ಮನೋರಂಜನೆ

ನಾನು ಯಾವಾಗಲೂ ನಟನಾಗಲೂ ಬಯಸುತ್ತೇನೆ, ಆದರೆ ನಾನು ರೇಸ್ ನಲ್ಲಿ ಇಲ್ಲ: ವಿನಯ್ ರಾಜ್ ಕುಮಾರ್

Pinterest LinkedIn Tumblr

ಬೆಂಗಳೂರು: ನಟ ವಿನಯ್ ರಾಜ್ ಕುಮಾರ್ ಸದ್ಯ ಪ್ರಯೋಗ ಮಾಡುವ ಮೂಡ್ ನಲ್ಲಿದ್ದಾರೆ. ವಿನಯ್ ಮೂರನೇ ಸಿನಿಮಾ ಅನಂತು v/s ನುಸ್ರುತ್ ಸದ್ಯದಲ್ಲೇ ರಿಲೀಸ್ ಆಗಲಿದ್ದು, ವಕೀಲನ ಪಾತ್ರದಲ್ಲಿ ವಿನಯ್ ನಟಿಸಿದ್ದಾರೆ.

ಅನಂತು ಎಂಬ ಹೆಸರಿನ ಬ್ರಾಹ್ಮಣರ ಪಾತ್ರ ಇದಾಗಿದೆ, ಆದರೆ ಕಥೆ ಆತನ ಜೀವನ ಕುರಿತಾಗಿದೆ, ಜೀವಾನದಲ್ಲಿ ನಾವು ಸಂಬಂಧಗಳಿಗೆ ಕೊಡುವ ಬೆಲೆಯ ಕಥಾ ವಸ್ತುವುಳ್ಳ ಚಿತ್ರ ಇದಾಗಿದೆ. ಯಾವುದೇ ಸಂಬಂಧವನ್ನು ನಾವು ಕಡಿದುಕೊಳ್ಳಲು ಇಷ್ಟ ಪಡುವುದಿಲ್ಲ.

ಸಣ್ಣದೊಂದು ಕಾರಣದಿಂದ ಸಂಬಂಧ ಒಂದು ನಿಮಿಷದಲ್ಲಿ ಹಾಳಾಗಬಹುದು. ನನ್ನ ಪಾತ್ರ ಹಾಗೂ ಕತೆ ಎರಡು ತುಂಬಾ ಪ್ರೇರೇಪಿಸುವಂತಹುದ್ದಾಗಿವೆ ಎಂದು ವಿನಯ್ ತಿಳಿಸಿದ್ದಾರೆ.

ಇಂದಿನ ಕೆಲಸಗಳು ಹೆಚ್ಚಿನದಾಗಿ ಸಂಬಂಧಗಳನ್ನು ಅವಲಂಬಿಸಿರುತ್ತವೆ,. ನಿಜವಾದ ಸಂತೋಷವನ್ನು ನಾವು ಮರೆತು ಬಾಳುತ್ತಿದ್ದೇವೆ ಎಂಬುದು ನನ್ನ ಅಭಿಪ್ರಾಯ, ನಮ್ಮ ಕೆಲಸ ಏನು ಹಾಗೂ ನಾವು ಎಷ್ಟು ಹಣ ಸಂಪಾದಿಸುತ್ತೇವೆ ಎಂಬ ಬಗ್ಗೆ ನಮ್ಮ ಯಶಸ್ಸು ಎಂಬುದು ನಿರ್ದರಿತವಾಗುತ್ತದೆ. ಆದರೆ ನಾವು ಸಂಬಂಧಗಳಿಗೆ ಎಷ್ಟು ಸಮಯ ಇನ್ವೆಸ್ಟ್ ಮಾಡುತ್ತಿದ್ದೇವೆ ಎಂಬುದನ್ನು ಮರೆತಿರುತ್ತೇವೆ ಎಂದು ಹೇಳಿದ್ದಾರೆ.

ರಾಜ್ ಕುಮಾರ್ ಕುಟುಂಬ ಹೊರತು ಪಡಿಸಿ ಇದೊಂದು ಸ್ಪರ್ಧೆಯಾಗಿದೆ, ನಾನು ಏನು ಇಷ್ಟ ಪಡುತ್ತೇನೋ ಅದನ್ನು ಮಾಡುತ್ತೇನೆ, ನಾನು ಯಾವಾಗಲೂ ನಟನಾಗಲೂ ಬಯಸುತ್ತೇನೆ, ಆದರೆ ನಾನು ರೇಸ್ ನಲ್ಲಿ ಇಲ್ಲ.

ವಿನಯ್ ಹೆಚ್ಚಿನ ಸಮಯವನ್ನು ನಿರ್ದೇಶಕರೊಂದಿಗೆ ಫ್ಯಾಮಿಲಿ ಕೋರ್ಟ್ ನಲ್ಲಿ ಕಳೆಯುತ್ತಾರೆ, ವಕೀಲರ ಕೋಟು ಧರಿಸಿ, ವಾದ ಮಾಡುವ ಸಲುವಾಗಿ ಕಾನೂನು ಭಾಷೆ ಪ್ರಾಕ್ಟೀಸ್ ಮಾಡಿದ್ದಾರಂತೆ, ನಿರ್ದೇಶಕರ ಜೊತೆ ಫ್ಯಾಮಿಲಿ ಕೋರ್ಟ್ ಗೆ ಕೆಲ ಕೇಸ್ ಗಳ ವಿಚಾರಣೆ ಕೂಡ ಆಲಿಸಿದ್ದರಂತೆ. ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಲು ಇರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡಿದ್ದಾಗಿ ಹೇಳಿದ್ದಾರೆ.

Comments are closed.