ಅಂತರಾಷ್ಟ್ರೀಯ

ಮಗು ಅಪಾಯದಲ್ಲಿದೆ ಎಂದು ಬಂದಾಗ ಕಂಡಿದ್ದೇ ಬೇರೆ: ತಮಾಷೆ ಘಟನೆ ಕುರಿತು ಆಸ್ಟ್ರೇಲಿಯಾ ಪೊಲೀಸರ ಟ್ವೀಟ್‌

Pinterest LinkedIn Tumblr


ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ತಮಾಷೆ ಘಟನೆ ಕುರಿತು ಅಲ್ಲಿಯ ಪೊಲೀಸರು ಟ್ವೀಟ್‌ ಮಾಡಿದ್ದಾರೆ. ದಾರಿಹೋಕರೊಬ್ಬರಿಗೆ ಮನೆಯೊಂದರಿಂದ ಮಗುವೊಂದು ಅಳುತ್ತಿದ್ದ ಶಬ್ದ ಕೇಳುತ್ತದೆ. ಅದರ ಬೆನ್ನಲ್ಲೇ ಪುರುಷನೊಬ್ಬ, “ನೀನೇಕೆ ಸಾಯುತ್ತಿಲ್ಲ, ಸಾಯಿ’ ಎಂದು ಕೂಗುತ್ತಿರುತ್ತಾನೆ. ದಾರಿಹೋಕರು ಈ ಮನೆಯಲ್ಲಿ ಪುಟ್ಟ ಮಗು ಮೇಲೆ ದೌರ್ಜನ್ಯ ನಡೆಯುತ್ತಿದೆ. ಸ್ವಲ್ಪ ತಡಮಾಡಿದರೂ ಮಗುವಿನ ಪ್ರಾಣ ಹೋಗುತ್ತದೆ ಎಂದು ಭಾವಿಸಿ, ಪೊಲೀಸರಿಗೆ ತುರ್ತು ಕರೆ ಮಾಡುತ್ತಾರೆ. ಪೊಲೀಸರು ಕೂಡ ಗಡಿಬಿಡಿಯಲ್ಲಿ ಅಲ್ಲಿಗೆ ಬಂದು ಮನೆಯನ್ನು ಪ್ರವೇಶಿಸುತ್ತಾರೆ.

ಆದರೆ ಅಲ್ಲಿಯ ದೃಶ್ಯ ನೋಡಿ ಅವರಿಗೆ ಗಾಬರಿಯಾಗುತ್ತದೆ. ಮಗು ಅಪಾಯದಲ್ಲಿದೆ ಎಂದು ಬಂದವರ ಕಣ್ಣಿಗೆ ಕಂಡಿದ್ದು ಮಗುವಲ್ಲ, ಬದಲಾಗಿ ಅಪಾಯದಲ್ಲಿದ್ದ ಒಂದು ಜೇಡ. ಮನೆಯ ಮಾಲೀಕನಿಗೆ ಜೇಡವೆಂದರೆ ಬಹಳ ಭಯವಂತೆ.

ಅವರು ಮನೆಯೊಳಗೆ ಸೇರಿಕೊಂಡಿದ್ದ ಜೇಡವನ್ನು ಸಾಯಿಸಲು ಬೆಳಗ್ಗೆಯಿಂದ ಪ್ರಯತ್ನಿಸುತ್ತಿದ್ದರು. ಆದರೆ ಅದನ್ನು ಸಾಯಿಸಲು ಅವರಿಗೆ ಸಾಧ್ಯವಾಗಲಿಲ್ಲ. ತಮ್ಮಿಂದ ಪೊಲೀಸರಿಗೆ ಆದ ತೊಂದರೆಗಾಗಿ ವ್ಯಕ್ತಿ ಮತ್ತು ಅವರ ಪತ್ನಿ ಕ್ಷಮೆ ಯಾಚಿಸಿದ್ದಾರೆ.

Comments are closed.