ಬೆಂಗಳೂರು: ಪಕ್ಕಾ ಫ್ಯಾಮಿಲಿ ಚಿತ್ರ ಪಡ್ಡೆಹುಲಿಯ ಟ್ರೈಲರ್ ದಾಸ ದರ್ಶನ್ ಅವರಿಂದ ಅನಾವರಣವಾಗಿದೆ. ಯಂಗ್ ಟೈಗರ್ ಶ್ರೇಯಸ್ ಮಂಜು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮನೆದೇವ್ರು ಚಿತ್ರದಲ್ಲಿ ಕನ್ನಡಿಗರ ಮನಗೆದ್ದಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಧಾರಾಣಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಫೆ. 26 ರಂದು ಸಂಜೆ 6 ಗಂಟೆಗೆ ಬಿಡುಗಡೆಯಾದ ಟ್ರೈಲರ್ ಗೆ ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಗುರು ದೇಶಪಾಂಡೆ ನಿರ್ದೇಶನದಲ್ಲಿ ಹುಲಿ ಮೂಡಿಬರುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್‌ನ ಪಿಆರ್‌ಕೆ ಆಡಿಯೋದ ಮೂಲಕ ಹಾಡು ಲಾಂಚ್ ಮಾಡಲಾಗಿದ್ದು ಪುನೀತ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಶರಣ್ ಸೇರಿದಂತೆ ಅನೇಕರು ಶ್ರೇಯಸ್‌ಗೆ ಶುಭ ಕೋರಿದ್ದರು. ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿತ್ತು. ಪ್ರೇಮಿಗಳ ದಿನದಂದು ಹಾಡೊಂದನ್ನು ಬಿಡುಗಡೆ ಮಾಡಲಾಗಿತ್ತು.
Comments are closed.