ಮನೋರಂಜನೆ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಬರ್ತ್ ಡೇಗೆ ಬಾಹುಬಲಿ ವಿಶ್

Pinterest LinkedIn Tumblr


ಹೈದರಾಬಾದ್: ಬಾಲಿವುಡ್ ಅಂಗಳದ ಆಶಿಕಿ ಬೆಡಗಿ ಶ್ರದ್ಧಾ ಕಪೂರ್ ಇಂದು ತಮ್ಮ 32ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಟಾಲಿವುಡ್ ಚೆಲುವ ಪ್ರಭಾಸ್ ನಟಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದ ಶೈಲಿಗೆ ಬಾಹುಬಲಿಯ ಅಭಿಮಾನಿಗಳು ಮಾತ್ರ ಫುಲ್ ಖುಷ್ ಆಗಿದ್ದಾರೆ.

ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಸಾಹೋ ಚಿತ್ರದ ನಟಿಯಾಗಿರುವ ಶ್ರದ್ಧಾ ಕಪೂರ್ ಬರ್ತ್ ಡೇ ಶುಭಕೋರಿ, ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ನಿರೀಕ್ಷೆ ಹುಟ್ಟುಹಾಕಿರುವ ಸಾಹೋದ ಸಣ್ಣ ಝಲಕ್ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಚಿತ್ರದ ಆ್ಯಕ್ಷನ್ ಧಮಾಕಾದ ಜೊತೆಗೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಾಹೋ ಚಿತ್ರತಂಡ ಹಬ್ಬದೂಟವನ್ನೇ ನೀಡಿದೆ.

ಸಾಹೋ ಸಿನಿಮಾದಲ್ಲಿ ಪ್ರಭಾಸ್ ಗೆ ಜೊತೆಯಾಗಿ ಶ್ರದ್ಧಾಕಪೂರ್ ನಟಿಸುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಕಥೆಯನ್ನು ಒಳಗೊಂಡಿರುವ ಸಾಹೋ ಇದೇ ಆಗಸ್ಟ್ 15ರಂದು ತೆರೆಕಾಣಲಿದೆ. 300 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಸುಜೀತ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

Comments are closed.