ಮನೋರಂಜನೆ

ಸುಮಲತಾ ಪರ ಯಶ್, ದರ್ಶನ್ ಪ್ರಚಾರ: ನೀತಿ ಸಂಹಿತೆ ಉಲ್ಲಂಘಿಸಿದ್ದರ ಕುರಿತು ಚುನಾವಣಾಧಿಕಾರಿ ಹೇಳಿದ್ದೇನು..?

Pinterest LinkedIn Tumblr


ಬೆಂಗಳೂರು: ಸುಮಲತಾ ಅವರಿಗೆ ನಟ ದರ್ಶನ್ ಮತ್ತು ಯಶ್​ ಬೆಂಬಲ ಸೂಚಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎನ್ನುವ ಆರೋಪಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟನೆ ನಿಡಿದ್ದಾರೆ.

ಸುಮಲತಾ ಅವರಿಗೆ ನಟ ದರ್ಶನ್ ಮತ್ತು ಯಶ್​ ಬೆಂಬಲ ಸೂಚಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ದೂರಿಗೆ ಪ್ರತಿಕ್ರಿಯಿಸಿದ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್, ಕಾಯ್ದೆ ಸ್ಪಷ್ಟವಾಗಿ ಹೇಳುತ್ತೆ ಯಾರು ಅಭ್ಯರ್ಥಿ ಇದ್ದಾರೆ ಅವರ ಚಿತ್ರಗಳು ಯಾವುದೇ ದೂರದರ್ಶನ ಹಾಗೂ ಆಲ್ ಇಂಡಿಯ ರೇಡಿಯೋದಲ್ಲಿ ಮಾತ್ರ ಪ್ರಸಾರವಾಗುವಂತಿಲ್ಲ.

ಬೇರೆ ಖಾಸಗಿ ಚಾನಲ್ ಹಾಗೂ ಚಿತ್ರಮಂದಿರಗಳಲ್ಲಿ ಪ್ರಸಾರ ಮಾಡಬಹುದು ಅಭ್ಯರ್ಥಿಯ ಆತ್ಮ ಚರಿತ್ರೆಯ ಬಗ್ಗೆ ಸಿನಿಮಾ ಮಾಡಿದ್ರೆ ಮಾತ್ರ ಅದನ್ನು ಪ್ರಸಾರ ಮಾಡುವಂತಿಲ್ಲ. ಅದನ್ನು ಹೊರತು ಪಡಿಸಿದ್ರೆ ಉಳಿದ ಚಿತ್ರಗಳನ್ನು ಕಲೆ ಎಂದು ಪರಿಗಣಿಸ್ಪಡುತ್ತದೆ ಎಂದು ಹೇಳಿದರು..

Comments are closed.