ರಾಷ್ಟ್ರೀಯ

ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯ: ಸಿ-ವೋಟರ್‌ ಸಮೀಕ್ಷೆ

Pinterest LinkedIn Tumblr


ಹೊಸದಿಲ್ಲಿ: ಪಂಚರಾಜ್ಯ ಚುನಾವಣೆಗಳಿಗೆ ಬಿರುಸುಗೊಂಡ ಪ್ರಚಾರದ ಬಿಸಿಯ ನಡುವೆಯೇ ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಆಡಳಿತ ಬದಲಾವಣೆಗೆ ಸಾಕ್ಷಿಯಾಗಲಿವೆ ಎಂದು ಸಿ-ವೋಟರ್‌ ಸಮೀಕ್ಷೆ ತಿಳಿಸಿದೆ.

ರಾಜಸ್ಥಾನದಲ್ಲಿ 200 ಸ್ಥಾನಗಳ ಪೈಕಿ 145 ಸ್ಥಾನಗಳ ಭರ್ಜರಿ ಗೆಲುವಿನೊಂದಿಗೆ ಕಾಂಗ್ರೆಸ್‌ ಸರಕಾರ ರಚಿಸಲಿದ್ದು, ಮಧ್ಯಪ್ರದೇಶದಲ್ಲೂ ಸರಳ ಬಹುಮತದೊಂದಿಗೆ ಅಧಿಕಾರ ಗಿಟ್ಟಿಸಲಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌-ಟಿಡಿಪಿ ಮೈತ್ರಿಯು 64 ಸ್ಥಾನಗಳೊಂದಿಗೆ ಅಧಿಕಾರ ಹಿಡಿಯಲಿದೆ. ಛತ್ತೀಸ್‌ಗಢದಲ್ಲೂ ಬಿಜೆಪಿ ಜತೆ ಕಾಂಗ್ರೆಸ್‌ ತುರುಸಿನ ಪೈಪೋಟಿ ನಡೆಸಲಿದೆ. ಮಿಜೊರಾಂನಲ್ಲಿ ಯಾವುದೇ ಪಕ್ಷ ಬಹುಮತ ಪಡೆಯದೆ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಂದು ಸಮೀಕ್ಷೆ ಹೇಳಿದೆ.

ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿ ಕೇವಲ 45 ಸ್ಥಾನಗಳನ್ನು ಗಳಿಸಲಿದೆ. ಬಿಜೆಪಿಯ ಒಟ್ಟು ಮತ ಹಂಚಿಕೆಯೂ ಶೇ. 39.7ಕ್ಕೆ ಸೀಮಿತವಾಗಲಿದೆ. ಕಾಂಗ್ರೆಸ್‌ ಶೇ. 47.9ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ಮಧ್ಯ ಪ್ರದೇಶ: 230 ಸ್ಥಾನಗಳಿಗಾಗಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದುರಿಸಲಿದ್ದು, ಬಿಜೆಪಿ 107 ಸ್ಥಾನಗಳನ್ನಷ್ಟೇ (ಶೇ.41.5 ಮತಗಳಿಗೆ) ಪಡೆಯುವಲ್ಲಿ ಯಶಸ್ವಿಯಾಗಲಿದೆ. ಇದೇ ವೇಳೆ ಕಾಂಗ್ರೆಸ್‌ 116 ಮತಗಳ ಸರಳ ಬಹುಮತ (ಶೇ.42.3 ಮತಗಳಿಗೆ) ಪಡೆಯಲಿದೆ ಎಂದು ಹೇಳಲಾಗಿದೆ.
Latest Comment
ನ್ಯಾಷನಲ್ ಹೆರಾಲ್ಡ್ ನ ಹುಚ್ಚು ಸಮೀಕ್ಷೆ ಇರಬಹುದು. ಕಾಂಗ್ರೆಸ್ಸ್ ಗೆಲ್ಲೋದು ಕಷ್ಟ , ರಾಜಾಸ್ತಾನದಲ್ಲಿ ಕಾಂ ಪ್ರಬಲ ಪೈಪೋಟಿ ನೀಡಬಹುದು, ಆದರೆ ಪೂರ್ಣ ಬಹುಮತ ಬರೋದು ಕಷ್ಟಸಾಧ್ಯವೇ ಸರಿ.

91 ಸ್ಥಾನಗಳ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಶೇ. 42.2ರಷ್ಟು ಮತಗಳಿಕೆಯೊಂದಿಗೆ 41 ಸ್ಥಾನಗಳನ್ನು ಪಡೆಯಲಿದೆ. ಇದೇ ವೇಳೆ ಬಿಜೆಪಿ ಶೇ. 41.6ರಷ್ಟು ಮತಗಳಿಕೆಯೊಂದಿಗೆ 43 ಸ್ಥಾನಗಳನ್ನು ಗೆಲ್ಲಲಿದೆ ಶೇ. 16.2ರಷ್ಟು ಮತಗಳಿಕೆಯೊಂದಿಗೆ ಇತರರು 6 ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಮಿಜೋರಾಂ: 40 ಸ್ಥಾನಗಳ ಮಿಜೊರಾಂನಲ್ಲಿ ಮಿಜೊ ನ್ಯಾಷನಲ್‌ ಫ್ರಾಂಟ್‌ 17, ಕಾಂಗ್ರೆಸ್‌ 12 ಮತ್ತು ಮಿಜೊರಾಂ ಪೀಪಲ್ಸ್‌ ಮೂವ್‌ಮೆಂಟ್‌ ಪಕ್ಷ 9 ಸ್ಥಾನಗಳನ್ನು ಗೆಲ್ಲಲಿದ್ದು, ಯಾರಿಗೂ ಬಹುಮತ ದೊರೆಯುವುದಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

Comments are closed.