ಮನೋರಂಜನೆ

18 ಸಾವಿರ ಬೆಲೆಯ ವಸ್ತು ಆರ್ಡರ್: ಸೋನಾಕ್ಷಿ ಸಿನ್ಹಾಗೆ ಸಿಕ್ಕಿದ್ದು ಏನು ಗೊತ್ತಾ?

Pinterest LinkedIn Tumblr


ಆನ್​ಲೈನ್​ ಶಾಪಿಂಗ್​ ಮಾಡಿ ಮೋಸ ಹೋದವರು ಕಡಿಮೆ ಇಲ್ಲ. ತಾವು ಇಷ್ಟ ಪಟ್ಟು ಕೊಂಡ ವಸ್ತು ಒಮ್ಮೊಮ್ಮೆ ಕಲ್ಲು, ಇಟ್ಟಿಗೆಗಳಾಗಿ ಮನೆಗೆ ಬಂದಿದ್ದು ಉಂಟು. ಈ ರೀತಿ ಕಂಪನಿಗಳು ಮೋಸ ಮಾಡುವ ಕ್ರಮದ ಬಗ್ಗೆ ಈಗಾಗಲೇ ಅನೇಕರು ಧ್ವನಿ ಎತ್ತಿದ್ದಾರೆ ಕೂಡ. ಈಗ ಈ ಸರದಿ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಅವರದು.

ದಿ ಗ್ರೇಟ್​ ಇಂಡಿಯನ್​ ಶಾಪಿಂಗ್​ ತಾಣವಾದ ಅಮೆಜಾನ್​ನಲ್ಲಿ ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಮೆಚ್ಚಿನ ‘ಬಾಸ್’​ ಕಂಪನಿಯ ಹೆಡ್​ಫೋನ್​ ಅನ್ನು ಆರ್ಡರ್​ ಮಾಡಿದ್ದಾರೆ. ಅದು 18 ಸಾವಿರ ಮೊತ್ತ ನೀಡಿ. ತನ್ನ ದುಬಾರಿ ಬೆಲೆಯ ಹೆಡ್​ಪೋನ್​ಗಾಗಿ ಕಾದು ಕುಳಿತ ಅವರಿಗೆ ಸಿಕ್ಕಿದ್ದು, ಕಬ್ಬಿಣದ ತುಂಡು.

ಹೆಡ್​ ಪೋನ್​ ಬದಲಿಗೆ ಕಬ್ಬಿಣದ ತುಂಡು ಬಂದ ಹಿನ್ನಲೆ ಶಾಕ್​ಗೆ ಒಳಗಾದ ನಟಿ ಸೋನಾಕ್ಷಿ ಅಮೆಜಾನ್​ ಕಂಪನಿಯ ವಂಚನೆಯನ್ನು ಟ್ವೀಟರ್​ನಲ್ಲಿ ಬಯಲು ಮಾಡಿದ್ದಾರೆ.

ಓಪನ್​ ಆಗದೇ ಇರುವ ಸೀಲ್​ ಬಾಕ್ಸ್​ನಲ್ಲಿ ಹೆಡ್​ ಫೋನ್​ ಇದೆ ಎಂದು ಕಾದು ಕುಳಿತ ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಅಮೆಜಾನ್​ ಕಂಪನಿ ಈ ರೀತಿ ಮೋಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಅಷ್ಟೇ ಅಲ್ಲದೇ ಈ ಕಬ್ಬಿಣದ ತುಂಡು ಯಾರಿಗೆ ಬೇಕು ಹೇಳಿ 18 ಸಾವಿರ ರೂಗೆ ನಾನು ಮಾರಲು ಸಿದ್ದವಿದ್ದೇನೆ. ಅಮೆಜಾನ್​ ರೀತಿ ಹೇಳಿದ ವಸ್ತುವೊಂದು ಕಳುಹಿಸುವ ವಸ್ತುವನ್ನು ನಾನು ಮಾಡುವುದಿಲ್ಲ ಎಂದರು.

ಅನೇಕ ಸಾಮಾನ್ಯ ಜನರಿಗೆ ಆನ್​ಲೈನ್​ನಲ್ಲಿ ವಂಚನೆ ಮಾಡುತ್ತಿದ್ದ ಕಂಪನಿ ಈಗ ನಟಿಗೂ ವಂಚನೆ ಮಾಡಿರುವುದರಿಂದಾವಾದರೂ ಎಚ್ಚೆತ್ತು ಕಂಪನಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆಯಾ ಕಾದು ನೋಡಬೇಕು.

Comments are closed.