ಅಂತರಾಷ್ಟ್ರೀಯ

ಜೈಶ್-ಇ-ಮೊಹಮ್ಮದ್ ಕಚೇರಿ ವಶಕ್ಕೆ: ಒಂದೇ ದಿನದಲ್ಲಿ ಉಲ್ಟಾ ಹೊಡೆದ ಪಾಕ್

Pinterest LinkedIn Tumblr


ಲಾಹೋರ್: 40 ಸಿಆರ್ ಪಿಎಫ್ ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಯ ಹೊಣೆ ಹೊತ್ತಿದ್ದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯನ್ನು ವಶಕ್ಕೆ ತೆಗೆದುಕೊಂಡಿರುವುದರ ಬಗ್ಗೆ ಪಾಕಿಸ್ತಾನ ಸಂಪೂರ್ಣ ಉಲ್ಟಾ ಹೊಡೆದಿದೆ.

ಬಹಾವಲ್​ಪುರ್​ದಲ್ಲಿರುವ ಜೆಇಎಂ ಪ್ರಧಾನ ಕಚೇರಿಯನ್ನು ಪಂಜಾಬ್ ಸರ್ಕಾರ ವಶಕ್ಕೆ ಪಡೆದಿದೆ ಎಂದು ಪಾಕಿಸ್ತಾನ ಮಾಹಿತಿ ಸಚಿವ ಫವದ್ ಚೌಧರಿ ಅವರು ಹೇಳಿದ್ದರು. ಆದರೆ ಈಗ ಅದೇ ಸಚಿವ ಉಲ್ಟಾ ಹೊಡೆದಿದ್ದು, ನಾವು ವಶಕ್ಕೆ ಪಡೆದಿದ್ದು ಮದರಸಾವನ್ನು ಆದರೆ ಭಾರತ ಅದನ್ನು ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯ ಕಚೇರಿ ಎಂದು ಪ್ರಚಾರ ಮಾಡುತ್ತಿದೆ ಎಂದು ಭಾರತದ ವಿರುದ್ಧವೇ ಆರೋಪ ಮಾಡಿದ್ದಾರೆ.
ಬಹಾವಲ್​ಪುರ್​ದಲ್ಲಿರುವ ಮದ್ರೆಸ್ಸಾತುಲ್ ಸಬೀರ್ ಮತ್ತು ಜಾಮಾ ಮಸ್ಜಿದ್ ಸುಭಾನಲ್ಲಾ ಸಂಸ್ಥೆಗಳನ್ನು ರಾಷ್ಟ್ರೀಯ ಕಾರ್ಯಸೂಚಿ ಯೋಜನೆಯಡಿಯಲ್ಲಿ ವಶಕ್ಕೆ ಪಡೆದುಕೊಳ್ಳಲು ರಾಷ್ಟ್ರೀಯ ಭದ್ರತಾ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಮದರಸಾವನ್ನು ವಶಕ್ಕೆ ಪಡೆದಿದ್ದೇವೆ, ಆದರೆ ಭಾರತ ಅದನ್ನು ಜೈಶ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯ ಕಚೇರಿ ಎಂದು ಪ್ರಚಾರ ಮಾಡುತ್ತಿದೆ ಎಂದು ಪಾಕ್ ಸಚಿವ ಚೌಧರಿ ಆರೋಪಿಸಿದ್ದಾರೆ.
ಆದರೆ ಫೆ.22 ರಂದು ವಶಕ್ಕೆ ಪಡೆದು ಆಡಳಿತಾಧಿಕಾರಿಯನ್ನು ನೇಮಕ ಮಾಡಿದ್ದು, ಜೈಶ್-ಇ-ಮೊಹಮ್ಮದ್ ನ ಉಗ್ರ ಸಂಘಟನೆಯ ಕಚೇರಿಯನ್ನು ಎಂದು ಪಾಕಿಸ್ತಾನದ ಸರ್ಕಾರವೇ ಅಧಿಕೃತವಾಗಿ ಹೇಳಿಕೊಂಡಿತ್ತು. ಈಗ ಮತ್ತೆ ಉಲ್ಟಾ ಹೊಡೆದಿದ್ದು ತಾನು ವಶಕ್ಕೆ ಪಡೆದಿದ್ದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಕಚೇರಿಯನ್ನಲ್ಲ ಎಂದು ಹೇಳಿದೆ.

Comments are closed.