ಮನೋರಂಜನೆ

ರಣ್‍ವೀರ್ ಗೆ ಕಣ್ಣು ಹೊಡೆದ ಸನ್ನಿ ಲಿಯೋನ್

Pinterest LinkedIn Tumblr


ಮುಂಬೈ: ಬಾಲಿವುಡ್ ಅಂಗಳದ ಮಾದಕ ಬೆಡಗಿ ಸನ್ನಿಲಿಯೋನ್ ಪತಿ ಡೇನಿಯಲ್ ವೇಬರ್ ಜೊತೆ ಸೇರಿ ನಟ ರಣ್‍ವೀರ್ ಸಿಂಗ್‍ಗೆ ಕಣ್ಣು ಹೊಡೆದಿದ್ದಾರೆ.

ಒಂದು ಸಿನಿಮಾ ಅಥವಾ ಹಾಡು ಜನಪ್ರಿಯಗೊಂಡಾಗ ಅದನ್ನು ಅನುಕರಿಸುವುದು ಮತ್ತು ಡಬ್‍ಮ್ಯಾಶ್ ಮಾಡೋದು ಟ್ರೆಂಡ್. ಇತ್ತೀಚೆಗೆ ರಣ್‍ವೀರ್ ಸಿಂಗ್ ಮತ್ತ ಸಾರಾ ಅಲಿಖಾನ್ ಅಭಿನಯದ ಸಿಂಬಾ ಸಿನಿಮಾ ತೆರೆಕಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಆಂಕ್ ಮಾರೇ ಹಾಡು ಸಹ ಹಿಟ್ ಆಗಿದ್ದು, ಜನರು ಡಬ್‍ಮ್ಯಾಶ್ ಮಾಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಸನ್ನಿ ಲಿಯೋನ್ ಸಹ ಪತಿ ಡೇನಿಯಲ್ ವೇಬರ್ ಜೊತೆ ಈ ಹಾಡಿಗೆ ಹೆಜ್ಜೆ ಹಾಕಿ ಇನ್ಸ್ಟಾದಲ್ಲಿ ಹಾಕಿಕೊಂಡಿದ್ದಾರೆ.

ಇನ್ಸ್ಟಾದಲ್ಲಿ 1.8 ಕೋಟಿ ಫಾಲೋವರ್ಸ್ ಆದ ಖುಷಿಯಲ್ಲಿ ಸನ್ನಿ ಹೆಜ್ಜೆ ಹಾಕುವ ಮೂಲಕ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತೋಟದಲ್ಲಿ ಸನ್ನಿ ಮತ್ತು ಡೇನಿಯಲ್ ಹೆಜ್ಜೆ ಹಾಕಿರುವ ವಿಡಿಯೋ ಇದೂವರೆಗೂ 20 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ

ಸಿಂಬಾ ಚಿತ್ರದ ಈ ಹಾಡು ಇದೂವರೆಗೂ 32 ಕೋಟಿಗೂ ಅಧಿಕ ಬಾರಿ ವ್ಯೂ ಪಡೆದುಕೊಂಡಿದೆ. ಹಾಡು ತುಂಬಾನೇ ವಿಭಿನ್ನವಾಗಿದ್ದು, ತನಿಷ್ಕ್ ಬಗ್ಚಿ, ಮಿಕಾ, ನೇಹಾ ಕಕ್ಕರ್ ಮತ್ತು ಕುಮಾರ್ ಸಾನು ಹಾಡಿಗೆ ಧ್ವನಿ ನೀಡಿದ್ದಾರೆ. ಮೊದಲ ಬಾರಿಗೆ ಸಾರಾ ಮತ್ತು ರಣ್‍ವೀರ್ ಜೊತೆಯಾಗಿದ್ದು, ತೆರೆಯ ಮೇಲೆ ಇಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗಿದ್ದು, ನೋಡುಗರು ಫಿದಾ ಆಗಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಕರಣ್ ಜೋಹರ್ ಮಾಲೀಕತ್ವದ ಧರ್ಮ ಪ್ರೊಡಕ್ಷನ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಭಿನಯದ ಎರಡನೇ ಚಿತ್ರ ಇದಾಗಿದ್ದು, ತಮ್ಮ ನಟನೆಯ ಮೂಲಕ ಬಾಲಿವುಡ್ ಅಂಗಳದಲ್ಲಿ ಭರವಸೆ ಮೂಡಿಸಿದ್ದಾರೆ. ಇದಕ್ಕೂ ಮೊದಲು ತೆರೆಕಂಡಿದ್ದ ಕೇದಾರನಾಥ್ ಸಿನಿಮಾ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Comments are closed.