ಮನೋರಂಜನೆ

ಆಂಟಿ ಎಂದು ಕಮೆಂಟ್ ಮಾಡಿದವರ ಮೇಲೆ ಬಾಲಿವುಡ್ ನಟಿ ಕರೀನಾ ಕಪೂರ್ ಗರಂ!

Pinterest LinkedIn Tumblr


ಮುಂಬೈ: ಸಾಮಜಿಕ ಜಾಲತಾಣದಲ್ಲಿ ತಮ್ಮನ್ನು ‘ಆಂಟಿ’ ಎಂದು ಕರೆದವರ ಮೇಲೆ ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಸಿಡಿಮಿಡಿಗೊಂಡಿದ್ದಾರೆ.

ನಟ ಅರ್ಬಾಜ್ ಖಾನ್, ನಟಿ ಸೋನಾಕ್ಷಿ ಸಿನ್ಹಾ ಮತ್ತು ನಿರ್ದೇಶಕ ಕರಣ್ ಜೋಹರ್ ಜೊತೆ ಕರೀನಾ ಕಪೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅರ್ಬಾಜ್ ಖಾನ್ ತಮ್ಮ ಮೊಬೈಲಿನಲ್ಲಿ ಕರೀನಾ ಫೋಟೋಗೆ ‘ಆಂಟಿ’ ಎಂದು ಕಮೆಂಟ್ ಹಾಕಿದ್ದನ್ನ ತೋರಿಸಿದ್ರು.

ನೀವು ಈಗ ಆಂಟಿಯಾಗಿದ್ದೀರಿ, ಹುಡುಗಿಯರ ರೀತಿಯಲ್ಲಿ ಬಟ್ಟೆ ಹಾಕಿಕೊಂಡು ಮಕ್ಕಳ ರೀತಿ ಆಡೋದನ್ನು ನಿಲ್ಲಿಸಿ ಎಂದು ಕಮೆಂಟ್ ಮಾಡಲಾಗಿತ್ತು. ಕಮೆಂಟ್ ನೋಡುತ್ತ ಮುಗುಳನ್ಕಕ್ಕ ಕರೀನಾ, ಈ ರೀತಿಯ ಹೇಳಿಕೆಗಳಿಗೆ ನಾನು ಹೆಚ್ಚಿನ ಮಹತ್ವ ನೀಡಲ್ಲ. ಪ್ರಸಿದ್ಧ ವ್ಯಕ್ತಿ ಅಥವಾ ಕಲಾವಿದರಿಗೆ ಭಾವನೆಗಳಿಲ್ಲ ಎಂದು ಕೆಲವರು ತಿಳಿದುಕೊಂಡಿರುತ್ತಾರೆ. ಕೆಲವರು ಬೇರೆಯವರ ವೈಯಕ್ತಿಯ ವಿಚಾರವನ್ನು ಸಹ ತುಂಬಾ ಹಗುರುವಾಗಿ ತೆಗೆದುಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ಒಂದು ಮಗುವಿನ ತಾಯಿಯಾಗಿರುವ ಕರೀನಾ ಕಪೂರ್ ಇಂದಿಗೂ 18ರ ಹುಡುಗಿಯರು ನಾಚುವಂತೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಸದ್ಯ ಗುಡ್ ನ್ಯೂಸ್ ಸಿನಿಮಾದಲ್ಲಿ ಕರೀನಾ ನಟಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Comments are closed.