ಮನೋರಂಜನೆ

ಸಲ್ಮಾನ್ ಖಾನ್ ಮುಖ ನೋಡಲು ನನಗೆ ಇಷ್ಟವಿಲ್ಲ ! ಸಲ್ಮಾನ್ ಖಾನ್ ವಿರುದ್ಧ ಗುಡುಗಿದ ಬಾಲಿವುಡ್ ಸಿಂಗರ್ !

Pinterest LinkedIn Tumblr

ಬಾಲಿವುಡ್ ನ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ ವಿರುದ್ಧ ಬಾಲಿವುಡ್ ಸಿಂಗರ್ ಗರಂ ಆಗಿದ್ದಾರೆ.

ಹೌದು, ಸಲ್ಮಾನ್ ಖಾನ್ ವಿರುದ್ಧ ಬಾಲಿವುಡ್ ಸಿಂಗರ್ ಸೋನಾ ಮೋಹಪಾತ್ರ ಅವರು ಗುಡುಗಿದ್ದಾರೆ. ಸಲ್ಮಾನ್ ಖಾನ್ ತಮ್ಮ ಭಾರತ್ ಶೂಟಿಂಗ್ ಮುಗಿದ ಬಗ್ಗೆ ಕತ್ರಿನಾ ಕೈಫ್ ಜೊತೆಗಿನ ಫೋಟೋವನ್ನು ತಮ್ಮ ಟ್ವೀಟರ್ ನಲ್ಲಿ ಶೇರ್ ಮಾಡಿದ್ದರು. ಈ ಟ್ವೀಟ್ ಸೋನಾ ಮೋಹಪಾತ್ರ ಅವರ ಟ್ವೀಟ್ ಖಾತೆಯಲ್ಲಿ ಪಾಪ್ ಆಪ್ ಆಗಿದೆ.

ಇದರಿಂದ ಕೆರಳಿರುವ ಸೋನಾ, ಟ್ವೀಟರ್ ಗೆ ಮನವಿ ಮಾಡಿ ಯಾವುದೇ ಕಾರಣಕ್ಕೂ ನನಗೆ ಈ ವ್ಯಕ್ತಿಯ ಟ್ವೀಟ್ ತೋರಿಸಬೇಡಿ. ನನಗೆ ಸಲ್ಮಾನ್ ಖಾನ್ ಅವರ ಯಾವುದೇ ರೀತಿಯ ಸಂದೇಶಗಳನ್ನು ತೋರಿಸಬೇಡ ಎಂದು ಟ್ವೀಟರ್ ಗೆ ಮನವಿ ಮಾಡಿ ಪೋಸ್ಟ್ ಮಾಡಿದ್ದಾರೆ.

ನಾನು ಈ ವ್ಯಕ್ತಿಯನ್ನು ಫಾಲೋ ಮಾಡುತ್ತಿಲ್ಲ. ಹೀಗಾಗಿ ಅವರ ಯಾವುದೇ ಸಂದೇಶಗಳು ನನಗೆ ತೋರಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

Comments are closed.