ರಾಷ್ಟ್ರೀಯ

ಉಚ್ಛ ನ್ಯಾಯಾಲಯದ ವಿರುದ್ಧವೇ ಟೀಕೆ ಮಾಡಿ ಟ್ವೀಟ್‌ ಮಾಡಿದ್ದು ನಿಜಕ್ಕೂ ತಪ್ಪು: ಸುಪ್ರೀಂನಲ್ಲಿ ಪ್ರಶಾಂತ್‌ ಭೂಷಣ್‌ ಹೇಳಿಕೆ

Pinterest LinkedIn Tumblr

ಹೊಸದಿಲ್ಲಿ: ಸಿಬಿಐ ಮಧ್ಯಂತರ ನಿರ್ದೇಶಕರಾಗಿ ನಾಗೇಶ್ವರ ರಾವ್‌ ನೇಮಕ ಸಂದರ್ಭದಲ್ಲಿ ಟ್ವೀಟ್‌ ಮಾಡಿದ್ದು ತಪ್ಪು ಎಂದು ವಕೀಲ ಪ್ರಶಾಂತ್ ಭೂಷಣ್‌ ಹೇಳಿದ್ದಾರೆ.

ಉಚ್ಛ ನ್ಯಾಯಾಲಯದ ವಿರುದ್ಧವೇ ಟೀಕೆ ಮಾಡಿ ಟ್ವೀಟ್‌ ಮಾಡಿದ್ದು ನಿಜಕ್ಕೂ ತಪ್ಪು ಎಂದು ಪ್ರಶಾಂತ್ ಭೂಷಣ್‌ ಹೇಳಿಕೊಂಡಿದ್ದಾರೆ.

ನಿಂದನಾತ್ಮಕ ಟ್ವೀಟ್‌ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿತ್ತು.

ಪ್ರಶಾಂತ್‌ ಭೂಷಣ್‌ ಸರಕಾರದ ವಿರುದ್ಧ ಸುಳ್ಳು, ತಿರುಚಿದ ದಾಖಲೆಗಳನ್ನು ನೀಡುತ್ತಿದ್ದಾರೆ ಎಂದು ಕೇಂದ್ರ ಸರಕಾರ ಪ್ರಕರಣ ದಾಖಲಿಸಿತ್ತು.

ಈ ಹೇಳಿಕೆ ತಪ್ಪು ಎಂದು ಪ್ರಶಾಂತ್‌ ಭೂಷನ್‌ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಪ್ರಕರಣವನ್ನು ಹಿಂಪಡೆಯುವುದಾಗಿ ಕೋರ್ಟ್‌ಗೆ ತಿಳಿಸಿದ್ದಾರೆ.

ಅಲ್ಲದೇ ಯಾವುದೇ ಕಾರಣಕ್ಕೂ ಕ್ಷಮೆ ಕೋರುವುದಿಲ್ಲ ಎಂದು ಪ್ರಶಾಂತ್‌ ಭೂಷಣ್‌ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 3ಕ್ಕೆ ಮುಂದೂಡಲಾಗಿದೆ.

Comments are closed.