ಕರಾವಳಿ

ಪಣಂಬೂರು ವಿಭಾಗದ ನೂತನ ಎಸಿಪಿ ಶ್ರೀನಿವಾಸ ಗೌಡ ಅವರು ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು, ಡಿಸೆಂಬರ್. 30: ಮಂಗಳೂರು ನಗರ ಉತ್ತರ (ಪಣಂಬೂರು ವಿಭಾಗ) ಎಸಿಪಿಯಾಗಿ ಶ್ರೀನಿವಾಸ ಗೌಡ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.

ಪಣಂಬೂರು ವಿಭಾಗದ ಎಸಿಪಿಯಾದ್ದ ರಾಜೇಂದ್ರ ಅವರು ವರ್ಗಾವಣೆಗೊಂಡಿದ್ದು, ತೆರವಾದ ಸ್ಥಾನಕ್ಕೆ ಶ್ರೀನಿವಾಸ ಗೌಡ ಅವರನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿತ್ತು.

ಮೂಲತಃ ಚನ್ನರಾಯಪಟ್ಟಣದವರಾದ ಶ್ರೀನಿವಾಸ ಗೌಡ ಅವರು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ‘ಇಲೆಕ್ಟ್ರಾನಿಕ್ ಆಯಂಡ್ ಕಮ್ಯೂನಿಕೇಶನ್’ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

2016ರ ಐಪಿಎಸ್ ಬ್ಯಾಚ್‌ನವರಾಗಿದ್ದು, ವಿಜಯಪುರದಲ್ಲಿ ಪ್ರೊಬೆಷನರಿ ಅವಧಿ ಮುಗಿಸಿದ್ದಾರೆ. ತದನಂತರ ಹೈದರಾಬಾದ್‌ನಲ್ಲಿ ಫೇಸ್-2 ತರಬೇತಿ ಮುಗಿಸಿದ್ದು, ಉತ್ತರ ವಿಭಾಗದ ಪ್ರಭಾರ ಎಸಿಪಿ ಮಂಜುನಾಥ ಶೆಟ್ಟಿ ಅವರಿಂದ ಅಧಿಕಾರ ಸ್ವೀಕರಿಸಿದರು.

Comments are closed.