ಮನೋರಂಜನೆ

2018 ರಲ್ಲಿ ಯಶಸ್ಸು ಕಂಡ, ನಿರೀಕ್ಷೆ ಹುಸಿಯಾಗಿಸಿದ ಕನ್ನಡ ಚಿತ್ರಗಳು

Pinterest LinkedIn Tumblr


2018 ಕನ್ನಡ ಚಿತ್ರರಂಗದ ಪಾಲಿಗೆ ದಾಖಲೆಯ ವರ್ಷವಷ್ಟೇ ಅಲ್ಲ. ಮಹತ್ವದ ವರ್ಷವೂ ಹೌದು. ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ 190 ಪ್ಲಸ್ ಚಿತ್ರಗಳು ಬಿಡುಗಡೆಯಾಗುವ ಮೂಲಕ ಹೊಸ ದಾಖಲೆಯಾಗಿತ್ತು.
ಈ ಬಾರಿ ದಾಖಲೆ ಪ್ರಮಾಣದಲ್ಲಿ ತುಳು ಚಿತ್ರಗಳು ಸೇರಿದಂತೆ ಒಟ್ಟಾರೇ, 245 ಚಿತ್ರಗಳು ಬಿಡುಗಡೆಯಾಗಿವೆ. ಡಿಸೆಂಬರ್ 21 ರಂದು ಬಿಡುಗಡೆಯಾದ ಕೆಜಿಎಫ್ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಜನಮನ್ನಣೆ ಗಳಿಸುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು ವಸರ್ಸ್ ನುಸ್ರತ್ ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಚಿತ್ರವಾಗಿದೆ.ಇನ್ನೂ ಮೂರು ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ವರ್ಷ ಬಿಡುಗಡೆಯಾದ ಚಿತ್ರಗಳು: ಜನವರಿಯಲ್ಲಿ ನಮ್ಮವರು, ಬೃಹಸ್ಪತಿ, ಪಾನಿಪುರಿ, ಹಂಬಲ್, ಪೊಲಿಷಿಯನ್ ನೋಗರಾಜ್, ಮರಿ ಟೈಗರ್, 3 ಗಂಟೆ 30 ನಿಮಿಷ, 30 ಸೆಕೆಂಡ್, ಬಾಕಿಮನೆ, (ಕೊಡವ) ನೀನಿಲ್ಲದೆ ಮಳೆ, ರಾಜು ಕನ್ನಡ ಮೀಡಿಯಂ, ಚೂರಿಕಟ್ಟೆ, ಐ ಡ್ಯಾಶ್ ಯು, ಕನಕ ಸೇರಿ 13 ಚಿತ್ರಗಳು ತೆರೆ ಕಂಡರೆ, ಫೆಬ್ರವರಿಯಲ್ಲಿ ಆ ಒಂದು ದಿನ, ದೇವರಂಥ ಮನುಷ್ಯ, ಜವ, ಸಂಜೀವ, ಮಂಜರಿ, ಅಮಲು, ಪ್ರೇಮ ಬರಹ, ರಘುವೀರ, ಗೂಗಲ್, ಜನಗಣಮನ,ಟಗರು, ಮಳೆಗಾಲ ಸೇರಿದಂತೆ 23 ಚಿತ್ರಗಳು ಬಿಡುಗಡೆಯ ಭಾಗ್ಯ ಕಂಡಿದ್ದವು.
ಮಾರ್ಚ್ ನಲ್ಲಿ 3000, ಚಿನ್ನದ ಗೊಂಬೆ, ದಂಡುಪಾಳ್ಯ- 2, ನನ್ನಿಷ್ಟ, ಮುತ್ತಿನ ಪಲ್ಲಕ್ಕಿ, ಓ ಪ್ರೇಮವೇ, ಅತೃಪ್ತ, ಮುಖ್ಯಮಂತ್ರಿ ಕಳೆದೋದ್ನಪ್ಪೋ, ರಾಜರಾಥ, ಯೋಗಿ ದುನಿಯಾ ಮತ್ತಿತರ 19 ಚಿತ್ರಗಳು ಏಪ್ರಿಲ್ ನಲ್ಲಿ 22, ಮೇ ತಿಂಗಳಲ್ಲಿ 12, ಜೂನ್ ತಿಂಗಳಲ್ಲಿ ಸೆಕೆಂಡ್ ಹಾಪ್, ಆದರ್ಶ, ಬೈಸಿಕಲ್ ಬಾಯ್ ಮತ್ತಿತರ 24 ಚಿತ್ರಗಳು ಬಿಡುಗಡೆಗೊಂಡಿದ್ದವು.
ಜುಲೈ ತಿಂಗಳಲ್ಲಿ 6 ನೇ ಮೈಲಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಕ್ರಾಂತಿಯೋಗಿ ಮಹಾದೇವರು, ಕುಚಿಕು ಕುಚಿಕು, ಪರಸಂಗ, ವಜ್ರ , ಸೇರಿದಂತೆ 23 ಚಿತ್ರಗಳು ಬಿಡುಗಡೆಯಾಗಿದ್ದವು. ಆಗಸ್ಟ್ ತಿಂಗಳಲ್ಲಿ ಕಥೆಯೊಂದು ಶುರುವಾಗಿದೆ, ಕುಮಾರಿ 21, ಅಭಿಸಾರಿಕೆ, ಹೊಸ ಕ್ಲೆಮ್ಯಾಕ್ಸ್ , ಕತ್ತಲೆ ಕೋಣೆ, ಸೇರಿದಂತೆ ಒಟ್ಟು 34 ಚಿತ್ರಗಳು ತೆರೆಗೆ ಬಂದಿದ್ದವು.
ಸೆಪ್ಟೆಂಬರ್ ತಿಂಗಳಲ್ಲಿ ಬಿಂದಾಸ್ ಗೂಗ್ಲಿ, ಮನೋರಥ, ಇರುವುದೆಲ್ಲವ ಬಿಟ್ಟು, ಅಂಬಿ ನಿಂಗೆ ವಯಸ್ಸಾಯ್ತೋ, ಸೇರಿದಂತೆ ಒಟ್ಟು 9. ಅಕ್ಟೋಬರ್ ತಿಂಗಳಲ್ಲಿ ಆದಿಪುರಾಣ, ಖೊಟ್ಟಿ ಪೈಸೆ, ನಡುವೆ ಅಂತರವಿರಲಿ, ದಿ ಟೆರರಿಸ್ಟ್, ದಿ ವಿಲನ್ ಸೇರಿದಂತೆ ಒಟ್ಟು 9, ನವಂಬರ್ ನಲ್ಲಿ ಅಮ್ಮಚ್ಚಿಯೆಂಬ ನೆನಪು, ಜೀವನ ಯಜ್ಞ, ಕನ್ನಡ ದೇಶದೊಳ್, ಹಾಸನಾಂಬೆ ಮಹಿಮೆ, ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ, ವಿಕ್ಟರಿ-2. ಸಾಹಸಿ ಮಕ್ಕಳು, ಜಗತ್ ಕಿಲಾಡಿ, ಮತ್ತಿತರ 26 ಚಿತ್ರಗಳು ಬಿಡುಗಡೆಯಾಗಿದ್ದವು.
ಡಿಸೆಂಬರ್ ತಿಂಗಳಲ್ಲಿ ಆರೆಂಜ್, ಮಟಾಶ್, ಬೈರವ ಗೀತ, ಮುಂದಿನ ಬದಲಾವಣೆ, ಚರಂತಿ, ಅಜ್ಜ, ಕೆಜಿಎಫ್, ಅನಂತ್ ವಸರ್ಸ್ ನುಸ್ರತ್ ಸೇರಿದಂತೆ ಒಟ್ಟಾರೇ 10 ಚಿತ್ರಗಳು ಬಿಡುಗಡೆಯಾಗಿವೆ.
ಯಶಸ್ವಿ ಚಿತ್ರಗಳು: ಡಾ. ಶಿವರಾಜ್ ಕುಮಾರ್ ಅಭಿನಯದ ಟಗರು, ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಗುಳ್ಟು, ಅಯೋಗ್ಯ, ರಾಂಬೋ 2 ಚಿತ್ರಗಳು ಯಶಸ್ವಿ ಚಿತ್ರಗಳೆಂಬ ಪಟ್ಟಿಯಲ್ಲಿ ಸೇರಿವೆ.
ಏಳಲಿಲ್ಲ, ಬೀಳಲಿಲ್ಲ, ಸಂಹಾರ, ಜಾನಿ ಜಾನಿ ಯೆಸ್ ಪಪ್ಪಾ, ಅಮ್ಮ ಐ ಲವ್ ಯೂ, ಹಂಬಲ್ ಪೊಲಿಟಿಷನ್ ನೋಗರಾಜ್, ಕನಕ, ರಾಜು ಕನ್ನಡ ಮೀಡಿಯಂ, ದಿ ವಿಲನ್, ವಿಕ್ಟರಿ-2 ಕೃಷ್ಣ ತುಳಸಿ , ಕನ್ನಡಕ್ಕಾಗಿ ಒಂದನ್ನು ಒತ್ತಿ, ಟೆರರಿಸ್ಟ್, ಒಂದಲ್ಲಾ ಎರಡಲ್ಲಾ, ಆ ಕರಾಳ ರಾತ್ರಿ, ನಡುವೆ ಅಂತರವಿರಲಿ, ತಾರಕಾಸುರ ಚಿತ್ರಗಳು ಈ ಪಟ್ಟಿಯಲ್ಲಿವೆ.
ಈ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಹಣ ಮಾಡಿರಬಹುದು, ಹೆಸರು ಮಾಡದೇ ಇರಬಹುದು, ಇನ್ನೂ ಹೆಸರು ಮಾಡಿದ್ದರೂ ಹಣ ಮಾಡಲು ವಿಫಲವಾದ ಹಾಗೂ ತಕ್ಕಮಟ್ಟಿಗೆ ನಿರ್ಮಾಪಕರಿಗೆ ನೆಮ್ಮದಿ ತಂದ ಸಿನಿಮಾಗಳು ಈ ಪಟ್ಟಿಯಲ್ಲಿವೆ.
ನಿರೀಕ್ಷೆಗೆ ನಿಲುಕದ ಚಿತ್ರಗಳು : ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಚೂರಿಕಟ್ಟೆ, ಪ್ರೇಮ ಬರಹ, ರಾಜರಥ, ಬಕಾಸುರ, ತಾಯಿಗೆ ತಕ್ಕ ಮಗ, ಲೈಪ್ ಜೊತೆ ಸೆಲ್ಫಿ ಮತ್ತಿತರ ಚಿತ್ರಗಳು ನಿರೀಕ್ಷೆಗೆ ನಿಲುಕದ ಚಿತ್ರಗಳಾಗಿ ಗಮನ ಸೆಳೆದವು.
ಪ್ರಯೋಗಾತ್ಮಕ,ಕಲಾತ್ಮಕ ಚಿತ್ರಗಳು: ಜವ, ಇದೀಗ ಬಂದ ಸುದ್ದಿ, ಹೆಬ್ಬೆಟ್ಟ್ ರಾಮಕ್ಕ, ಕಾನೂರಾಯಣ, ಕಿಚ್ಚು, ಹಸಿರು ರಿಬ್ಬನ್, ಕಥೆಯೊಂದು ಶುರುವಾಗಿದೆ. ಸಾವಿತ್ರಿ ಬಾಯಿ ಪುಲೆ, ಅಮ್ಮಚ್ಚಿ ಎಂಬ ನೆನಪು
ತುಳು ಚಿತ್ರಗಳು: ಲೇ ಪುದರ್ ದೀಕಾ ಈ ಪ್ರೀತಿಗ್, ಅಪ್ಪೆ ಟೀಚರ್, ತೊಟ್ಟಿಲ್, ಪೆಟ್ ಕಮ್ಮಿ, ಅಮ್ಮೆರ್ ಪೊಲೀಸಾ, ಪಡ್ಡಾಯಿ, ಫತ್ತೀಸ್ ಗ್ಯಾಂಗ್, ಮೈ ನೇಮ್ ಇಸ್ ಅಣ್ಣಪ್ಪ , ಕರ್ಣೆ, ಉಮಿಲ್
ಮಕ್ಕಳ ಸಿನಿಮಾ: ಬೈಸಿಕಲ್ ಬಾಯ್ಸ್ , 1098, ನವೀಲ ಕಿನ್ನರಿ, ಸಮ್ಮರ್ ಹಾಲಿಡೇಸ್, ರಾಮರಾಜ್ಯ, ಸಾಹಸಿ ಮಕ್ಕಳು, ಜೀರ್ಜಿಂಬೆ
ರೀಮೆಕ್ ಚಿತ್ರಗಳು: ಕುಮಾರಿ 21 , ಹೊಟ್ಟೆಗಾಗಿ, ಅಂಬಿ ನಿಂಗೆ ವಯಸ್ಸಾಯ್ತೋ, ಜಗತ್ ಕಿಲಾಡಿ, 8 ಎಂಎಂ, ಬೃಹಸ್ಪತಿ, ಸಂಹಾರ, ಹುಚ್ಚ2, ಅಮ್ಮ ಐ ಲವ್ ಯೂ, ಲೌಡ್ ಸ್ಪೀಕರ್, ನಡುವೆ ಅಂತರವಿರಲಿ, ಕಿಸ್ಮತ್
ಹಾರರ್ ಸಿನಿಮಾಗಳು: ಮಂಜರಿ, 3000, ಅತೃಪ್ತ, ಜಯಮಹಲ್, ನಾಗವಲ್ಲಿ ವರ್ಸಸ್ ಆಪ್ತಮಿತ್ರರು, ಕೆಲವು ದಿನಗಳ ನಂತರ, ಚಿಟ್ಟೆ, ಟ್ರಂಕ್, ಅಮವ್ಯಾಸೆ, ಅರ್ಕಾವತ್, ಮನೆ ನಂಬರ್ 67, ವರ್ಣಮಯ , ಅಭಿಸಾರಿಕೆ, ಸದ್ದು,
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ ಪ್ರಕಾರ, ಈ ವರ್ಷ ಬೆರಳಣಿಕೆಯಷ್ಟು ಮಾತ್ರ ಚಿತ್ರಗಳು ಯಶಸ್ವಿಯಾಗಿವೆ. ವರ್ಷಾಂತ್ಯದಲ್ಲಿ ತೆರೆ ಕಂಡ ಕೆಜಿಎಫ್ ಪಂಚ ಭಾಷೆಗಳಲ್ಲಿ ತೆರೆ ಕಾಣುವ ಮೂಲಕ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಇದು ಈ ಬಾರಿಯ ಹಿಟ್ ಲಿಸ್ಟ್ ನಲ್ಲಿ ಮೊದಲ ಸಾಲಿಗೆ ಸೇರುವ ಸಾಧ್ಯತೆ ಇದೆ. ಉಳಿದಂತೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಅಯೋಗ್ಯ ಮತ್ತಿತರ ಚಿತ್ರಗಳು ಉತ್ತಮ ರೀತಿಯಲ್ಲಿ ಪ್ರದರ್ಶನ ಕಂಡಿವೆ ಎಂದು ಮಾಹಿತಿ ನೀಡಿದ್ದಾರೆ.

Comments are closed.