ಮನೋರಂಜನೆ

ದೀಪಿಕಾ ಮದುವೆಯಲ್ಲಿ ಧರಿಸಿದ್ದ ಸೀರೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಬ್ಯಸಾಚಿ

Pinterest LinkedIn Tumblr


ಮುಂಬೈ: ಬಾಲಿವುಡ್ ಚೆಲುವೆ ದೀಪಿಕಾ ಪಡುಕೋಣೆ ಮದುವೆ ಅದ್ಧೂರಿಯಾಗಿ ಇಟಲಿಯಲ್ಲಿ ನಡೆಯಿತು. ಕೊಂಕಣಿ ಮತ್ತು ಪಂಜಾಬಿ ಸಂಪ್ರದಾಯಬದ್ಧವಾಗಿ ಮದುವೆ ಸಹ ನಡೆದಿದೆ. ಬಾಲಿವುಡ್ ತಾರೆಯರ ಮದುವೆಯಲ್ಲಿ ತಮ್ಮ ನೆಚ್ಚಿನ ನಟಿ ತೊಡುವ ಉಡುಗೆಯ ಬಗ್ಗೆ ಬಹುತೇಕರಲ್ಲಿ ಕುತೂಹಲ ಇರುತ್ತದೆ. ದೀಪಿಕಾ ಸಹ ತಮ್ಮ ಮದುವೆಯಲ್ಲಿ ಎರಡು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು. ವಸ್ತ್ರವಿನ್ಯಾಸಕ ಸಬ್ಯಸಾಚಿ ದೀಪಿಕಾರ ಎಲ್ಲ ಮದುವೆ ಫೋಟೋಗಳನ್ನು ತಮ್ಮ ಅಧಿಕೃತ ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.

ನವದಂಪತಿ ಧರಿಸಿದ ಎಲ್ಲ ಉಡುಪನ್ನು ನಾನು ಡಿಸೈನ್ ಮಾಡಿಲ್ಲ. ಕೊಂಕಣಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ದೀಪಿಕಾ ತಾಯಿ ಉಜ್ಜಲಾ ಅವರಿಂದ ಕಾಣಿಕೆಯಾಗಿ ಪಡೆದಿದ್ದ ಸೀರೆಯನ್ನು ಧರಿಸಿದ್ದರು. ಉಜ್ಜಲಾ ಪಡುಕೋಣೆ ಆ ಸೀರೆಯನ್ನು ಬೆಂಗಳೂರಿನ ಮಳಿಗೆಯಲ್ಲಿ ಖರೀದಿಸಿದ್ದಾರೆ ಎಂದು ಸಬ್ಯಸಾಚಿ ಬರೆದುಕೊಂಡಿದ್ದಾರೆ. ದೀಪಿಕಾ ಧರಿಸಿದ್ದ ಕೊಂಕಣಿ ಶೈ ಲಿಯಲ್ಲಿ ವಿನ್ಯಾಸ ಮಾಡಲಾಗಿತ್ತು.

2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾರ ಮದುವೆ ಬಟ್ಟೆಯ ವಸ್ತ್ರವಿನ್ಯಾಸವನ್ನು ಸಬ್ಯಸಾಚಿ ಮಾಡಿದ್ದರು. ಅಂದು ಸಬ್ಯಸಾಚಿ ವಿರುಷ್ಕಾರ ಮದುವೆ ಮತ್ತು ಆರತಕ್ಷತೆಯ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಬುಧವಾರ ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ದೀಪ್ ವೀರ್ ರಾಯಲ್ ಲುಕ್‍ನಲ್ಲಿ ಕಂಗೊಳಿಸುತ್ತಿದ್ದರು.

ನಗರದ ಲೀಲಾ ಪ್ಯಾಲೇಸ್‍ನಲ್ಲಿ ದೀಪ್‍ವೀರ್ ಆರತಕ್ಷತೆ ಆಯೋಜಿಸಲಾಗಿತ್ತು. ಹಣೆತುಂಬಾ ಸಿಂಧೂರವಿಟ್ಟು ಮಹಾರಾಣಿಯಂತೆ ಕಂಗೊಳಿಸುತ್ತಿದ್ದ ದೀಪಿಕಾ ಪತಿಯ ಕೈ ಹಿಡಿದು ನಡೆದು ಬಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ದಕ್ಷಿಣ ಭಾರತದ ಸಂಪ್ರದಾಯಕ್ಕೆ ತಕ್ಕಂತೆ ದೀಪಿಕಾ ಬಂಗಾರದ ಬಣ್ಣದ ಜರತಾರಿ ಸೀರೆಯುಟ್ಟು ಆ್ಯಂಟಿಕ್ ಜ್ಯುವೆಲ್ಲರಿ ಧರಿಸಿ ಮಿಂಚಿದರೆ, ವರ ರಣವೀರ್ ಸಿಂಗ್ ಬಂಗಾರದ ಕಸೂತಿ ಇರುವ ಕಡು ನೀಲಿ ವರ್ಣದ ಲಾಂಗ್ ಸೂಟ್ ಧರಿಸಿದ್ದರು.

ಇಟಲಿಯಲ್ಲಿ ಮದುವೆಯಾಗಿ ಮುಂಬೈಗೆ ಆಗಮಿಸಿದ್ದ ನವದಂಪತಿ ಆತ್ಮೀಯರಿಗೆ ತಮ್ಮ ಆರತಕ್ಷತೆಯ ಆಹ್ವಾನವನ್ನು ನೀಡಿದ್ದರು. ಈ ನಡುವೆ ಅವರ ಮದುವೆ ಸಮಾರಂಭದ ಫೋಟೋಗಳು ಎಲ್ಲಾ ಅಭಿಮಾನಿಗಳ ಮನಗೆದ್ದಿದ್ದವು. ಅಲ್ಲದೇ ಮದುವೆ ಕ್ಷಣ ಫೋಟೋ ಲೀಕ್ ಆಗದಂತೆ ಎಚ್ಚರಿಕೆ ವಹಿಸಿದ್ದ ಈ ಜೋಡಿ ಬಳಿಕ ಅಭಿಮಾನಿಗಳೊಂದಿಗೆ ಸ್ವತಃ ಫೋಟೋಗಳನ್ನು ಒಂದೊಂದಾಗಿ ಹಂಚಿಕೊಂಡಿದ್ದರು.

Comments are closed.