ಮನೋರಂಜನೆ

ನಟಿ ರಾಗಿಣಿಗಾಗಿ ಮಾರಾಮಾರಿ!

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್​ವುಡ್​​​​​ ನಟಿ ರಾಗಿಣಿ ದ್ವಿವೇದಿಗಾಗಿ ಉದ್ಯಮಿಯೊಬ್ಬ ಮತ್ತು ಆರ್​ಟಿವೊ ಅಧಿಕಾರಿಯೊಬ್ಬ ಹೊಡೆದಾಡಿಕೊಂಡಿರುವ ಘಟನೆ ನಗರದ ರಿಡ್ಜ್ ಕಾರ್ಟನ್ ಹೊಟೇಲ್ ನಲ್ಲಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಅಶೋಕನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಶೋಕನಗರ ಪೊಲೀಸ್​ ಠಾಣೆಗೆ ಬಿ.ಕೆ. ರವಿಶಂಕರ್​ ಎಂಬುವವರು ದೂರು ನೀಡಿದ್ದಾರೆ. ಜತೆಗೆ ದೂರಿನಲ್ಲಿ ಅವರು ಮತ್ತು ನಟಿ ರಾಗಿಣಿ ರಾತ್ರಿ ಊಟಕ್ಕೆಂದು ರಿಟ್ಸ್​ ಕಾರ್ಲ್ಟನ್​ ಹೊಟೇಲ್​ಗೆ ತೆರಳಿದ್ದಾಗ ಶಿವಪ್ರಕಾಶ್​ ಎಂಬ ವ್ಯಕ್ತಿ ರಾಗಿಣಿ ಜತೆ ತಾವು ಆಚೆ ಓಡಾಡುವಂತಿಲ್ಲ ಎಂದು ಬೆದರಿಕೆ ಹಾಕಿ ಹೊಡೆದಿರುವುದಾಗಿ ಹೇಳಲಾಗಿದೆ. ಮೂಲಗಳ ಪ್ರಕಾರ ಶಿವಪ್ರಕಾಶ್​ ಗಣಿ ಉದ್ಯಮಿಯಾಗಿದ್ದು ದೂರುದಾರ ರವಿಶಂಕರ್​ ಆರ್​ಟಿವೊ ಅಧಿಕಾರಿಯಾಗಿದ್ದಾರೆ. ಈ ಹಿಂದೆ ನಟಿ ರಾಗಿಣಿ ಉದ್ಯಮಿ ಶಿವಪ್ರಕಾಶ್​ ಜತೆ ಆತ್ಮೀರಾಗಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ದೂರವಿದ್ದಾರೆ ಎನ್ನಲಾಗಿದೆ. ರವಿಶಂಕರ್​ ಜತೆ ರಾಗಿಣಿ ಓಡಾಡುತ್ತಿರುವುದನ್ನು ಸಹಿಸದ ಶಿವಪ್ರಕಾಶ್​ ಹಲ್ಲೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಿಡ್ಜ್ ಕಾರ್ಟನ್ ಹೊಟೇಲ್ ಗೆ ಊಟಕ್ಕಾಗಿ ಆರ್ ಟಿಓ ಆಫೀಸರ್ ರವಿ ಜೊತೆ ನಟಿ ರಾಗಿಣಿ ಊಟಕ್ಕೆ ಬಂದಿದ್ದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಗಣಿ ಉದ್ಯಮಿಯಾಗಿರುವ ಶಿವಪ್ರಸಾದ್ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಬಂದಿದ್ದರು ಎನ್ನಲಾಗಿದೆ.

ಈ ವೇಳೆ ರವಿ ಜೊತೆ ನಟಿ ರಾಗಿಣಿ ಜೊತೆಗೆ ಇರುವುದನ್ನುಕಂಡು ಕೆಂಡಮಂಡಲವಾಗಿದ್ದ ಗಣಿ ಉದ್ಯಮಿ ಶಿವಪ್ರಸಾದ್ ಮಾತಿಗೆ ಮಾತು ಬೆಳೆದು ಬಿಯರ್ ಬಾಟಲ್ ನಿಂದ ರವಿಗೆ ಹೊಡೆದಿದ್ದಾನೆ ಎನ್ನಲಾಗಿದೆ. ಅಶೋಕ್ ನಗರ ಠಾಣೆಗೆ ನಟಿ ರಾಗಿಣಿ ದೂರನ್ನು ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿ ಟಿವಿಯನ್ನು ಪರಿಶೀಲನೆಯಲ್ಲ ತೊಡಗಿ ತನಿಖೆಯನ್ನು ಕೈಗೊಂಡಿದ್ದಾರೆ.

Comments are closed.