ಮನೋರಂಜನೆ

ನಟ ರವಿಚಂದ್ರನ್ ಅಭಿಮಾನಿಗಳೊಂದಿಗೆ ದರ್ಶನ್ ಸಂಭ್ರಮ!

Pinterest LinkedIn Tumblr


ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ದಶರಥ’ ಸಿನಿಮಾದ ಹಾಡೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಂಠದಲ್ಲಿ ಬರಲಿದೆ. ಈ ಮೂಲಕ ಕ್ರೇಜಿಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಅಂಗಳದಲ್ಲಿ ಸಂಭ್ರಮ ಮನೆ ಮಾಡಿದೆ.

ದರ್ಶನ್ ಹಾಡಲು ನಿರಾಕರಿಸಿದ್ದರಂತೆ. ಕೊನೆಗೆ ಚಿತ್ರತಂಡದ ಒತ್ತಾಯದ ಮೇರೆಗೆ ಹಾಡಿನ ಸಾಹಿತ್ಯವನ್ನು ದರ್ಶನ್ ತಮ್ಮದೇ ಶೈಲಿಯಲ್ಲಿ ಓದಿದ್ದಾರೆ. ಇದೇ ಧ್ವನಿಯನ್ನು ಚಿತ್ರದ ನಾಯಕನನ್ನು ಪರಿಚಯಿಸುವಾಗ ಬಳಸಲಾಗಿದೆ. ದರ್ಶನ್ ಹಾಡಿಗೆ ರವಿಚಂದ್ರನ್ ಸಹ ಸ್ಟೆಪ್ಸ್ ಹಾಕಿದ್ದು ತೆರೆಯ ಮೇಲೆ ಹೇಗೆ ಬರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ದರ್ಶನ್ ಅವರ ಧ್ವನಿಯನ್ನು ಸ್ಟುಡಿಯೋದಲ್ಲಿ ಹಾಡುಗಳ ಜೊತೆ ಮಿಕ್ಸ್ ಮಾಡಲಾಗಿದೆ. ಹಾಗಾಗಿ ದರ್ಶನ್ ಕಂಠದಲ್ಲಿ ಬರುವ ಹಾಡು ಕೇಳಲು ಡಿ ಬಾಸ್ ಫ್ಯಾನ್ಸ್ ಕಾಯುತ್ತಿದ್ದಾರೆ. ದರ್ಶನ್ ಅವರ ಧ್ವನಿಯನ್ನು ಚಿತ್ರದ ಆರಂಭ ಮತ್ತು ಕ್ಲೈಮ್ಯಾಕ್ಸ್ ನಲ್ಲಿ ಸರ್ಪ್ರೈಸ್ ಆಗಿ ಬಳಸಲಾಗಿದೆ ಎಂದು ನಿರ್ದೇಶಕ ರಮೇಶ್ ಹೇಳಿದ್ದಾರೆ.

ರವಿಚಂದ್ರನ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಅಭಿನಯದ ‘ಚಂದು’ ಸಿನ್ಮಾದಲ್ಲಿ ನಟಿಸಿದ್ದ ಸೋನು ಅಗರ್ವಾಲ್ ಚಂದನವನಕ್ಕೆ ಕಮ್‍ಬ್ಯಾಕ್ ಮಾಡಿದ್ದಾರೆ. ರಂಗಾಯಣ ರಘು, ಪ್ರಿಯಾಮಣಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರ ಹೊಂದಿದೆ.

Comments are closed.