ಮನೋರಂಜನೆ

ನಟಿ ಮಲೈಕಾ ಅರೋರಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್ ಕಪೂರ್ ಸೆಕ್ಸ್ ಲೈಫ್ ಬಗ್ಗೆ ರಿವೀಲ್..?

Pinterest LinkedIn Tumblr


ಮುಂಬೈ : ಕಾಫಿ ವಿತ್ ಕರಣ್ ಜೋಹಾರ್ ಶೋ 6ರಲ್ಲಿ ಬಾಲಿವುಡ್ ನಟ ಜಾನ್ವಿ ಕಪೂರ್ ಹಾಗೂ ಸಹೋದರ ಅರ್ಜುನ್ ಕಪೂರ್ ಪಾಲ್ಗೊಂಡು ಅನೇಕ ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹಿಂದಿನ ಎಪಿಸೋಡ್ ನಲ್ಲಿ ನಟ ಸೈಫ್ ಅಲಿ ಖಾನ್ ಹಾಗೂ ಪುತ್ರಿ ಸಾರಾ ಅಲಿ ಖಾನ್ ಪಾಲ್ಗೊಂಡಿದ್ದರು. ಈ ವೇಳೆ ಸೈಫ್ ಸೆಕ್ಸ್ ಲೈಫ್ ಬಗ್ಗೆ ಪ್ರಶ್ನೆ ಮಾಡಿದ್ದ ಕರಣ್ ಅದೇ ಪ್ರಶ್ನೆಯನ್ನು ಬ್ಯಾಚುಲರ್ ಆಗಿರುವ ಅರ್ಜುನ್ ಕಪೂರ್ ಗೂ ಕೇಳಿದ್ದಾರೆ.

ಇತ್ತೀಚೆಗೆ ನಟಿ ಮಲೈಕಾ ಅರೋರಾ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಅರ್ಜುನ್ ಗೆ ನೀವಿನ್ನೂ ಸಿಂಗಲ್ ಆಗಿದ್ದೀರಾ ಎನ್ನುವ ಪ್ರಶ್ನೆಯನ್ನೂ ಕೂಡ ಕೇಳಲಾಗಿದೆ. ಸಹೋದರಿ ಜಾನ್ವಿ ಎದುರಿಗೆ ಅನೇಕ ಸೀಕ್ರೇಟ್ ಪ್ರಶ್ನೆಗಳಿಗೆ ಅರ್ಜುನ್ ಹೇಗೆ ಉತ್ತರಿಸಿದ್ದಾರೆ ಎನ್ನುವುದನ್ನು ನೊಡಲು ಮುಂದಿನ ಭಾನುವಾರದ ವರೆಗೆ ಕಾಯಬೇಕು.

ಇನ್ನು ಇದೇ ಶೋ ನಲ್ಲಿ ಅರ್ಜುನ್ ಹಾಗೂ ಜಾನ್ವಗೆ ಕರಣ್ ಹಾಲಿವುಡ್ ಚಿತ್ರರಂಗದ ಬಗ್ಗೆಯೂ ಪ್ರಶ್ನೆ ಮಾಡಿದ್ದು, ನನಗೆ ಈ ಬಗ್ಗೆ ಅಷ್ಟು ಜ್ಞಾನವಿಲ್ಲ ಎಂದಿರುವ ಅರ್ಜುನ್ ಉತ್ತರ ನೀಡುವ ಅವಕಾಶವನ್ನು ಜಾನ್ವಿಗೆ ಬಿಟ್ಟಿದ್ದಾರೆ.

Comments are closed.