ಮನೋರಂಜನೆ

ತೆರಿಗೆ ಇಲಾಖೆ ದಾಳಿ ಅಂತ್ಯ: ನಟ ಯಶ್ ಮೊದಲ ಪ್ರತಿಕ್ರಿಯೆ

Pinterest LinkedIn Tumblr


ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಮನೆಯಲ್ಲಿ ಬರೋಬ್ಬರಿ 40 ಗಂಟೆ ನಡೆದಿದ್ದ ಐಟಿ ರೇಡ್ ಈಗ ಅಂತ್ಯವಾಗಿದೆ. ದಾಳಿಯ ಬಳಿಕ ಯಶ್ ಮಾಧ್ಯಮಗಳೊಂದಿಗೆ ಮಾತನಾಡಿ, ಐಟಿ ಅಧಿಕಾರಿಗಳು ನಿರ್ಮಾಪಕ ವಿಜಯ್ ಕಿರಂಗದೂರ್ ಮತ್ತು ತಿಮ್ಮೇಗೌಡ ಮನೆ ಮೇಲೆ ದಾಳಿ ಮಾಡಿದ್ದಾರೆ. ಹಾಗಂತ ಇದು ಕೆಜಿಎಫ್ ಚಿತ್ರಕ್ಕೆ ಸಂಬಂಧಪಟ್ಟಿದ್ದಲ್ಲ. ಎರಡು ದಿನ ಮನೆಯಲ್ಲೇ ಇರಬೇಕಾಗಿದ್ದರಿಂದ ರಾಧಿಕಾ ಮತ್ತೆ ಮಗುವನ್ನು ನನಗೆ ಬಿಟ್ಟು ಇರಲು ಕಷ್ಟವಾಯಿತು. ಅಲ್ಲದೇ ಮಗುವಿಗೆ ಸ್ನಾನ ಮಾಡಿಸಬೇಕೆಂದು ಅಮ್ಮ ಚಿಂತೆಯಲ್ಲಿದ್ದರು. ಐಟಿ ಅಧಿಕಾರಿಗಳು ಅವರ ಕರ್ತವ್ಯ ಮಾಡಿದ್ದಾರೆ. ನಾವು ಕೂಡ ನಮ್ಮ ಕೆಲಸವನ್ನು ಮಾಡಿದ್ದೇವೆ ಎಂದರು.

ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ನಡೆದಿದೆ. ಇದು ಹೊಸ ವಿಚಾರ. ನಮಗೂ ಅರ್ಥ ಮಾಡಿಕೊಳ್ಳುವುದು ಇರುತ್ತೆ, ಅಧಿಕಾರಿಗಳು ಅವರ ಪ್ರೋಸಿಜರ್ ಮಾಡಿದ್ದಾರೆ. ಕೆಲವು ಉಹಾಪೋಹಾಗಳನ್ನು ಮಾಡಬೇಡಿ. ಕೆಲವರು ಇಂತಹ ಅವಕಾಶಕ್ಕಾಗಿ ಕಾಯುಕೊಂಡು ಇರುತ್ತಾರೆ. ಊಹಾಪೋಹಗಳ ಮೇಲೆ ಕೆಲ ಮಾಧ್ಯಮಗಳು ವರದಿ ಬಿತ್ತರಿಸಿವೆ ಎಂದು ಅಸಮಾಧಾನ ಹೊರಹಾಕಿದರು.

ಐಟಿ ದಾಳಿ ಅಂತ್ಯವಾದ ಬಳಿಕ ಪತ್ನಿ ಮತ್ತು ಮಗಳ ಜೊತೆಗೆ ಕೆಲ ಸಮಯ ಕಳೆದು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸಿರುವ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹುಬ್ಬಳ್ಳಿಗೆ ತೆರೆಳಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.