ಮನೋರಂಜನೆ

ನಟಿ ವಿಜಯಲಕ್ಷ್ಮೀ ವಿರುದ್ಧವೇ ದೂರು ಕೊಟ್ಟ ನಟ

Pinterest LinkedIn Tumblr


ಬೆಂಗಳೂರು: ಮಾನಸಿಕ ಕಿರುಕುಳದ ಆರೋಪ ಮಾಡಿದ್ದ ನಟಿ ವಿಜಯಲಕ್ಷ್ಮೀ ಮೇಲೆ ನಟ ರವಿಪ್ರಕಾಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ವಿಜಯಲಕ್ಷ್ಮೀ ನೆರವಿಗೆ ನೀಡಿರುವ 1 ಲಕ್ಷ ರೂ. ಹಣ ವಾಪಸ್ ನೀಡಬೇಕು. ಅಲ್ಲದೇ ಆರೋಪ ಮಾಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ದೂರಿನಲ್ಲಿ ಹೇಳಿದ್ದಾರೆ.

ವಿಯಜಲಕ್ಷ್ಮೀ ಮತ್ತು ಅವರ ಸಹೋದರಿ ಉಷಾದೇವಿ ಮೇಲೆ ದೂರು ದಾಖಲಿಸಲಾಗಿದೆ. ಧನ ಸಹಾಯ ಮಾಡಿದ್ದರೂ ನನ್ನ ವಿರುದ್ಧ ಕೆಟ್ಟ ಪದಗಳನ್ನ ಬಳಕೆ ಮಾಡಿ ನನ್ನನ್ನ ಅವಹೇಳನ ಮಾಡಲಾಗಿದೆ ಎಂದು ಹೇಳಿದ್ದಾರೆ.
,,,,,,,,,,,,,,,,,,,,,,,,,,,,,,,,,,,,,,,,,,,,,,,,,

ವಿಜಯಲಕ್ಷ್ಮೀ ಕಿರುಕುಳ ಕೇಸ್: ರವಿ ಪ್ರಕಾಶ್ ಸ್ಟಷ್ಟನೆ
ಕೆಲ ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ವಿಜಯಲಕ್ಷ್ಮೀ ತಮಗೆ ಆರ್ಥಿಕ ನೆರವು ಬೇಕೆಂದು ಮಾಧ್ಯಮಗಳ ಎದುರು ಸಹಾಯ ಬೇಡಿದ್ದರು. ಇದಕ್ಕೆ ಮುಂದಾದ ನಟ ರವಿ ಪ್ರಕಾಶ್ ವಿಜಯಲಕ್ಷ್ಮೀ ಅವರಿಗೆ ತಲಾ 1 ಲಕ್ಷ ರೂ ನೀಡಿ ಸಹಾಯ ಮಾಡಿದರು. ಆ ನಂತರ ಕೆಲವೊಮ್ಮೆ ಕರೆ ಮಾಡಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಇದನ್ನು ನೆಗೆಟೀವ್ ರೀತಿಯಲ್ಲಿ ತೆಗೆದುಕೊಂಡು ವಿಜಯಲಕ್ಷ್ಮಿ ನನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ರವಿ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.

“ಹಣ ಸಹಾಯ ಮಾಡಿದ ನಂತರ ನಮಗೆ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ನೀವು ಸಹಾಯ ಮಾಡುವುದಲ್ಲದೇ ಈ ರೀತಿಯ ಕಾಟ ಕೊಡುವುದಾದರೆ ನಮಗೆ ನೀವು ಕೊಟ್ಟ ಹಣ ತಗೆದುಕೊಂಡು ಹೋಗಿ” ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ.

“ಒಬ್ಬ ಮಹಿಳೆ ತೊಂದರೆಯಲ್ಲಿ ಇದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿ ಅವರಿಗೆ ಸಹಾಯ ಮಾಡುವುದಕ್ಕೆ ಕರೆ ಮಾಡಿದೆ. ಕರೆ ಸ್ವೀಕರಿಸಿದ್ದು ಅವರ ಅಕ್ಕ. ಅವರು ಇದರ ಬಗ್ಗೆ ತಿಳಿಸುತ್ತೇನೆ ಎಂದು ಸುಮ್ಮನಾಗಿ ಎರಡು ದಿನಗಳ ನಂತರ ಕರೆ ಮಾಡಿದರು. ಅವರಿಗೆ ಸಹಾಯವಾಗಲೆಂದು ನಾನೇ 1 ಲಕ್ಷ ರೂ ಹಣ ನೀಡಿ ಬಂದೆ” ಎಂದು ರವಿ ಹೇಳಿದ್ದಾರೆ.

ಅದಾದ ನಂತರ ಮತ್ತೊಮ್ಮೆ ಕರೆ ಮಾಡಿ ಆಸ್ಪತ್ರೆ ಬದಲಾವಣೆ ಆಗುತ್ತಿದೆ ಎಂದರು. ಆಗಲೂ ನಾನು ಹೋಗಿ ಸಹಾಯ ಮಾಡಿದೆ. ಶಿವರಾತ್ರಿ ದಿನದಂದು ಊಟ, ಬಟ್ಟೆ ಸಹಾಯ ಮಾಡಿ ಬಂದೆ ಎಂದು ರವಿ ಹೇಳಿದ್ದಾರೆ. ವಿಜಯಲಕ್ಷ್ಮೀ ಅವರು ನನ್ನ ಮನೆಯ ಬಳಿಯೇ ಅವರಿಗೊಂದು ಮನೆ ಮಾಡುವಂತೆ ಕೇಳಿಕೊಂಡರು ಎಂದು ಹೇಳಿದ್ದಾರೆ.

ನನ್ನ ಬಳಿ ಕಾಲ್ ರೆಕಾರ್ಡ್ ಹಾಗೂ ಮೆಸೇಜ್ ಸಾಕ್ಷಿ ಇದೆ. ಅವರು ಹೆಣ್ಣೆಂದು ಸುಮ್ಮನಿದ್ದೇನೆ. ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಸಾಕ್ಷಿ ಸಮೇತ ನಾನು ದೂರು ನೀಡುವೆ ಎಂದಿದ್ದಾರೆ.

Comments are closed.