ಮನೋರಂಜನೆ

ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗದ ಕಿರುತೆರೆ ನಟಿ

Pinterest LinkedIn Tumblr


‘ಬಿದಾಯಿ’ ಧಾರಾವಾಹಿಯಿಂದ ಖ್ಯಾತರಾಗಿರುವ ಸಾರಾ ಖಾನ್ ತಮ್ಮ ಹೊಸ ಮ್ಯೂಸಿಕ್ ಆಲ್ಬಂ ಹಾಡನ್ನು ರಿಲೀಸ್ ಮಾಡಿದ್ದರು. ಈ ಆಲ್ಬಂನ ಹೆಸರು ಬ್ಲ್ಯಾಕ್ ಹಾರ್ಟ್ ಆಗಿದ್ದು, ಸಾರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.

ಸ್ಲೇಶ್ ಪ್ರೊಡಕ್ಷನ್ ಜೊತೆ ಸೇರಿಕೊಂಡು ಸಾರಾ ಖಾನ್ ಸ್ವತಃ ಈ ಹಾಡನ್ನು ನಿರ್ಮಿಸಿದ್ದರು. ಈ ಹಾಡಿನಲ್ಲಿ ಸಾರಾ ತುಂಬಾ ಬೋಲ್ಡ್ ಆಗಿದ್ದರು. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಮುಸ್ಲಿಂ ಸಮುದಾಯದವರಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರಾ ನೀನು ನಿನ್ನ ಧರ್ಮವನ್ನು ಏಕೆ ಬದಲಾಯಿಸುವುದಿಲ್ಲ. ನಿಮ್ಮಂತಹ ನಟಿಯರು ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತೀರಾ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ಸಾರಾ ಅವರನ್ನು ರಾಖಿ ಸಾವಂತ್ ಅವರಿಗೆ ಹೋಲಿಸಿ, ನಿನಗಿಂತ ರಾಖಿ ಎಷ್ಟೋ ಮೇಲೂ. ಆಕೆ ನಿನ್ನ ರೀತಿ ನಗ್ನಳಾಗುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಈ ಹಿಂದೆ ಸಾರಾ ಖಾನ್ ತನ್ನ ಸಹೋದರಿ ಜೊತೆ ಶ್ರೀಲಂಕಾ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ ಸಹೋದರಿಯರಿಬ್ಬರು ಕಾಲ ಕಳೆಯುತ್ತಾ ಬಾತ್‍ಟಬ್‍ನಲ್ಲಿ ಶವರ್ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಸಾರಾ ಸಹೋದರಿ ಆರ್ಯ ತನ್ನ ಸಹೋದರಿ ಸಂಪೂರ್ಣ ನಗ್ನವಾಗಿರುವ ವಿಡಿಯೋವನ್ನು ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಾರಾ, ಇದೆಲ್ಲ ಹೇಗಾಯಿತೋ ಎಂಬುದು ನನಗೆ ತಿಳಿದ್ದಿಲ್ಲ. ಎಲ್ಲವೂ ತಪ್ಪಾಗಿ ಹೋಗಿದೆ. ನನ್ನ ಸಹೋದರಿ ತಮಾಷೆಗಾಗಿ ಈ ವಿಡಿಯೋವನ್ನು ಮಾಡಿದ್ದಳು. ನಂತರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಳು. ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನನ್ನ ಸಹೋದರಿ ಮದ್ಯ ಸೇವಿಸಿದ್ದಳು. ನಾವು ತಮಾಷೆ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೇವು. ಆ ಸಮಯದಲ್ಲಿ ಈ ರೀತಿ ಆಯಿತು ಎಂದು ತಿಳಿಸಿದ್ದರು.

Comments are closed.