ಕರ್ನಾಟಕ

ಕಾಂಗ್ರೆಸ್ ಸಹ ಸರ್ಜಿಕಲ್ ದಾಳಿ ಮಾಡಿತ್ತು: ರಾಯಚೂರು ಸಂಸದ ಬಿ.ವಿ. ನಾಯಕ್

Pinterest LinkedIn Tumblr


ಯಾದಗಿರಿ: ಸರ್ಜಿಕಲ್ ಸ್ಟ್ರೈಕ್ ಹೊಸದಲ್ಲ. ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಪ್ರಚಾರ ಪಡೆಯುತ್ತಿದೆ. ಚುನಾವಣೆಯ ಈ ಸಂದರ್ಭದಲ್ಲಿ ಸೇನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ರಾಯಚೂರು ಸಂಸದ ಬಿ.ವಿ. ನಾಯಕ್ ವಿವಾದ ಎಬ್ಬಿಸುವ ಹೇಳಿಕೆ ನೀಡಿದ್ದಾರೆ.

ದೇಶದ ಆಂತರಿಕ ರಕ್ಷಣೆ ಸಂದರ್ಭದಲ್ಲಿ ಇಂತಹ ಪ್ರಕ್ರಿಯೆಗಳು ಸಹಜ. ಈ ಹಿಂದೆಯೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಇಂತಹ ದಾಳಿ ನಡೆಸಿತ್ತು, ಆದರೆ ಪ್ರಚಾರ ಮಾಡಲಿಲ್ಲ., ಸದ್ಯ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕೋಸ್ಕರ ದಾಳಿಯ ಪ್ರಚಾರ ಪಡೆಯುತ್ತಿದೆ ಎಂದಿದ್ದಾರೆ.

ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಳ್ಳಲು ಯಾದಗಿರಿಗೆ ಆಗಮಿಸಿದ ಕಾಂಗ್ರೆಸ್ ಸಂಸದರು ಇಂಥ ಹೇಳಿಕೆ ನೀಡಿದ್ದಾರೆ.

Comments are closed.