ಮನೋರಂಜನೆ

ಕೆಜಿಎಫ್ ಮುಂದೆ ಮಂಕಾದ ಶಾರುಕ್ ಖಾನ್ ಚಿತ್ರ’; ಅಮೆರಿಕದಲ್ಲಿ ತೆಲುಗು, ತಮಿಳ ಚಿತ್ರಗಳನ್ನು ಹಿಂದಿದ ಕನ್ನಡ ಚಿತ್ರ

Pinterest LinkedIn Tumblr


ಬಾಲಿವುಡ್, ಟಾಲಿವುಡ್​ನ ಯಶಸ್ವಿ ಸಿನಿಮಾಗಳ ಸಾಲಿಗೆ ಯಶ್ ಅಭಿನಯದ ಕೆಜಿಎಫ್ ಸೇರುತ್ತಿದೆ. ಕನ್ನಡ ಚಿತ್ರರಂಗದ ಮಟ್ಟಿಗೆ ಕೆಜಿಎಫ್ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ.

ಕೆಜಿಎಫ್ ಮುಂದೆ ಮಂಕಾಯ್ತು ಶಾರುಕ್ ನಟನೆಯ ‘ಝೀರೋ’; ಅಮೆರಿಕದಲ್ಲಿ ತೆಲುಗು, ತಮಿಳನ್ನೂ ಹಿಂದಿಕ್ಕಿತು ಕನ್ನಡ ಚಿತ್ರ ಕೆಜಿಎಫ್ ಸಿನಿಮಾದ ಒಂದು ದೃಶ್ಯ

ಬೆಂಗಳೂರ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಎಲ್ಲಾ ಐದು ಭಾಷೆಗಳಲ್ಲೂ ಹವಾ ಸೃಷ್ಟಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ನಡೆಯದಂತಹ ಪ್ರಚಾರದೊಂದಿಗೆ ಬಿಡುಗಡೆಯಾದ ಕೆಜಿಎಫ್ ಎಲ್ಲಾ ನಿರೀಕ್ಷೆಗಳನ್ನು ದಾಟಿ ಯಶಸ್ಸು ಗಳಿಸಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶತ ಕೋಟಿ ಗಳಿಕೆಯ ಗಡಿ ಮುಟ್ಟುತ್ತಿರುವ ಮೊದಲ ಸಿನಿಮಾ ಇದಾಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಕೆಜಿಎಫ್ ಬಾಲಿವುಡ್, ಟಾಲಿವುಡ್ ರೇಂಜ್​ನಲ್ಲಿ ಅಬ್ಬರಿಸುತ್ತಿರುವುದು ಸುಳ್ಳಲ್ಲ.

ಅಮೆರಿಕದಲ್ಲೂ ಕೆಜಿಎಫ್ ಹವಾ ಜೋರಾಗಿದೆ. ಬೇರೆ ದಕ್ಷಿಣ ಭಾರತೀಯ ಭಾಷೆಯ ಹೊಸ ಸಿನಿಮಾಗಳಿಗೆ ಹೋಲಿಸಿದರೆ ಕೆಜಿಎಫ್​ನ ವೀಕೆಂಡ್ ಕಲೆಕ್ಷನ್ ಜೋರಾಗಿದೆ. ಮೊದಲ ವೀಕೆಂಡ್​ನಲ್ಲಿ ಅಮೆರಿಕದಲ್ಲಿ ಕೆಜಿಎಫ್ 2 ಕೋಟಿ ರೂ.ಗೂ ಹೆಚ್ಚು ಹಣ ಬಾಚಿ

Comments are closed.