ಮನೋರಂಜನೆ

ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ, ಆಯೋಜಕರ ವಿರುದ್ಧ ದೂರು

Pinterest LinkedIn Tumblr

ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಷ್ಠಿತ ‌ಕಾರ್ಯಕ್ರಮ ಬಿಗ್ ಬಾಸ್ ಆಯೋಜಕರು ಹಾಗೂ ಸ್ಪರ್ಧಿಗಳ ವಿರುದ್ಧ ಬಿಡದಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ಟೆಕ್ನಿಕಲ್ ಟೀಂ ಹಾಗೂ ಅಂಡ್ರೋ ಜೈಪಾಲ್ ಅಲಿಯಾಸ್ ಆಂಡಿ ಸೇರಿದಂತೆ ಎಲ್ಲಾ ಸ್ಪರ್ಧಾಳುಗಳ ವಿರುದ್ದ ಫ್ಯೂಚರ್ ಇಂಡಿಯಾ ಆರ್ಗನೈಜೇಷನ್ ಅಧ್ಯಕ್ಷ ರೋಲ್ಯಾಂಡ್ ಸೋನ್ನ್ ಎನ್ನುವವರು ದೂರು ನೀಡಿದ್ದಾರೆ.

ಆ್ಯಂಡಿ ಅವರು ಸ್ಪರ್ಧಿಗಳ ವಿರುದ್ಧ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದು ವಿಕೃತ ಮನಸ್ಸಿನಿಂದ ಕಣ್ಣು ಮತ್ತು ಶ್ವಾಸಕೋಶಕ್ಕೆ ತೊಂದರೆ ಕೊಡಬಹುದಾದ ಸುಗಂಧ ದ್ರವ್ಯವನ್ನು ಇತರ ಸ್ಪರ್ಧಿಗಳ ಮೇಲೆ ಮನಸೋ ಇಚ್ಛೆ ಸ್ಪ್ರೇ ಮಾಡುತ್ತಿದ್ದಾರೆ. ಉಳಿದ ಸ್ಪರ್ಧಿ ಗಳಾದ ರಾಕೇಶ್ , ರಶ್ಮಿ, ಮುರುಳಿ, ನವೀನ್,ಮೇಘಶ್ರೀ ಸೇರಿದಂತೆ ಇತರರು ಮತ್ತು ತಾಂತ್ರಿಕ ತಂಡ ಹಾಗೂ ಆಯೋಜಕರು ಕೂಡ ಅವರನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಬಿಡದಿ ಪೋಲೀಸರು ಗುರುತಿಸಲಾಗದ ಪ್ರಕರಣದಡಿಯಲ್ಲಿ (non cognizable) ಎನ್.ಸಿ.ಆರ್ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅವರು ಸಂಸ್ಥೆ ಸಂಶೋಧಿಸಿರುವ ಪ್ರಾಣಹಾನಿಯಾಗಿರುವ ಪ್ರಕರಣಗಳು ಉಲ್ಲೇಖಿತ ಜಾಲತಾಣಗಳ ಲಿಂಕ್‌ಗಳನ್ನು ಉಲ್ಲೇಖಿಸಿದ್ದಾರೆ.

Comments are closed.