ಮನೋರಂಜನೆ

ಈ ವಾರ ಕನ್ನಡ ಬಿಗ್ ಬಾಸ್-6 ಮನೆಯಿಂದ ಇಬ್ಬರು ಔಟ್

Pinterest LinkedIn Tumblr

ಈ ವಾರ ಬಿಗ್​ ಬಾಸ್​ ಸೀಸನ್ 6 ಮನೆಯಿಂದ ಇಬ್ಬರು ಸ್ಪರ್ಧಿಗಳು ಎಲಿಮಿನೆಟ್ ಆಗಿದ್ದಾರೆ.

ಒಗ್ಗರಣೆ ಡಬ್ಬಿ ಕಾರ್ಯಕ್ರಮ ನಿರೂಪಣೆ ಖ್ಯಾತಿಯ ಮುರುಳಿ ಹಾಗೂ ಮಾಡೆಲ್ ಕಮ್ ನಟಿ ಜೀವಿತಾ ಈ ವಾರ ಬಿಗ್ ಬಾಸ್ ಮನೆಯಿಂದ ಔಟ್​ ಆಗಿದ್ದಾರೆ.

18 ಸ್ಪರ್ಧಿಗಳಲ್ಲಿ ಒಬ್ಬರಾಗಿ ಮೊದಲ ವಾರವೇ ಬಿಗ್​​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದ ಮುರುಳಿ, ಕೊಟ್ಟ ಟಾಸ್ಕ್​ಗಳಲ್ಲಿ ಸಾಧ್ಯವಾದಷ್ಟು ಉತ್ತಮವಾಗಿಯೇ ಪರ್ಫಾರ್ಮ್ ಮಾಡಿದ್ದರು.

ಮನೆಯವರಿಗೆ ಹೇಳದೆ ಗಾರೆ ಕೆಲಸ ಮಾಡಿ ಆಟೋ ಓಡಿಸಿದ್ದ ಈ ಬಿಗ್ ಬಾಸ್ ಸ್ಪರ್ಧಿ

ಅಷ್ಟೇ ಅಲ್ಲದೇ ಮನೆಯ ಕೆಲ ಸಹಪಾಠಿಗಳ ಟೀಕೆಗಳಿಗೆ ಗುರಿಯಾಗಿದ್ದರೆ. ಆದ್ರೆ ಬಿಗ್​​ಬಾಸ್​​​ ಮನೆಯಲ್ಲಿ ಮುರಳಿ ತಮ್ಮ ಲೀಡರ್​​ಶಿಪ್​​ ಗುಣದ ಮೂಲಕ ಎಲ್ಲರಿಗೂ ಇಷ್ಟವಾಗಿದ್ದರು.

ಅಷ್ಟೇ ಅಲ್ಲದೇ ಮನೆಯ ಸ್ಪರ್ಧಿಗಳಿಗೆ ತಮ್ಮ ಕೈಯಾರ ರುಚಿ ರುಚಿಯಾಗಿ ಅಡುಗೆ ಮಾಡಿಕೊಟ್ಟು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಜಯಶ್ರೀ ಬಿಚ್ಚಿಟ್ಟ ಸತ್ಯ, ಬಿಗ್ ಬ್ರದರ್ ನೋಡಿಕೊಂಡು ಬಂದವನಿದ್ದಾನೆ!

ಇನ್ನು ಮಾಡೆಲ್ ಕಮ್ ನಟಿ ಜೀವಿತಾ ಬಗ್ಗೆ ಹೇಳಬೇಕಂದ್ರೆ ಮೇಘನಾ ಹಾಗೂ ನಿವೇದಿತಾ ಗೌಡ ಜೊತೆಗೆ ವೈಲ್ಡ್‌ಕಾರ್ಡ್‌ ಮೂಲಕ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದರು.

ಹೀಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರಲ್ಲಿ ಕಳೆದವಾರ ಮೇಘಶ್ರೀ ಔಟ್ ಆಗಿದ್ರೆ, ಈ ಬಾರಿ ಜೀವಿತಾ ಔಟ್ ಆಗಿದ್ದಾರೆ.

Comments are closed.