ಮನೋರಂಜನೆ

ಪ್ರಧಾನಿ ನರೇಂದ್ರ ಮೋದಿಗೆ ಹೃದಯಪೂರ್ವಕ ಧನ್ಯವಾದ ಹೇಳಿದ ಬಾಲಿವುಡ್ ನಟಿ ಪ್ರಿಯಾಂಕಾ

Pinterest LinkedIn Tumblr

ನವದೆಹಲಿ: ತಮ್ಮ ಮದುವೆ ಆರತಕ್ಷತೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬುಧವಾರ ಧನ್ಯವಾದ ಹೇಳಿದ್ದಾರೆ.

ಆರತಕ್ಷತೆಗೆ ಆಗಮಿಸಿ ವದು-ವರರಿಗೆ ಆರ್ಶೀವದಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಪ್ರಿಯಾಂಕಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಮಂಗಳವಾರ ರಾಷ್ಟ್ರ ರಾಜಧಾನಿಯ ತಾಜ್ ಪ್ಯಾಲೇಸ್ ನಲ್ಲಿ ನಡೆದ ದೇಸಿ ಗರ್ಲ್ ಪ್ರಿಯಾಂಕ ಚೋಪ್ರ ಮತ್ತು ನಿಕ್ ಜೊನಸ್ ರಿಸೆಪ್ಷನ್’ಗೆ ತೆರಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನವದಂಪತಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದರು.

ಕಳೆದ ಶನಿವಾರ ಜೋಧಪುರ್ ದ ಉಮೈದ್ ಭವನ್ ಪ್ಯಾಲೇಸ್ ನಲ್ಲಿ ಕ್ರೈಸ್ತ ಹಾಗೂ ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾದ ನಿಕ್ಯಾಂಕ ಜೋಡಿ ಭಿನ್ನ ಭಿನ್ನ ಮದುವೆ ಉಡುಪಿನಲ್ಲಿ ಕಂಗೊಳಿಸಿದ್ದರು.

Comments are closed.