ಮನೋರಂಜನೆ

‘ಪೈಲ್ವಾನ್’ ಬಾಡಿ ಫೇಕ್ ಫೋಟೋ ಎಂದವರಿಗೆ ಕಿಚ್ಚ ಸುದೀಪ್ ನೀಡಿದ ಖಡಕ್ ಉತ್ತರ ನೋಡಿ….

Pinterest LinkedIn Tumblr

ಬೆಂಗಳೂರು: ಇತ್ತೀಚಗಷ್ಟೇ ಬಿಡುಗಡೆಯಾಗಿದ್ದ ನಟ ಕಿಚ್ಚಾ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಪೋಸ್ಚರ್ ಕುರಿತು ಎದ್ದಿದ್ದ ಫೇಕ್ ಬಾಡಿ ಟ್ರೋಲಿಗೆ ನಟ ಕಿಚ್ಚಾ ಸುದೀಪ್ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಕಿಚ್ಚ ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಇದೇ ಮೊದಲ ಬಾರಿಗೆ ಈ ಪೋಸ್ಟರ್ ನಲ್ಲಿ ಸುದೀಪ್ ತಮ್ಮ ದೇಹವನ್ನು ಪ್ರರ್ದಶಿಸಿದ್ದರು. ಆದರೆ ಈ ಪೋಸ್ಟರ್ ನೋಡಿದ ಹಲವರು ಇದು ಸುದೀಪ್ ಅವರ ಫೇಕ್ ಫೋಟೋ ಎಂದು ಟ್ರೋಲ್ ಮಾಡಿದ್ದರು. ಬೇರೆ ಯಾರದ್ದೋ ಬಾಡಿಗೆ ಸುದೀಪ್ ಅವರ ಮುಖವನ್ನು ಅಂಟಿಸಲಾಗಿದೆ ಎಂದು ವ್ಯಂಗ್ಯ ಮಾಡಿದ್ದರು.

ಇದಕ್ಕೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಕಿಚ್ಚಾ ಸುದೀಪ್, ‘ಪೋಸ್ಟರ್ ನಲ್ಲಿರುವುದು ನನ್ನ ನಕಲಿ ದೇಹ ಎನ್ನುವವರಿಗೆ ನಾನು ಏನು ಹೇಳುವುದಿಲ್ಲ. ಬಹುಶಃ ನಾನೇ ಅವರಿಗೆ ಈ ಅಭಿಪ್ರಾಯವನ್ನು ನೀಡಿದ್ದೇನೆ. ನಾನು ಈ ಹಿಂದೆಂದೂ ಈ ರೀತಿ ಕಾಣಿಸಿಕೊಂಡಿರಲಿಲ್ಲ. ಪೈಲ್ವಾನ್ ಚಿತ್ರ ನನಗೆ ಸಾಕಷ್ಟು ಉತ್ಸಾಹ ನೀಡಿದೆ. ಅಲ್ಲದೇ ನಾನು ಈ ಚಿತ್ರದ ಎಲ್ಲ ಪ್ರಕ್ರಿಯೆಯನ್ನು ಎಂಜಾಯ್ ಮಾಡುತ್ತಿದ್ದೇನೆ. ಚಿತ್ರದ ಸ್ಕ್ರಿಪ್ಟ್ ಗಾಗಿ ನಾನು ಜಿಮ್ ಗೆ ಹೋಗಿದ್ದೇನೆ ಹೊರತು ಬೇರೆ ವಿಷಯವನ್ನು ಸಾಬೀತು ಮಾಡಲು ಅಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಕಟ್ಟುಮಸ್ತಾದ ಕುಸ್ತಿಪಟುವಿನ ಪಾತ್ರದಲ್ಲಿರುವ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಪೈಲ್ವಾನ್ ಚಿತ್ರಕ್ಕಾಗಿ ದೇಹವನ್ನು ಸುದೀಪ್ ಪ್ರರ್ದಶಿಸಿದ್ದಾರೆ. ಆದರೆ ಕೆಲವರು ಸುದೀಪ್ ಮುಖಕ್ಕೆ ಬೇರೆಯವರ ದೇಹವನ್ನು ಫೋಟೋಶಾಪ್ ಮಾಡಲಾಗಿದೆ ಎನ್ನುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿದ್ದ ಅವರ ಅಭಿಮಾನಿಗಳು ಸುದೀಪ್ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಫೋಟೋಗಳನ್ನು ಹರಿಬಿಟ್ಟಿದ್ದಾರೆ.

ಇನ್ನು ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಚಿತ್ರ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರಂತೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ತಿಳಿದುಬಂದಿದೆ.

Comments are closed.