ಮನೋರಂಜನೆ

ರವಿಚಂದ್ರನ್ ಪುತ್ರ ಮನೋರಂಜನ್‍ ನಟನೆಯ ಪ್ರಾರಂಭ’ದಲ್ಲಿ ಜೊತೆಯಾದ ಮಿಸ್ ಗೋವಾ!

Pinterest LinkedIn Tumblr


ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಂದಿನ ಚಿಅತ್ರ ‘ಪ್ರಾರಂಭ’. ಈ ಚಿತ್ರಕ್ಕೆ ಒಂದಷ್ಟು ಕಾಲದಿಂದ ನಾಯಕಿಯ ಹುಡುಕಾಟ ನಡೆದಿತ್ತು. ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ ಮಿಸ್ ಗೋವಾ ಕಿರೀಟವನ್ನೂ ತೊಟ್ಟುಕೊಂಡಿರುವ ಕೀರ್ತಿ ಕಲಕೇರಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈಕೆ ಮಿಸ್ ಗೋವಾ ಅಂದಾಕ್ಷಣ ಪರಭಾಷಾ ನಟಿ ಅಂದುಕೊಳ್ಳಬೇಕಿಲ್ಲ. ಕೀರ್ತಿ ಅಪ್ಪಟ ಕನ್ನಡತಿ. ನಮ್ಮದೇ ಹುಬ್ಬಳ್ಳಿ ಸೀಮೆಯ ಕಲಾ ಕುಟುಂಬದಿಂದ ಬಂದ ಹುಡುಗಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಅದೃಷ್ಟ ಹುಡುಕಿ ಹೊರಟು ಮಿಸ್ ಗೋವಾ ಆಗಿ ಮಿಂಚಿದ್ದರೂ ಕೀರ್ತಿ ಅವರ ಉದ್ದೇಶವಾಗಿದ್ದದ್ದು ನಟನೆ. ಇದೀಗ ಪ್ರಾರಂಭ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಈ ಹಿಂದಿನ ಚಿತ್ರದಲ್ಲಿಯೇ ಗಮನ ಸೆಳೆದಿದ್ದ ಮನೋರಂಜನ್ ಕೂಡಾ ಪ್ರಾರಂಭಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿದಿದ್ದಾರಂತೆ. ಚೆಂದದ ಕಥೆ ಹೊಂದಿರೋ ಈ ಚಿತ್ರ ಇನ್ನೇನು ಚಿತ್ರೀಕರಣ ಆರಂಭಿಸಲಿದೆ.

Comments are closed.