ಮುಂಬೈ: ಸಂಜಯ್ ದತ್ ಪತ್ನಿ ಮಾನ್ಯತಾ ತಮ್ಮ ಮನೆಯಲ್ಲಿ ದೀಪಾವಳಿ ಪಾರ್ಟಿಯನ್ನು ಆಯೋಜಿಸಿದ್ದರು. ಸಂಜಯ್ ದತ್ ಮನೆಗೆ ಹಲವು ತಾರೆಯರ ಆಗಮನ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಅಗಮಿಸಿದ್ದರು. ಈ ವೇಳೆ ಮದ್ಯ ಸೇವಿಸಿ ಬಂದ ಸಂಜಯ್ ದತ್ತ ಪತ್ರಕರ್ತರನ್ನು ನಿಂದಿಸಿದ್ದಾರೆ.
ತಮ್ಮ ಮನೆ ಮುಂದೆ ನಿಂತಿದ್ದ ಫೋಟೋಗ್ರಾಫರ್ಸ್ ಹಾಗೂ ಪತ್ರಕರ್ತರಿಗೆ ಸಂಜಯ್ ಅವರವರ ಮನೆಗಳಿಗೆ ಹೋಗಿ ಹಬ್ಬವನ್ನು ಆಚರಿಸಿ ಎಂದಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದಿದ್ದಕ್ಕೆ ಸಂಜಯ್ ಮನಬಂದಂತೆ ಅವರಿಗೆ ಬೈದು, ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಿದ್ದಾರೆ. ಈ ಘಟನೆಯನ್ನು ಸ್ಥಳದಲ್ಲಿದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಸಂಜಯ್ ದತ್ ಮಾಡಿರುವ ಕೆಲಸವನ್ನು `ಅಸಹ್ಯಕರ’ ಎಂದರೇ ಇನ್ನೊಬ್ಬರು `ಇಂತಹ ವ್ಯಕ್ತಿಯ ಜೀವನ ಆಧಾರಿತ ಚಿತ್ರ 300 ಕೋಟಿ ಗಳಿಸಿತ್ತು’ ಎಂದು ವ್ಯಂಗ್ಯವಾಗಿ ಹಲವು ಕಮೆಂಟ್ಸ್‍ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ನಿರ್ದೇಶಕ ರಾಜ್‍ಕುಮಾರ್ ಹಿರಾಣಿ, ಸಂಜಯ್ ದತ್ ಜೀವನಾಧರಿತ ಸಿನಿಮಾ ರಿಲೀಸ್ ಆಗಿತ್ತು. ಚಿತ್ರದಲ್ಲ ಸಂಜಯ್ ದತ್ ಪಾತ್ರವನ್ನು ಕ್ಯೂಟ್ ಬಾಯ್ ರಣ್‍ಬೀರ್ ಕಪೂರ್ ನಿಭಾಯಿಸಿದ್ದರು.
Comments are closed.