ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಂಕಿತ ಉಗ್ರರ ಬಿಡುಗಡೆ, 1 ಕೋಟಿ ರೂ. ಪರಿಹಾರ: ಕೈ ನಾಯಕನ ಭರವಸೆ!

Pinterest LinkedIn Tumblr

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವವರ ಮುಖವಾಡ ಮತ್ತೊಮ್ಮೆ ಕಳಚಿದ್ದು, ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅಮಾಯಕ ಭಯೋತ್ಪಾದಕರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಕಾಂಗ್ರೆಸ್ ನಾಯಕ ಸಘೀರ್ ಸಯೀದ್ ಖಾನ್ ಭರವಸೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ, ಖಂಡನೆ ವ್ಯಕ್ತವಾಗುತ್ತಿದೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ, ಸಘೀರ್ ಸಯೀದ್ ಖಾನ್, ಕಣಿವೆ ರಾಜ್ಯದಲ್ಲಿ ಬಿಜೆಪಿ ಅಮಾಯಕರ ಮೇಲೆ ದೌರ್ಜನ್ಯ ಎಸಗುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಶಂಕಿತ ಉಗ್ರರನ್ನು ಜೈಲಿನಿಂದ ಬಿಡುಗಡೆ ಮಾಡಿ ಕಣಿವೆಯಲ್ಲಿ ಹತ್ಯೆಗೊಳಗಾದವರ ಕುಟುಂಬ ಸದಸ್ಯರಿಗೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಸರ್ಕಾರಿ ನೌಕರಿ ಕೊಡಿಸುವುದಾಗಿ ಕಾಂಗ್ರೆಸ್ ನಾಯಕ ಭರವಸೆ ನೀಡಿದ್ದಾರೆ.

ಇನ್ನು ಬಿಜೆಪಿ ನಾಯಕರ ವಿರುದ್ಧವೂ ವಿವಾದಾತ್ಮಕ ಹೇಳಿಕೆ ನೀಡಿರುವ ಸಯೀದ್ ಖಾನ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ನಾಯಕರನ್ನು ಗಲ್ಲಿಗೇರಿಸುವುದಕ್ಕೆ ಕಾನೂನು ತರುತ್ತೇವೆ ಎಂದಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಹತ್ಯೆಗಳಿಗೆ ಕಾರಣವಾದ ಬಿಜೆಪಿ ನಾಯಕರನ್ನು ಗಲ್ಲಿಗೇರಿಸುವುದಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಸೂದೆ ಜಾರಿಗೆ ತರಲಿದೆ ಎಂದಿದ್ದಾರೆ.

Comments are closed.