ರಾಷ್ಟ್ರೀಯ

ದುಬೈನಿಂದ ಪ್ರಯಾಣಿಸುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಬಟ್ಟೆ ಬಿಚ್ಚಿ ಓಡಾಡಿದ ಪ್ರಯಾಣಿಕ !

Pinterest LinkedIn Tumblr

ನವದೆಹಲಿ : ದುಬೈನಿಂದ ಪ್ರಯಾಣಿಸುತ್ತಿದ್ದ ವಿಮಾನ ಟೇಕ್ ಆಫ್ ಆದ ಸಂದರ್ಭದಲ್ಲಿ ಪ್ರಯಾಣಿಕನೋರ್ವ ಬಟ್ಟೆ ಬಿಚ್ಚಿಕೊಂಡು ವಿಮಾನದೊಳಗೆ ಓಡಾಡತೊಡಗಿದ ಘಟನೆ ಪ್ರಯಾಣಿಕರಿಗೆ ಭಾರೀ ಮುಜುಗರ ಉಂಟುಮಾಡಿದೆ.

150 ಪ್ರಯಾಣಿಕರಿದ್ದಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನ ದುಬೈಯಿಂದ ಲಕ್ನೋ ಕಡೆಗೆ ಹೋಗುತ್ತಿತ್ತು. ಇನ್ನೇನು ವಿಮಾನ ಟೇಕಾಫ್​ ಆಯಿತು ಎನ್ನುವಾಗ ಪ್ರಯಾಣಿಕರಿಗೆ ಆಘಾತ, ಅಚ್ಚರಿ, ಭಯ ಎಲ್ಲವೂ ಒಟ್ಟೊಟ್ಟಿಗೆ ಶುರುವಾಯಿತು. ಅದಕ್ಕೆ ಕಾರಣವೂ ಇದೆ. ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ವ್ಯಕ್ತಿ ತನ್ನ ಬಟ್ಟೆ ಬಿಚ್ಚಿ ಓಡಾಡತೊಡಗಿದ್ದಾನೆ. ಪ್ರಯಾಣಿಕನ ಈ ವರ್ತನೆಯನ್ನು ಕಂಡ ವಿಮಾನದ ಸಿಬ್ಭಂದಿ ಆತನನ್ನು ತಡೆದು, ನಗ್ನನಾಗಿದ್ದ ಆತನ ಮೈಮೇಲೆ ಬಟ್ಟೆ ಹೊದಿಸಿ ಸೀಟಿನ ಮೇಲೆ ಕೂರಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪ್ರಯಾಣಿಕನ ಈ ವರ್ತನೆಗೆ ಕಾರಣ ತಿಳಿದುಬಂದಿಲ್ಲ. ವಿಮಾನವು ಲಕ್ನೋ ನಿಲ್ದಾಣಕ್ಕೆ ಆಗಮಿಸಿದಂತೆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಗೆ ನೀಡಿದ್ದಾರೆ ಎನ್ನಲಾಗಿದೆ.

Comments are closed.