ರಾಷ್ಟ್ರೀಯ

ದೇಶದಲ್ಲಿನ ಭ್ರಷ್ಟಾಚಾರಕ್ಕೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೋಟು ಅಮ್ಯಾನತೆಯ ಕಷಾಯವನ್ನು ಬಳಸಲಾಗಿದೆ: ಪ್ರಧಾನಿ ಮೋದಿ

Pinterest LinkedIn Tumblr

ಜಾಬ್ವಾ: ದೇಶದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೋಟು ಅಮ್ಯಾನತೆಯ ಕಷಾಯವನ್ನು ಬಳಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಮಧ್ಯಪ್ರದೇಶದ ಜಾಬ್ವಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕಷಾಯ ರೀತಿಯಲ್ಲಿ ನೋಟ್ ಅಮಾನ್ಯತೆಯನ್ನು ಬಳಸಲಾಗಿದೆ ಎಂದರು.

ಕಾರ್ಖಾನೆ, ಕಚೇರಿ, ಮನೆ ಹಾಗೂ ಹಾಸಿಗೆ ಅಡಿಯಲ್ಲಿ ಹಣ ಇಟ್ಟಿದ್ದ ಜನರು ಇಂದು ಪ್ರತಿಯೊಂದು ಪೈಸೆಗೆ ತೆರಿಗೆ ಕಟ್ಟುವಂತಾಗಿದೆ. ಈ ಹಣವನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರಲು ಉಪಯೋಗಿಸಲಾಗಿದೆ ಎಂದು ಮೋದಿ ತಿಳಿಸಿದರು.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ. ಈಗ ಹಾಗೆ ಮಾಡುವ ಬದಲು, ರೈತರನ್ನು ಜೈಲಿಗೆ ಕಳುಹಿಸಲು ಸಿದ್ದವಾಗುತ್ತದೆ. ಕಾಂಗ್ರೆಸ್ ಮಾತಿಗೆ ಮರಳಾಗಬೇಡಿ, 2022ರೊಳಗೆ ರೈತರ ಆದಾಯ ದುಪ್ಪಟ್ಟುಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಯಾವುದೇ ಗ್ಯಾರಂಟಿ ಇಲ್ಲದೆ 14 ಕೋಟಿ ಜನರಿಗೆ ಕೇಂದ್ರಸರ್ಕಾರ ಸಾಲ ನೀಡಿದೆ. ಯುಪಿಎ ಸರ್ಕಾರ 10 ವರ್ಷದಲ್ಲಿ ಮಾಡದಿದ್ದ ಕೆಲಸವನ್ನು ಕೇವಲ ನಾಲ್ಕೇ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದೆ ಎಂದು ನರೇಂದ್ರ ಮೋದಿ ಹೇಳಿದರು.

Comments are closed.