
ಮಂಡ್ಯ: “ನಟ ದರ್ಶನ್ ಮತ್ತು ಯಶ್ ನನ್ನ ಮನೆ ಮಕ್ಕಳು. ನಾನೇನೇ ಕೆಲಸ ಕೇಳಿದ್ರು ಯಾವುದೇ ಯೋಚನೆ ಮಾಡದಾಗೇ ಮಾಡ್ತಾರೇ. ಅದರಲ್ಲೂ ದರ್ಶನ್ ಮಾತ್ರ ನನ್ನ ದೊಡ್ಮಗ ಇದ್ದಂಗೆ, ನಿರೀಕ್ಷೆಗೂ ಮೀರಿ ನನ್ನ ಜೊತೆ ನಿಲ್ತಾನೇ. ಅಭಿಶೇಕ್ಗಿಂತ ಎರಡು ಪಟ್ಟು ನಿರೀಕ್ಷೆ ನನ್ನ ಮೇಲಿಡಿ ಎನ್ನುತ್ತಾನೇ ದರ್ಶನ್. ಹೀಗಾಗಿ ಇಬ್ಬರು ಕೂಡ ನನ್ನ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ” ಎಂದು ಸುಮಲತಾ ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಯಶ್ ಮತ್ತು ದರ್ಶನ್ ನಿಮ್ಮ ಪರವಾಗಿ ಪ್ರಚಾರ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ಅವರು, ಇಬ್ಬರು ನನ್ನ ಮನೆ ಮಕ್ಕಳು. ದರ್ಶನ್ ನನ್ನ ದೊಡ್ಮಗ ಇದ್ದಂಗೆ, ಅಭಿಶೇಕ್ಗಿಂದ ಹೆಚ್ಚು ಕೆಲಸ ಮಾಡುತ್ತಾನೇ. ದರ್ಶನ್ ನನ್ನ ಪರವಾಗಿಯೇ ನಿಲ್ಲುತ್ತಾನೇ ಎಂಬ ನಂಬಿಕೆಯಿದೆ ಎಂದು ಮಳವಳ್ಳಿಯಲ್ಲಿ ಸುದ್ದಿಗಾರರ ಜತೆ ಹೇಳಿದರು.
ಇನ್ನು ನಾನು ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಹಿಂದೆ ಯಾವುದೇ ಪಕ್ಷವಾಗಲೀ, ಅಧಿಕಾರವಾಗಲೀ ಇಲ್ಲ. ಜನರ ಬೆಂಬಲ ಜತೆಗೆ ಚುನಾವಣೆಗೆ ಹೋಗುತ್ತಿದ್ದೇನೆ. ಯಾರಿಗೂ ತೊಂದರೆ ನೀಡಬಾರದು ಎಂಬುದು ನನ್ನ ಉದ್ದೇಶ. ಹೀಗಾಗಿ ದರ್ಶನ್ ಮತ್ತು ಯಶ್ ಸೇರಿದಂತೆ ಯಾರೇ ಆಗಲಿ ಶೂಟಿಂಗ್ ಇಲ್ಲದ ಸಮಯ ನೋಡಿ ಪ್ರಚಾರಕ್ಕೆ ಕರೆಸಿಕೊಳ್ಳುತ್ತೇನೆ ಎಂದರು.
ಈಗಾಗಲೇ ಮಂಡ್ಯ ಜನರ ಬಳಿ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇನೆ. ಚಿತ್ರರಂಗದಲ್ಲಿ ಅಂಬರೀಶ್ ಅವರ ಮೇಲೆ ಅಪಾರ ಗೌರವ ಇದೆ. ಅವರ ಮೇಲಿನ ಗೌರವವನ್ನು ಯಾರು ಬೀಳಿಸೋಕೆ ಆಗಲ್ಲ. ಸಿನಿಮಾ ರಂಗದ ಎಲ್ಲರ ಜತೆಗೆ ಚರ್ಚೆ ಮಾಡುತ್ತೇನೆ. ಬಳಿಕ ಒಳ್ಳೆಯ ರೀತಿಯಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ಪರವಾಗಿ ದರ್ಶನ್ ಮತ್ತು ಯಶ್ ಪ್ರಚಾರ ಮಾಡಲಿದ್ದಾರೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.
ಮಂಡ್ಯದಲ್ಲೀಗ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಅತ್ತ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರು ಅಂತಿಮವಾಗಿದೆ. ಇತ್ತ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ನಿಂದ ಟಿಕೆಟ್ಗಾಗಿ ಕಾಯುತ್ತಿದ್ದರೂ ಸ್ಪರ್ಧೆ ಮಾತ್ರ ಖಚಿತ ಎನ್ನಲಾಗುತ್ತಿದೆ. ಈ ಹಿಂದೆಯೇ ತಾನು ಮಂಡ್ಯದ ಜನತೆ ಇಚ್ಚೆಯಂತೆಯೇ ಕಣಕ್ಕಿಳಿಯುವುದಾಗಿ ಹೇಳಿದ್ದರು. ಇದೀಗ ಮತ್ತೆ ಸ್ಪರ್ಧೆಗೆ ಸಿದ್ದ ಎಂದಿರುವ ಸುಮಲತಾ ಅವರು, ಚುನಾವಣಾ ಪ್ರಚಾರಕ್ಕಿಳಿದಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇವರ ನಿರ್ಧಾರಕ್ಕೆ ಅಪಾರ ಜನ ಬೆಂಬಲ ಸಿಗುತ್ತಿದೆ.
Comments are closed.