ಮನೋರಂಜನೆ

ಯಶ್ ಬಗ್ಗೆ ಕೆಜಿಎಫ್ ರೌಡಿಗಳ ಖಡಕ್ ಮಾತು

Pinterest LinkedIn Tumblr


ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ಭಾರತದಾದ್ಯಂತ ಚಂದನವನದ ಬಗ್ಗೆ ಮಾತನಾಡುವಂತೆ ಮಾಡಿದೆ. ಅಷ್ಟರ ಮಟ್ಟಿಗೆ ಕನ್ನಡ ಸಿನಿಮಾವನ್ನು ಒಂದು ಹಂತಕ್ಕೆ ಕೆಜಿಎಫ್ ಸಿನಿಮಾ ತೆಗೆದುಕೊಂಡು ಹೋಗಿದೆ. ಕೆಜಿಎಫ್ ಸಿನಿಮಾದಲ್ಲಿ ನಟರಾಗಿ ಮಿಂಚಿದ್ದ ಯಶ್ ಬಗ್ಗೆ ಅದೇ ಸಿನಿಮಾ ಖಳನಾಯಕರಾದ ವಶಿಷ್ಠ ಸಿಂಹ, ವಿನಯ್, ರಾಮ್, ಲಕ್ಕಿ ಮತ್ತು ಅವಿನಾಶ್ ಮಾತನಾಡಿದ್ದಾರೆ.

ಯಶ್ ಬಗ್ಗೆ ವಶಿಷ್ಠ ಅವರ ಮಾತು:
ರಾಜಾಹುಲಿ ಸಿನಿಮಾ ರಿಲೀಸ್ ಆದ ಮೇಲೆ ನನಗೆ ಸಿನಿಮಾ ಇಂಡಸ್ಟ್ರೀ ಬಗ್ಗೆ ಏನು ಗೊತ್ತಿರಲಿಲ್ಲ. ಅಂದು ರಾಜಾಹುಲಿ ಸಿನಿಮಾ ತುಂಬಾ ಹಿಟ್, ಅದ್ಭುತವಾಗಿತ್ತು. ಬಳಿಕ ನನಗೆ ಚಿಕ್ಕಣ್ಣ ಕರೆ ಮಾಡಿ ಯಶ್ ಮಾತನಾಡುತ್ತಾರೆ ಎಂದು ಅವರ ಕೈಯಲ್ಲಿ ಫೋನ್ ಕೊಟ್ಟರು. ನಾನು ಯಶ್ ಹೇಳಿ ಎಂದೆ, ಆಗ ಅವರು ವಶಿಷ್ಠ ತಾಳ್ಮೆಯಿಂದ ಇರು. ನಿನಗೆ ಸಾಕಷ್ಟು ಫೋನ್‍ಗಳು ಮತ್ತು ಸಿನಿಮಾ ಆಫರ್ ಗಳು ಬರುತ್ತವೆ. ಆದರೆ ನೀನು ದುಡುಕಬೇಡ. ಟ್ಯಾಲೆಂಟ್ ಇರುವವರು ಮತ್ತು ಈ ರೀತಿ ಕಾಣಿಸಿಕೊಂಡು ಮುಖ ಪರಿಯಚವಾದರು ಸಿಗಲಿ ಎಂದು ಸಾಕಷ್ಟು ಜನರು ಕಾಯುತ್ತಿರುತ್ತಾರೆ. ಆದರೆ ನೀನು ಜೀವನದಲ್ಲಿ ಏನು ಮಾಡಬೇಕು ಅಂದುಕೊಂಡಿದ್ದೀಯಾ ಅದನ್ನು ನಿರ್ಧಿಷ್ಟವಾಗಿ ಪ್ಲಾನ್ ಮಾಡಿಕೊಂಡು ಕಾದು ನೋಡಿ ಅದರ ಫಲ ತಾನಾಗಿ ನಿನಗೆ ಸಿಗುತ್ತದೆ ಎಂದು ಹೇಳಿದ್ದರು.

ಯಶ್ ಅವರು ಸಿಕ್ಕಿದ್ರೆ ಕೆರಿಯರ್, ಮುಂದೆ ಏನು ಮಾಡಬೇಕು, ಏನು ನಿರ್ಧಾರ ಮಾಡಬೇಕು, ಮುಂದಿನ ಪ್ಲಾನ್ ಏನು ಮಾಡಿಕೊಂಡಿದ್ದೀಯಾ ಇದರ ಬಗ್ಗೆಯೇ ಮಾತನಾಡುತ್ತಿದ್ದರು. ಕನ್ನಡದಲ್ಲಿ ಖಳನಟರೇ ಇಲ್ಲ ಎಂದಿದ್ದರು. ಅಂದು ರಾಜಾಹುಲಿಯಲ್ಲಿ ಮಾಡಿದ್ದ ಸಣ್ಣ ಪಾತ್ರಗಳು ತುಂಬಾ ಚೆನ್ನಾಗಿತ್ತು. ಆಗಲೂ ಯಶ್ ಹೊಸ ಹುಡುಗರು ಬರಲಿ ಎಂದು ಹೇಳುತ್ತಿದ್ದರು. ಅದರಂತೆಯೇ ಕೆಜಿಎಫ್ ನಲ್ಲೂ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದ್ರು.

ಯಶ್ ಅವರಿಗೆ, ನಾವು ಎನು ಮಾಡುತ್ತಿದ್ದೇವೆ ಎಂಬ ನಿರ್ಧಿಷ್ಟವಾದ ಕ್ಲ್ಯಾರಿಟಿ ಇರುತ್ತದೆ. ಅವರು ಯಾವಾಗಲೂ ನಮ್ಮ ಇಂಡಸ್ಟ್ರೀಗೆ ಕಲಾವಿದರ ಬರಬೇಕು ಎಂದು ಹೇಳುತ್ತಿರುತ್ತಾರೆ. ನನಗೆ ಇಷ್ಟವಾದ ವಿಷಯವೆಂದರೆ ಯಶ್ ಅವರನ್ನು ಅವತ್ತು ನೋಡಿದ ಕಲ್ಪನೆ ಇನ್ನೂ ಬದಲಾಗಿಲ್ಲ. ಈಗಲೂ ಅದೇ ರೀತಿ ಇದ್ದಾರೆ. ಈಗ ಇನ್ನೂ ಒಳ್ಳೆಯ ಕೆಲಸ ಮಾಡೋಣ ಎಂದು ಅವರ ಆಸೆ, ಬಯಕೆ ಹೆಚ್ಚಾಗಿದೆ ಅಂದುಕೊಳ್ಳಬಹುದು ಅಂತ ವಶಿಷ್ಠ ಅವರು ಹೇಳಿದ್ದಾರೆ.

ಇವೆಲ್ಲ ನಮ್ಮ ಜೀವನದ ನೆನಪಿನಲ್ಲಿ ಚಿರಕಾಲ ಉಳಿಯುತ್ತವೆ. ಯಾಕೆಂದರೆ ಯಾವತ್ತೂ ಯಾರೆಯಾಗಲಿ ನಮ್ಮನ್ನು ಗುರುತಿಸಬೇಕು ಅನ್ನುತ್ತೀವಿ, ನಮ್ಮನ್ನು ಗುರುತಿಸಿದರೆ ಕೆಲಸ ಸಿಗುತ್ತದೆ ಎಂದು ಯೋಚನೆ ಮಾಡುತ್ತೇವೆ. ಆದರೆ ಗುರುತಿಸಿಕೊಳ್ಳೋದು, ಗುರುತಿಸುವದನ್ನು ಮೀರಿ ಈ ಸಿನಿಮಾ ನಮ್ಮೆಲ್ಲರಿಗೂ ಇಂದು ಒಂದು ಸ್ಥಾನ-ಮಾನವನ್ನು ದೊರಕಿಸಿಕೊಟ್ಟಿದೆ. ಜೊತೆಗೆ ನಿಮ್ಮಂತ ಅದ್ಭುತ ಕಲಾವಿದರನ್ನು ಕೊಟ್ಟಿದೆ ಎಂದು ಉಳಿದ ಕಲಾವಿದರಿಗೆ ಹೇಳಿದ್ದಾರೆ.

ಕಲಾವಿದರ ಬಳಿ ಯಾವ ಟ್ಯಾಲೆಂಟ್ ಇರುತ್ತವೆ ಎಂದು ಯಶ್ ಅವರು ಯೋಚನೆ ಮಾಡುತ್ತಾರೆ. ಒಂದು ವೇಳೆ ಅವರ ಟ್ಯಾಲೆಂಟ್ ನೋಡಿದರೆ ಮಾತ್ರ ಬಿಡುವುದಿಲ್ಲ. ಅವರಿಗೆ ತುಂಬಾ ಬೆಂಬಲ ಕೊಡುತ್ತಾರೆ. ಅಂದು ನಮ್ಮ ಬಾಸ್‍ನ್ನು ಹೇಗೆ ನೋಡಿದ್ದೇನೆ ಇಂದು ಹಾಗೆ ನೋಡುತ್ತಿದ್ದೇನೆ. ಇಂದು ಕನ್ನಡವನ್ನು ಈ ಹಂತಕ್ಕೆ ತೆಗೆದುಕೊಂಡು ಹೋಗಬಹುದೆಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಇದು ಖುಷಿಯ ವಿಚಾರವಾಗಿದೆ. ಹಿಂದಿಯಲ್ಲಿ ಯಾರೋ ಕನ್ನಡ್ ಕನ್ನಡ್ ಅನ್ನುತ್ತಿದ್ದರು. ಅವರಿಗೆ ಕನ್ನಡ ಎಂದು ಯಶ್ ಹೇಳಿಕೊಟ್ಟಿದ್ದರು ಎಂದು ಹೇಳಿದ್ದಾರೆ.

”This Is The Just Beginning, ನೋಡುತ್ತೀರಿ ಕನ್ನಡ ಸಿನಿಮಾ ಯಾವ ಹಂತಕ್ಕೆ ಹೋಗುತ್ತದೆ’ ಎಂದು ಯಶ್ ಬಾಸ್ ಸೈಮಾದಲ್ಲಿ ಅವಾರ್ಡ್ ತೆಗೆದುಕೊಳ್ಳುವಾಗ ಈ ಡೈಲಾಗ್ ಹೇಳಿದ್ದರು. ಅಂದೆ ಯಶ್ ಅವರಿಗೆ ಕನ್ನಡ ಸಿನಿಮಾವನ್ನು ಇಡೀ ಭಾರತ, ಇಂಟರ್ ನ್ಯಾಷನಲ್ ವರೆಗೂ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದರು. ಅದರಂತೆಯೇ ಅವರ ಹಾರ್ಡ್ ವರ್ಕ್ ಮೂಲಕ ಇಂದು ಕೆಜಿಎಫ್ ಸಿನಿಮಾ ಮೂಲಕ ತೆಗೆದುಕೊಂಡು ಹೋಗಿದ್ದಾರೆ, ಹ್ಯಾಟ್ಸ್ ಅಪ್ ಅವರಿಗೆ ಎಂದ್ರು.

ಯಶ್ ಅವರು ಫಸ್ಟ್ ದಿನದಿಂದಲೂ ಇಂದಿನ ದಿನವರೆಗೂ ಚೂರು ಬದಲಾಗಿಲ್ಲ ಒಂದೇ ರೀತಿ ಇದ್ದಾರೆ. ಈ ಹಿಂದೆ ನಾನು ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿಯಲ್ಲಿ ಫರ್ಹಾನ್ ಎಂಬ ಚಿಕ್ಕ ಪಾತ್ರವನ್ನು ಮಾಡಿದ್ದೆ. ಲಕ್ಕಿ ಸಿನಿಮಾದಿಂದ ಮತ್ತೆ ಯಶ್ ಜೊತೆಗಿನ ನನ್ನ ಒಡನಾಟ ಹೆಚ್ಚಾಯ್ತು. ಒಂದು ದಿನ ನಿರ್ದೇಶಕ ಸೂರಿ ಸರ್ ಕೆಜಿಎಫ್ ಸಿನಿಮಾ ಆಡಿಷನ್ ನಡೆಯುತ್ತಿರೋದರ ಮಾಹಿತಿ ನೀಡಿದರು. ಅಲ್ಲಿಗೆ ಹೋಗಿ ಆಡಿಷನ್ ನೀಡಿ ಕೆಜಿಎಫ್ ಸಿನಿಮಾಗೆ ಸೆಲೆಕ್ಟ್ ಆದೆ ಎಂದು ವಿನಯ್ ಹೇಳ್ತಾರೆ.

Comments are closed.