
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡಿಗರಷ್ಟೇ ಅಲ್ಲದೇ ತಮಿಳು-ತೆಲುಗು ಪ್ರೇಕ್ಷಕರು ಕೂಡ ಯಶ್ ಅವರನ್ನು ಒಪ್ಪಿಕೊಂಡಿದ್ದಾರೆ. ಬಿಡುಗೆಯಾದ ಮೊದಲ ದಿನವೇ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಕನ್ನಡ ಸಿನಿಮಾ ರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಏಕ ಕಾಲಕ್ಕೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ 2 ಸಾವಿರ ಥಿಯೇಟರ್ಗಳಲ್ಲಿ ಬಿಡುಗಡೆಯಾದ ಚಿತ್ರ ಕೆಜಿಎಫ್.
ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ವಿರುದ್ಧವಾಗಿ ಶಾರುಖ್ ಅಭಿನಯದ ಜೀರೋ ಹಾಗೂ ನಟ ದನುಶ್ ಅಭಿನಯದ ಮಾರಿ-2 ಚಿತ್ರ ಬಿಡುಗಡೆಯಾಗಿದೆ. ಮೊದಲಿಗೆ ಈ ಎರಡು ಚಿತ್ರಗಳ ಕಾರಣಕ್ಕೆ ಕೆಜಿಎಫ್ ಚಿತ್ರದ ಕಲೆಕ್ಷನ್ ಮೇಲೆ ಕೆಟ್ಟ ಪ್ರಭಾವ ಬೀಳಲಿದೆ ಎನ್ನಲಾಗಿತ್ತು. ಆದರೆ, ತೆಲುಗು ಸೇರಿದಂತೆ ತಮಿಳು, ಹಿಂದಿಯಲ್ಲಿ ಪ್ರೇಕ್ಷಕರು ಭಾಷೆ ಮರೆತು ಸಿನಿಮಾ ಒಪ್ಪಿಕೊಂಡಿದ್ದಾರೆ. ಯಶ್ ಅಭಿನಯಕ್ಕೆ ಭಾರೀ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್-1 ಅಲ್ಲ, ಪಾರ್ಟ್-2 ಗೆ ಕೂಡ ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ರಾಖಿ ಭಾಯ್ ಜಿಂದಬಾದ್: ಸಿನಿಮಾ ಸಖತ್ ಆಗಿ ಮೂಡಿ ಬಂದಿದೆ. ಯಶ್ ಅಭಿನಯ ಚೆನ್ನಾಗಿದೆ. ಸಿನಿಮಾ ಮೇಕಿಂಗ್ ಕೂಡ ಅದ್ಭುತ. ಎಲ್ಲಕ್ಕಿಂತ ಹೆಚ್ಚಾಗಿ ಸೆಕೆಂಡ್ ಆಫ್ ಮಸ್ತ್ ಇದೆ. ಕೆಜಿಎಫ್ ಸಿನಿಮಾ ಪಾರ್ಟ್-2 ಕೂಡ ಬರಲಿದೆಯಂತೆ. ಭಾಗ ಎರಡಕ್ಕಾಗಿ ಕಾಯುತ್ತಿದ್ದೇವೆ. ನಮಗೆ ಕೆಜಿಎಫ್ ಹೊಸ ನಾಯಕನ ಚಿತ್ರ ಎಂದು ಅನಿಸಲಿಲ್ಲ. ಸಿನಿಮಾ ಮೇಕಿಂಗ್ ಹಾಲಿವುಡ್ ರೇಂಜಿಗಿದೆ. ನಮ್ಮ ನೇಟಿವಿಟಿಗೆ ತಕ್ಕ ಹಾಗೇ ಸಿನಿಮಾ ಕಥೆ ಒಳಗೊಂಡಿದೆ. ಪಕ್ಕಾ ಬಾಹುಬಲಿ ಸಿನಿಮಾ ರೆಕಾರ್ಡ್ಸ್ ಮುರಿಯಲಿದೆ. ಫೈಟ್, ಹಾಡು ಎಲ್ಲವೂ ಜಬರ್ದಸ್ತ್ ಎನ್ನುತ್ತಾರೆ ಆಂಧ್ರ ಮತ್ತು ತೆಲಂಗಾಣದ ಪ್ರೇಕ್ಷಕರು.
ಕನ್ನಡದ ರಜಿನಿಕಾಂತ್ ಯಶ್: ನಮಗೆ ಇದೊಂದು ಹೊಸ ನಾಯಕ ಚಿತ್ರ ಅಂತ ಭಾಸವಾಗಲಿಲ್ಲ. ಇಡೀ ಸಿನಿಮಾ ಸಖತ್ ಆಗಿದೆ. ಎಲ್ಲಿಯೂ ಬೋರ್ ಹೊಡಿಸಲಿಲ್ಲ. ಯಶ್ ಅಭಿನಯ ಸೂಪರ್. ಯಾವುದರಲ್ಲಿಯೂ ರಾಜಿ ಇಲ್ಲದೇ ಪ್ರತಿ ದೃಶ್ಯವೂ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಯಶ್ ಒಂದು ರೀತಿ ಕನ್ನಡದ ರಜನಿಕಾಂತ್ ಇದ್ದ ಹಾಗೇ. ತಮಿಳಿಗೆ ಯಶ್ ಹೊಸ ಹಿರೋ ಆಗಿರಬಹುದು.ಆದರೆ ನಮಗೆ ಯಶ್ ಹೊಸ ಮುಖ ಎಂದು ಅನಿಸಲಿಲ್ಲ. ಸೂಪರ್ ಸ್ಟಾರ್ ವಿಜಯ್, ರಜನಿಕಾಂತ್ ಸಿನಿಮಾ ನೋಡಿದಷ್ಟೇ ಕೆಜಿಎಫ್ ಫೀಲ್ ನೀಡಿತು. ಚಿತ್ರದ ಕ್ಲೈಮ್ಯಾಕ್ಸ್ ಮಾತ್ರ ನಮ್ಮನ್ನು ಬೇರೆ ಪ್ರಪಂಚಕ್ಕೆ ಕೊಂಡೊಯ್ದಿತ್ತು ಎಂದು ತಮಿಳುಗರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಯಶ್ ಅಸಲಿ ಹೀರೋ, ಶಾರುಖ್ ಜಿರೋ: ಕನ್ನಡದ ಸೂಪರ್ ಸ್ಟಾರ್ ನಮಗೆ ಅಸಲಿ ಹೀರೋ, ಬಾಲಿವುಡ್ನ ಶಾರುಖ್ ಈಗ ಜೀರೋ ಹೀಗೆ ಮಾತುಗಳು ಕೇಳಿ ಬಂದಿದ್ದು ಮುಂಬೈನಲ್ಲಿ. ನಾವು ಸೌತ್ ಇಂಡಿಯಾ ಸಿನಿಮಾ ಸಾಮಾನ್ಯವಾಗಿ ನೋಡುವುದಿಲ್ಲ. ಆದರೆ. ಮೊದಲ ಬಾರಿಗೆ ನೋಡಿದ್ದೇವೆ. ಕನ್ನಡ ಸಿನಿಮಾ ಹೀಗೆ ಕೂಡ ಮಾಡುತ್ತಾರೆಂದು ಎಂದೂ ಭಾವಿಸಿರಲಿಲ್ಲ. ಯಶ್ ಬಾಲಿವುಡ್ಗೆ ಬರಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ ಬಿ-ಟೌನ್ ಪ್ರೇಕ್ಷಕರು.
Comments are closed.