ಮನೋರಂಜನೆ

ಸಂಜಯ್ ದತ್ ನಂತರ ಕೆಜಿಎಫ್ ಚಿತ್ರತಂಡ ಸೇರಲಿರುವ ಬಾಲಿವುಡ್ ಬೆಡಗಿ

Pinterest LinkedIn Tumblr

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ್ದ ಕನ್ನಡ ಸಿನಿಮಾ ಕೆಜಿಎಫ್ ಸಕ್ಸಸ್ ಬೆನ್ನಲ್ಲೇ ಚಾಪ್ಚರ್ 2ಗಾಗಿ ಭಾರಿ ಕುತೂಹಲ ಕೆರಳಿಸಿದ್ದು, ಇತ್ತೀಚೆಗಷ್ಟೇ ಚಿತ್ರತಂಡಕ್ಕೆ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಸೇರ್ಪಡೆಯಾಗಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಬಾಲಿವುಡ್ ಮತ್ತೋರ್ವ ಬೆಡಗಿ ಕೆಜಿಎಫ್ ತಂಡಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಹೌದು, ‘ಕೆಜಿಎಫ್’ ಚಾಪ್ಟರ್ 1 ಅಭೂತ ಪೂರ್ವ ಯಶಸ್ಸಿನ ಬಳಿಕ ಚಾಪ್ಟರ್ 2ಗಾಗಿ ಭಾರತದ ಎಲ್ಲ ಚಿತ್ರೋದ್ಯಮವೂ ಅಚ್ಚರಿಯ ಕಣ್ಣಿನಿಂದ ನೋಡುತ್ತಿದೆ. ಇನ್ನೇನು ಸದ್ಯದಲ್ಲಿ ‘ಕೆಜಿಎಫ್ ಚಾಪ್ಟರ್-2’ ಶುರುವಾಗಲಿದೆ. ಈಗಾಗಲೇ ‘ಕೆಜಿಎಫ್’ ಚಿತ್ರತಂಡವು ಇದರ ಸೀಕ್ವೆಲ್ ‘ಕೆಜಿಎಫ್-2’ ಪ್ರಾರಂಭವಾಗಲಿದೆ ಎಂದು ಅಧೀಕೃತವಾಗಿ ಘೋಷಿಸಿದೆ. ಬರುವ ಏಪ್ರಿಲ್ ತಿಂಗಳಿನಿಂದ ‘ಕೆಜಿಎಫ್-2’ ಚಿತ್ರೀಕರಣ ಪ್ರಾರಂಭವಾಗಲಿದ್ದು ಈಗ ಚಿತ್ರದ ‘ಸ್ಕ್ರಿಪ್ಟ್ ವರ್ಕ್’ ಮತ್ತು ‘ಪ್ರೀ-ಪ್ರೊಡಕ್ಷನ್’ ಕೆಲಸಗಳು ನಡೆಯುತ್ತಿವೆ.
ಇತ್ತೀಚೆಗಷ್ಟೇ ಕೆಜಿಎಫ್ 2ಗಾಗಿ ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಅವರನ್ನು ಅಧೀರ ಪಾತ್ರಕ್ಕೆ ಕರೆ ತರುವ ಕುರಿತು ಚಿತ್ರತಂಡದಿಂದ ಮಾಹಿತಿ ಹೊರ ಬಿದ್ದಿತ್ತು. ಇದೀಗ ಹೊಸ ಸುದ್ದಿಯೊಂದು ‘ಕೆಜಿಎಫ್’ ಪಾಳಯದಿಂದ ತೇಲಿ ಬಂದಿದೆ. ಬಾಲಿವುಡ್ ಬೆಡಗಿ, ಒಂದಾನೊಂದು ಕಾಲದ ಬಾಲಿವುಡ್ ಸ್ಟಾರ್ ನಟಿ ರವೀನಾ ಟಂಡನ್, ‘ಕೆಜಿಎಫ್ ಚಾಪ್ಟರ್-2’ ದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಉಪೇಂದ್ರ ನಿರ್ದೇಶನ ಮತ್ತು ನಾಯಕತ್ವದ ‘ಉಪೇಂದ್ರ’ ಚಿತ್ರದಲ್ಲಿ ನಟಿಸಿ ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ‘ಮಸ್ತ್ ಮಸ್ತ್ ಹುಡುಗಿ ಬಂದ್ಲು’ ಎಂಬ ಹಾಡಿನ ಮೂಲಕ ಪರಿಚಿತರಾಗಿರುವ ನಟಿ ರವೀನಾ ಟಂಡನ್ ಇದೀಗ ಕೆಜಿಎಫ್ ಚಾಪ್ಟರ್ 2ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರವೀನಾ ಟಂಡನ್ ಈಗಾಗಲೇ ಬಿಡುಗಡೆಯಾಗಿ ದಾಖಲೆ ಸ್ಥಾಪಿಸಿ ಕನ್ನಡ ಚಿತ್ರರಂಗವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದಿರುವ ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ವಿತರಕರಾಗಿರುವ ಅನಿಲ್ ತಡಾನಿ ಅವರ ಪತ್ನಿ ಕೂಡ ಆಗಿದ್ದಾರೆ.
ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ‘ಕೆಜಿಎಫ್-2’ ಚಿತ್ರದಲ್ಲಿ ನಟಿಸಲು ಚಿತ್ರತಂಡಕ್ಕೆ ‘ಗ್ರೀನ್ ಸಿಗ್ನಲ್’ ಕೊಟ್ಟಾಗಿದೆ. ಕೆಜಿಎಫ್ ಚಾಪ್ಟರ್ 1 ಯಶಸ್ಸು ಮತ್ತು ಚಿತ್ರ ಕಥೆ ರವೀನಾ ಅವರ ಮನಸೂರೆ ಗೊಂಡಿದ್ದು, ಈ ಹಿಂದೆ ಚಿತ್ರದ ಯಶಸ್ಸಿನ ಕುರಿತು ರವೀನಾ ಟ್ವೀಟ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದರು.

Comments are closed.