ಮನೋರಂಜನೆ

ಹಿಂದಿಯಲ್ಲಿ ಕೆಜಿಎಫ್: 780 ಪರದೆಗಳಿಂದ 951ಕ್ಕೆ ಹೆಚ್ಚಳ!

Pinterest LinkedIn Tumblr


ಬೆಂಗಳೂರು: ಐದು ಭಾಷೆಗಳಲ್ಲಿ ಬಿಡುಗಡೆಯೊಂದಿಗೆ ದಾಖಲೆ ಬರೆದಿದ್ದ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದೆ.

ಪ್ರಮುಖವಾಗಿ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಮುಂಬೈನಲ್ಲಿ ಅತ್ಯುತ್ತಮವಾಗಿ ಪ್ರದರ್ಶನವಾಗುತ್ತಿದ್ದು, ಡಿ. 31 ಮತ್ತು ಜನವರಿ 1 ರಂದು ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ತರಣ್ ಅದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಹಿಂದಿ ಕಲೆಕ್ಷನ್ ಎಷ್ಟು?
ಡಿ. 28ರ ಶುಕ್ರವಾರ 1.25 ಕೋಟಿ ರೂ., ಶನಿವಾರ 1.75 ಕೋಟಿ ರೂ., ಭಾನುವಾರ 2.25 ಕೋಟಿ ರೂ., ಸೋಮವಾರ 1.50 ಕೋಟಿ ರೂ., ಮಂಗಳವಾರ 2.25 ಕೋಟಿ ರೂ. ಬುಧವಾರ 1.30 ಕೋಟಿ ರೂ. ಹಾಗೂ ಗುರುವಾರ 1.20 ಕೋಟಿ ರೂ. ಆದಾಯಗಳಿಸಿದೆ.

ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ 21.45 ಕೋಟಿ ರೂ. 2ನೇ ವಾರದಲ್ಲಿ 11.50 ಕೋಟಿ ರೂ. ಗಳಿಕೆಯೊಂದಿಗೆ ಒಟ್ಟು 39.95 ಕೋಟಿ ರೂ. ಗಳಿಸಿದೆ. ಅಲ್ಲದೇ 2ನೇ ವಾರದಲ್ಲಿ 780 ಪರದೆಗಳಲ್ಲಿ ಪ್ರದರ್ಶನವಾಗುತ್ತಿದ್ದ ಕೆಜಿಎಫ್ 3ನೇ ವಾರಕ್ಕೆ ಈ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು ಒಟ್ಟಾರೆ 951 ಪರದೆಗಳಲ್ಲಿ ಪ್ರದರ್ಶನ ವಾಗುತ್ತಿದೆ.

ಹಿಂದಿ ಸಿನಿಮಾದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂಬೈಗೆ ಯಶ್ ತೆರಳಿದ್ದರು. ಐಟಿ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನ ರದ್ದುಪಡಿಸಿ ಗುರುವಾರ ಬೆಂಗಳೂರಿಗೆ ಮರಳಿದ್ದರು.

Comments are closed.