ಕರ್ನಾಟಕ

ಮುಂಬರುವ ಲೋಕಸಭಾ ಚುನಾವಣೆ; ಕಾಂಗ್ರೆಸ್​ನ​ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!

Pinterest LinkedIn Tumblr


ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್​ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದ್ದು, ಪಕ್ಷದ ಮೂಲಗಳಿಂದ ಆ ಪಟ್ಟಿ ನ್ಯೂಸ್​ 18 ಕನ್ನಡಕ್ಕೆ ಲಭ್ಯವಾಗಿದೆ.

ವಿಧಾನಸಭೆಯ ಮೈತ್ರಿ ಲೋಕಸಭೆಯಲ್ಲೂ ಮುಂದುವರೆಯುವುದಾಗಿ ಈಗಾಗಲೇ ಎರಡು ಪಕ್ಷಗಳು ಘೋಷಣೆ ಮಾಡಿವೆ. ಆದರೆ, 28 ಕ್ಷೇತ್ರಗಳಲ್ಲಿ ಕಾಂಗ್ರೆಸ್​ 25 ಕ್ಷೇತ್ರಗಳಿಂದ ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಾಲಿ 9 ಸಂಸದರಿಗೆ ಬಹುತೇಕ ಸೀಟು ಖಚಿತವಾಗಿದೆ. ಅಚ್ಚರಿ ಅಂದರೆ ಜೆಡಿಎಸ್​ ಕನಿಷ್ಠ 10 ಸೀಟುಗಳಿಗೆ ಬೇಡಿಕೆ ಇಟ್ಟಿದೆ. ಆದರೆ, ಇಲ್ಲಿ 25 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ?
ಬೀದರ್ – ಈಶ್ವರ್ ಖಂಡ್ರೆ, ಇಬ್ರಾಹಿಂ, ವಿಜಯ್ ಸಿಂಗ್

Read Forbes, Maxim & 4000+ Magazines For Rs.999/Year
ಬಾಗಲಕೋಟೆ – ಬಾಯಕ್ಕ ಮೇಟಿ, ವೀಣಾ ಕಾಶಪ್ಪನವರ್
ವಿಜಯಪುರ-ರಾಜು ಅಲಗೂರು, ಪ್ರಕಾಶ್ ರಾಠೋಡ್
ಕೊಪ್ಪಳ-ಬಸನಗೌಡ ಬಾದರ್ಲಿ, ಬಸವರಾಜ್ ಹಿಟ್ನಾಳ್
ಬೆಳಗಾವಿ-ಅಂಜಲಿ ನಿಂಬಾಳ್ಕರ್, ಚನ್ನರಾಜ್ ಹೆಬ್ಬಾಳ್ಕರ್
ಧಾರವಾಡ- ವಿನಯ್ ಕುಲಕರ್ಣಿ, ಶಾಖಿರ್ ಸನದಿ
ಹಾವೇರಿ- ಬಸವರಾಜ್ ಶಿವಣ್ಣವರ, ಸಲೀಂ ಅಹಮದ್
ದಾವಣಗೆರೆ- ಎಸ್.ಎಸ್.ಮಲ್ಲಿಕಾರ್ಜುನ
ಉತ್ತರಕನ್ನಡ – ಪ್ರಶಾಂತ್ ದೇಶಪಾಂಡೆ, ನಿವೇದಿತ್ ಆಳ್ವಾ
ಉಡುಪಿ, ಚಿಕ್ಕಮಗಳೂರು- ಆರತಿ ಕೃಷ್ಣ, ವಿಜಯಕುಮಾರ್
ಮಂಗಳೂರು-ರಮಾನಾಥ ರೈ, ಐವಾನ್ ಡಿಸೋಜಾ
ಬೆಂಗಳೂರು ಕೇಂದ್ರ- ರಿಜ್ವಾನ್, ಹರಿಪ್ರಸಾದ್, ರೋಷನ್ ಬೇಗ್
ಬೆಂಗಳೂರು ದಕ್ಷಿಣ- ಪ್ರಿಯಕೃಷ್ಣ, ರಾಮಲಿಂಗಾರೆಡ್ಡಿ
ಬೆಂಗಳೂರು ಉತ್ತರ-ನಾರಾಯಣ ಸ್ವಾಮಿ, ಎಂ.ಆರ್.ಸೀತಾರಾಂ
ಮೈಸೂರು- ವಿಜಯ್ ಶಂಕರ್, ಸೂರಜ್ ಹೆಗ್ಡೆ
ಚಿಕ್ಕೋಡಿ- ಪ್ರಕಾಶ್ ಹುಕ್ಕೇರಿ
ಕಲಬುರಗಿ – ಮಲ್ಲಿಕಾರ್ಜುನ ಖರ್ಗೆ
ರಾಯಚೂರು – ಬಿ ವಿ ನಾಯಕ್
ಬಳ್ಳಾರಿ -ವಿ ಎಸ್ ಉಗ್ರಪ್ಪ
ಚಿತ್ರದುರ್ಗ- ಚಂದ್ರಪ್ಪ
ತುಮಕೂರು- ಮುದ್ದ ಹನುಮೇಗೌಡ
ಚಾಮರಾಜನಗರ – ಆರ್ ಧ್ರುವ ನಾರಾಯಣ್
ಚಿಕ್ಕಬಳ್ಳಾಪುರ -ಡಾ ಎಂ ವೀರಪ್ಪ ಮೊಯಿಲಿ
ಕೋಲಾರ- ಕೆ ಎಚ್ ಮುನಿಯಪ್ಪ
ಬೆಂಗಳೂರು ಗ್ರಾಮಾಂತರ – ಡಿ ಕೆ ಸುರೇಶ್

Comments are closed.