ಮನೋರಂಜನೆ

ಕೆನಡಾದಲ್ಲೂ ಕೆಜಿಎಫ್ ಸದ್ದು – ಯಶ್ ಅಭಿನಯಕ್ಕೆ ಫುಲ್ ಫಿದಾ!

Pinterest LinkedIn Tumblr


ಟೊರೆಂಟೋ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ವಿಶ್ವಾದ್ಯಂತ ಸದ್ದು ಮಾಡುತ್ತಿದ್ದು, ಕೆನಡಾದ ಟೊರೆಂಟೋ ದಲ್ಲಿ ಚಿತ್ರ ವೀಕ್ಷಿಸಲು ಕನ್ನಡಿಗರ ದಂಡೇ ಹರಿದು ಬರುತ್ತಿದೆ.

ಕೆಜಿಎಫ್ ಚಿತ್ರ ಇಡೀ ಭಾರತ ಮಾತ್ರವಲ್ಲದೇ ವಿದೇಶಗಳಲ್ಲಿಯೂ ತನ್ನ ಛಾಪನ್ನು ಮೂಡಿಸಿ, ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕೆನಡಾದ ಟೊರೆಂಟೋದಲ್ಲಿ ಕೆಜಿಎಫ್ ಚಿತ್ರ ನೋಡಲು ಮಾರಿಷಸ್ ಸೇರಿದಂತೆ ಸುತ್ತ ಮುತ್ತಲ ದೇಶಗಳಿಂದ ಕನ್ನಡಿಗರು ಮುಗಿಬಿದ್ದಿದ್ದಾರೆ.

ಟೊರೆಂಟೋದ ಅಲ್ಬಿಯನ್ ಸಿನಿಮಾಸ್‍ನಲ್ಲಿ ಕ್ಯೂ ನಿಂತಿರುವ ವಿಡಿಯೋವನ್ನು ಯಶ್ ಅಭಿಮಾನಿ ಕಿರಣ್ ಎಂಬವರು ಪಬ್ಲಿಕ್ ಟಿವಿಗೆ ಕಳುಹಿಸಿಕೊಟ್ಟಿದ್ದಾರೆ. ವಿಡಿಯೋದಲ್ಲಿ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದು, ಚಿತ್ರದ ಬಗ್ಗೆ ಭರಪೂರ ಹೊಗಳಿಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಜಿಎಫ್ ಚಿತ್ರ ದಿನಕ್ಕೆ ಎರಡು ಶೋ ಪ್ರದರ್ಶನವಾಗ್ತಿದ್ದು, ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ.

ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2,000 ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಮಾಡಿದೆ.

Comments are closed.