ಕರ್ನಾಟಕ

ಲೋಕಾಸಭಾ ಚುನಾವಣೆ ಹಿನ್ನೆಲೆ: 2019-20 ನೇ ಸಾಲಿನ ಸಿಇಟಿ ಪರೀಕ್ಷೆ ಮುಂದೂಡಿಕೆ

Pinterest LinkedIn Tumblr


ಬೆಂಗಳೂರು: 2019-20 ನೇ ಸಾಲಿನ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಇದೇ ಏಪ್ರಿಲ್ 23 ರಂದು ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಸಾಮಾನ್ಯ ಪರೀಕ್ಷೆಗಳು ನಡೆಯಬೇಕಿತ್ತು.

ಏಪ್ರಿಲ್ 23 ರಂದು 2ನೇ ಹಂತದ ಲೋಕಾಸಭಾ ಚುನಾವಣೆ ಮತದಾನ ನಡೆಯಲಿದೆ. ಈ ಹಿನ್ನಲೆ ಏಪ್ರಿಲ್ 23 ಹಾಗೂ 24 ರಂದು ನಡೆಯಬೇಕಿದ್ದ ಸಿಇಟಿ ಪರೀಕ್ಷೇಯನ್ನಾ ಏಪ್ರಿಲ್ 29 ಹಾಗೂ 30ಕ್ಕೆ ಮುಂದೂಡಲಾಗಿದೆ.

ಈ ಕುರಿತು ಇಂದು [ಸೋಮವಾರ] ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ್ದು, ಹೊಸ ದಿನಾಂಕಗಳನ್ನು ಪ್ರಕಟಿಸಿದೆ.

ಏಪ್ರಿಲ್ 29 ರಂದು ಗಣಿತ ಹಾಗೂ ಜೀವಶಾಸ್ತ್ರ ಪರಿಕ್ಷೆಗಳು ನಡೆಯಲಿದ್ದು, ಏ. 30ರಂದು ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ಪರೀಕ್ಷೆಗಳು ನಡೆಯಲಿದೆ. ಇನ್ನು ಮೇ. 01 ರಂದು ಸಾಮಾನ್ಯ ಕನ್ನಡ ಪರೀಕ್ಷೆ ನಡೆಯಲಿದೆ.

Comments are closed.