ಕನ್ನಡ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ, ಡಿಸ್ಕೋ ಶಾಂತಿ ಆ ಕಾಲಕ್ಕೆ ಐಟಂ ಸಾಂಗ್, ಕ್ಯಾಬರೆ ಡ್ಯಾನ್ಸರ್ ಗಳಾಗಿ ಹೆಸರಾಗಿದ್ದಂತೆ. ಬಾಲಿವುಡ್ ನಲ್ಲಿ ಇದರ ಇತಿಹಾಸ ತುಂಬಾ ದೊಡ್ಡದು. ಮರ್ಲಿನ್ ಮನ್ರೋ ಚಿರಪರಿಚಿತವಾದ ಹೆಸರು. ಆದರೆ ಮನ್ರೋಕ್ಕಿಂತಲೂ ಮುನ್ನವೇ ಜೀನ್ ಹಾರ್ಲೊ ಎಂಬ ಚೆಂದುಳ್ಳಿ ಚೆಲುವೆ..ಬಾಲಿವುಡ್ ನ ಮೊತ್ತ ಮೊದಲ ಚಿನ್ನದ ಬಣ್ಣದ ಕೂದಲಿನ ಬಾಂಬ್ ಶೆಲ್ ಎಂಬ ಹೆಸರು ಪಡೆದಿದ್ದಳು.
ಜೀನ್ ಹಾರ್ಲೊಳ ಕಣ್ಣು, ಚಿನ್ನದ ಬಣ್ಣದ ತಲೆಗೂದಲು, ಆಕರ್ಷಕ ಮೈಮಾಟದಿಂದಲೇ 1930ರ ದಶಕದಲ್ಲಿಯೇ ಪ್ರೇಕ್ಷಕರ ಮನಗೆದ್ದಿದ್ದಳು. ಆದರೆ ಅತೀ ಕಿರಿಯ ವಯಸ್ಸಿನಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದಳು..ನಿಜಕ್ಕೂ ಆಕೆಗೆ ಏನಾಗಿತ್ತು..ಮೊದಲ ಸ್ಟಾರ್ ನಟಿ, ಮೊದಲ ಸೆಕ್ಸ್ ಬಾಂಬ್ ಶೆಲ್ ಎಂದೇ ಖ್ಯಾತಳಾಗಿದ್ದ ಜೀನ್ ಬದುಕು ಹೇಗಿತ್ತು ಗೊತ್ತಾ?
ಹಾಲಿವುಡ್ ಜಗತ್ತಿನ ಮೊತ್ತ ಮೊದಲ ಸೆಕ್ಸ್ ಬಾಂಬ್ ಹಾರ್ಲೊ:
1911ರ ಮಾರ್ಚ್ 3ರಂದು ಹಾರ್ಲೆನ್ ಹಾರ್ಲೊ ಕಾರ್ಪೆಂಟರ್ ಅಮೆರಿಕದ ಮಿಸೌರಿಯ ಕಾನ್ಸಾ ನಗರದಲ್ಲಿ ಜನಿಸಿದ್ದಳು. ಈಕೆಯ ತಂದೆ ಮೋಂಟ್ ಕ್ಲೈಯರ್ ಕಾರ್ಪೆಂಟರ್..ಇವರು ದಂತ ವೈದ್ಯರಾಗಿದ್ದರು. ತಾಯಿ ಜೀನ್ ಪೋಯ್ ಕಾರ್ಪೆಂಟರ್. ಈಕೆಯ ತಂದೆ ಶ್ರೀಮಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಪ್ರೀತಿಯ ಮಗಳನ್ನು ತಂದೆ ಚಿಕ್ಕ ವಯಸ್ಸಿನಲ್ಲಿಯೇ (1908) ಜೀನ್ ಪೋಯ್ ಅವರನ್ನು ಮೋಂಟ್ ಕ್ಲೈಯರ್ ಜೊತೆ ವಿವಾಹ ಮಾಡಿಸಿ ಬಿಟ್ಟಿದ್ದರು. ಜೀನ್ಸ್ ತಂದೆಯ ಮನೆಯಲ್ಲಿಯೇ ದಂಪತಿ ವಾಸವಾಗಿದ್ದರು. ದಿನಕಳೆದಂತೆ ಇಬ್ಬರ ನಡುವೆ ಹೊಂದಾಣಿಕೆ ಕೊರತೆ ಹೆಚ್ಚಾಗತೊಡಗಿತ್ತು. ಏತನ್ಮಧ್ಯೆ ಹಾರ್ಲೆನ್ ಜನಿಸಿದ್ದಳು. ಕುತೂಹಲದ ಸಂಗತಿ ಏನೆಂದರೆ ಆಕೆಗೆ 5 ವರ್ಷವಾಗುವವರೆಗೂ ತನ್ನ ಹೆಸರು ಹಾರ್ಲೆನ್ ಎಂಬುದೇ ಗೊತ್ತಿರಲಿಲ್ಲ. ಕಾನ್ಸಾ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ತನ್ನ ಮಗಳು ಸಿನಿಮಾರಂಗದಲ್ಲಿ ಮಿಂಚಬೇಕು ಎಂಬುದು ತಾಯಿಯ ಇಚ್ಚೆಯಾಗಿತ್ತು. ಹೀಗಾಗಿ 14 ವರ್ಷಕ್ಕೆ ಹಾರ್ಲೆನ್ ಶಾಲೆಯಿಂದ ಹೊರಬಿದ್ದಿದ್ದಳು!
1922ರ ಸುಮಾರಿಗೆ ಹಾರ್ಲೆನ್ ಪೋಷಕರು ವಿಚ್ಛೇದನ ಪಡೆದು ಬೇರೆ, ಬೇರೆಯಾಗಿಬಿಟ್ಟರು. ಮಗಳ ಪಾಲನೆ, ಜವಾಬ್ದಾರಿ ಎಲ್ಲವನ್ನೂ ತಾಯಿಯೇ ನೋಡಿಕೊಳ್ಳತೊಡಗಿದಳು. ತಾಯಿಯ ಆಸೆಯಂತೆ ಮಗಳು ಹಾರ್ಲೆನ್ 1923ರಲ್ಲಿ ಹಾಲಿವುಡ್ ನತ್ತ ಮುಖಮಾಡಿದ್ದಳು.
ಹಾರ್ಲೆನ್ ಮೊತ್ತ ಮೊದಲ ಸಿನಿಮಾ ಹೆಲ್ಸ್ ಏಂಜೆಲ್ಸ್!
1930ರಲ್ಲಿ ನಿರ್ದೇಶಕ ಹೋವರ್ಡ್ ಹಗ್ಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವುದಾಗಿ ಹಾರ್ಲೆನ್ ಸಹಿ ಮಾಡಿದ್ದಳು. ಅದರಂತೆ ಹೆಲ್ಸ್ ಏಂಜೆಲ್ಸ್ ಎಂಬ ಹಾಲಿವುಡ್ ಸಿನಿಮಾದ ಮೂಲಕ ಆಕೆ ಚಿತ್ರರಂಗ ಪ್ರವೇಶಿಸಿದ್ದಳು. ಇದು ಜಗತ್ತಿನ ಮೊದಲ ಮಹಾಯುದ್ಧದ ಕಾಲವಾಗಿತ್ತು! ಏತನ್ಮಧ್ಯೆ ಈಕೆಯ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಸೋಲತೊಡಗಿದ್ದವು! 1932ರಲ್ಲಿ ಮೆಟ್ರೋ ಗೋಲ್ಡ್ ವೆನ್ ಮೇಯರ್(ಎಂಜಿಎಂ) ಕಂಪನಿಯ ಸಿನಿಮಾದಲ್ಲಿ ನಟಿಸಲು ಸಹಿ ಮಾಡಿದ್ದು ಹಾರ್ಲೆನ್ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿತ್ತು.!
1932ರಲ್ಲಿ ಬಿಡುಗಡೆಯಾಗಿದ್ದ ರೆಡ್ ಡಸ್ಟ್, ಡಿನ್ನರ್ ಎಟ್ ಏಯ್ಟ್(1935), ಸೂಜೈ(1936) ಸೂಪರ್ ಹಿಟ್ ಸಿನಿಮಾ ಆಗಿ ಮೂಡಿಬಂದಿತ್ತು. ರೆಡ್ ಹೆಡ್ಡೆಡ್ ವುಮೆನ್, ಬಾಂಬ್ ಶೆಲ್, ಹೋಲ್ಡ್ ಯುವರ್ ಮ್ಯಾನ್ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಹಾರ್ಲೊ ಚಿನ್ನದ ಬಣ್ಣದ ಕೂದಲಿನ ಬಾಂಬ್ ಸೆಲ್ ಎಂದು ಖ್ಯಾತಿ ಪಡೆದು ಬಿಟ್ಟಿದ್ದಳು. ಆಕೆಯ ನಗು ಜನಪ್ರಿಯವಾಗಿತ್ತು!
ಚಿನ್ನದ ಬಣ್ಣವೇ ಆಕೆಯ ಜೀವಕ್ಕೆ ಮುಳುವಾಯ್ತು!
ಹಾಲಿವುಡ್ ನಲ್ಲಿ ಮಿಂಚುತ್ತಿದ್ದ ಯುವ ನಟಿ ಹಾರ್ಲೊ ಕೇವಲ 26ನೇ ವಯಸ್ಸಿನಲ್ಲಿಯೇ ವಿಧಿವಶಳಾಗಿದ್ದಳು. ಈ ವೇಳೆ ಆಕೆ ಸಾರ್ಟೋಗಾ ಸಿನಿಮಾದಲ್ಲಿ ನಟಿಸುತ್ತಿದ್ದಳು. ಕೊನೆಗೆ ಆಕೆಯ ಬದಲಿಗೆ ಡ್ಯೂಪ್ ಹಾಕಿ ಸಿನಿಮಾವನ್ನು ಪೂರ್ಣಗೊಳಿಸಿ ಸಿನಿಮಾವನ್ನು ಬಿಡುಗಡೆಗೊಳಿಸಲಾಗಿತ್ತು. ಹಾಲಿವುಡ್ ಸಿನಿಮಾ ಜಗತ್ತಿನ 22ನೇ ಗ್ರೇಟೆಸ್ಟ್ ಮಹಿಳಾ ಹೀರೋ ಎಂಬ ಪಟ್ಟವನ್ನು ಅಮೆರಿಕನ್ ಫಿಲ್ಮ್ ಇನ್ಸ್ ಟ್ಯೂಟ್ ನೀಡಿತ್ತು.
ಖ್ಯಾತಿಯ ಉತ್ತುಂಗದಲ್ಲಿದ್ದಾಗಲೇ ಹಾರ್ಲೋ ವೈಯಕ್ತಿಕ ಬದುಕು ಕೂಡಾ ದುರಂತಮಯವಾಗಿತ್ತು. 16ನೇ ವಯಸ್ಸಿಗೆ ಹಾರ್ಲೊ 20 ವರ್ಷದ ಚಾರ್ಲ್ಸ್ ಮೆಕ್ ಗ್ರಿವ್ಯೂ ಜೊತೆ ವಿವಾಹವಾಗಿದ್ದಳು. ಆದರೆ ವರ್ಷ ಕಳೆಯುವುದರಲ್ಲಿಯೇ ಮೊದಲ ಪತ್ನಿ ಈಕೆಗೆ ಕೈಕೊಟ್ಟ ಮತ್ತೊಂದು ವಿವಾಹವಾಗಿಬಿಟ್ಟಿದ್ದ! 1932ರಲ್ಲಿ ಹಾರ್ಲೊ 2ನೇ ಪತಿ(ಎಂಜಿಎಂ ಎಕ್ಸಿಕ್ಯೂಟಿವ್) ಪೌಲ್ ಬೆರ್ನ್ ಆತ್ಮಹತ್ಯೆಗೆ ಶರಣಾಗಿಬಿಟ್ಟಿದ್ದ! ತದನಂತರ ಹಾರ್ಲೊ ಸಿನಿಮಾಟೋಗ್ರಾಫರ್ ಹಾರ್ಲೊಲ್ಡ್ ರೋಸ್ಸನ್ 3ನೇ ಪತಿಯಾಗಿ ಜೀವನದೊಳಕ್ಕೆ ಪ್ರವೇಶಿಸಿದ್ದ. ನಂತರ ನಟ ವಿಲಿಯಂ ಫೋವೆಲ್ ಅವರನ್ನು ಪ್ರೀತಿಸತೊಡಗಿದ್ದಳು. 1937ರಲ್ಲಿ ಹಾರ್ಲೊ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಫ್ಲೂ ಜ್ವರ, ಸನ್ ಬರ್ನ್ ಹೀಗೆ ವಿವಿಧ ತೊಂದರೆಯಿಂದ ಬಳಲತೊಡಗಿದ್ದ ಹಾರ್ಲೊಳನ್ನು ವೈದ್ಯರು ಸೂಕ್ಷ್ಮವಾಗಿ ತಪಾಸಣೆ ನಡೆಸಿದ ನಂತರ ಆಕೆ ರಕ್ತದ ಲವಣಾಂಶದಲ್ಲಿ ವಿಪರೀತ ವಿಷಕಾರಿ ಅಂಶಗಳು ಸೇರಿದ್ದು ಪತ್ತೆಯಾಗಿತ್ತು!
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಹಾರ್ಲೊ ಕೋಮಾಕ್ಕೆ ಜಾರಿದ್ದಳು. ಯಾವುದೇ ಚಿಕಿತ್ಸೆ ಫಲಕಾರಿಯಾಗದೇ 1937ರಲ್ಲಿ ತನ್ನ 26ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಳು..ಅದಕ್ಕೆ ಕಾರಣವಾಗಿದ್ದು ಚಿನ್ನದ ಬಣ್ಣದ ಕೂದಲು! ಹೌದು ಹಾಲಿವುಡ್ ನಲ್ಲಿ ಮಿಂಚಲು ಆಕೆಯ ಕೂದಲನ್ನು ಚಿನ್ನದ ಬಣ್ಣದ್ದಾಗಬೇಕು ಎಂದು ಒತ್ತಾಯಿಸಿದ್ದರಿಂದ ಆಕೆಯ ಚಿನ್ನದ ಬಣ್ಣದ ಕೂದಲಿನ ಬಾಂಬ್ ಶೆಲ್ ಎಂದೇ ಖ್ಯಾತಳಾಗಿದ್ದಳು. ಯಾವ ಬಣ್ಣ ನಟನೆಯಲ್ಲಿ ಉತ್ತುಂಗಗೇರಿಸಿತ್ತೋ ಅದೇ ಬಣ್ಣ ಆಕೆಯ ದುರಂತ ಸಾವಿಗೂ ಕಾರಣವಾಗಿಬಿಟ್ಟಿತ್ತು! ಈ ವಿಷಕಾರಿ ಬಣ್ಣದಿಂದಾಗಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದಳು,
ಆದರೆ ಆಕೆ ಎಂದೂ ತನ್ನ ಕೂದಲಿಗೆ ಡೈ ಹಾಕಿಸಿಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಹಾರ್ಲೊ ಸಾವಿನ ನಂತರ ಆಕೆಯ ಖಾಸಗಿ ಕೇಶ ವಿನ್ಯಾಸಕಾರ ಅಲ್ಫ್ರೆಡ್ ಪಾಗಾನೋ ನೀಡಿದ್ದ ಮಾಹಿತಿ ಆಘಾತಕಾರಿಯಾಗಿತ್ತು..ಹೌದು ಆಕೆ ಪ್ರತೀವಾರ ಕೂದಲು ಚಿನ್ನದ ಬಣ್ಣದಿಂದ ಹೊಳೆಯಲು ಪೆರೋಕ್ಸೈಡ್, ಅಮೋನಿಯಾ, ಕ್ಲೋರೋಕ್ಸ್, ಲುಕ್ಸ್ ಸೋಪ ಪ್ಲೇಕ್ಸ್ ಅನ್ನು ಬಳಸಲಾಗುತ್ತಿತ್ತು ಎಂಬುದಾಗಿ. ಇದರಿಂದಾಗಿ ಆಕೆಯ ನೈಜವಾದ ಕೂದಲ ಬಣ್ಣ ಹೊಳಪು ಕಳೆದುಕೊಂಡು ಬಿಟ್ಟಿತ್ತು. ಆ ಸಂದರ್ಭದಲ್ಲಿ ದೊಡ್ಡ ಮೊತ್ತದ ಬಹುಮಾನ ನೀಡುವ ಮೂಲಕ ಹಾರ್ಲೋ ಶೈಲಿಯ ಕೇಶ ವಿನ್ಯಾಸದ ಸ್ಪರ್ಧೆಯನ್ನು ಅಮೆರಿಕದಾದ್ಯಂತ ಏರ್ಪಡಿಸಲಾಗುತ್ತಿತ್ತಂತೆ.
ಆದರೂ ಆಕೆಯ ಸಾವು ನಿಗೂಢವಾಗಿತ್ತು..ಕೆಲವರ ಪ್ರಕಾರ ಆಕೆ ಕೇಶ ವಿನ್ಯಾಸಕ್ಕಾಗಿ ಉಪಯೋಗಿಸುತ್ತಿದ್ದ ಪ್ಲ್ಯಾಟಿನಂ ಹೇರ್ ಡಯ ಕಾರಣ ಎಂಬುದಾಗಿ ಹೇಳಿದರೆ, ಇನ್ನು ಕೆಲವು ವರದಿಯ ಪ್ರಕಾರ, ಹಾರ್ಲೊ ತಾಯಿ ಮಗಳಿಗೆ ಆಪರೇಶನ್ ಮಾಡುವುದಕ್ಕೆ ಅವಕಾಶ ನೀಡಲಿಲ್ಲ ಎಂಬುದಾಗಿ. ಅದಕ್ಕೆ ಕಾರಣ ತಾವು ಕ್ರಿಶ್ಚಿಯನ್ ಸಮುದಾಯವಾಗಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಮತ್ತೊಂದು ಕಾರಣ ಎನ್ನಲಾಗುತ್ತಿದೆ. ಅಂತೂ ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಟಿಯಾಗಿ ಅಷ್ಟೇ ವೇಗವಾಗಿ ಮಿಂಚಿ ಮರೆಯಾದ ಹಾರ್ಲೊ ಸಿನಿಮಾ ಇಂದಿಗೂ ಜನಪ್ರಿಯತೆ ಉಳಿಸಿಕೊಂಡಿದೆ.
Comments are closed.