ಸಂಚಾರವನ್ನು ನಿಷೇಧಿಸುವ ಕುರಿತಂತೆ ಐರೋಪ್ಯ ಒಕ್ಕೂಟದ ಎಲ್ಲಾ 28 ರಾಷ್ಟ್ರಗಳು ಬೆಂಬಲ ಸೂಚಿಸಲಿವೆ ಎಂದು ಜರ್ಮನಿಯ ರಾಜತಾಂತ್ರಿಕ ಮೂಲಗಳು ತಿಳಿಸಿವೆ.

Comments are closed.