ಮನೋರಂಜನೆ

30 ವರ್ಷದ ಹಿಂದೆ ಅಭಿನಯಿಸಿದ್ದ ಬೆಟ್ಟದ ಹೂವು ಶೂಟಿಂಗ್ ಸ್ಪಾಟ್ ಗೆ ಪುನೀತ್ ಭೇಟಿ!

Pinterest LinkedIn Tumblr


ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿನ್ನೆ ಮೊನ್ನೆ ಕನ್ನಡ ಚಿತ್ರರಂಗಕ್ಕೆ ಬಂದವರಲ್ಲ. ಎಂಟು ವರ್ಷದವರಾಗಿದ್ದಾಗಲೇ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ಅಂದು ಬಾಲನಟನಾಗಿ ಪುನೀತ್ ಅಭಿನಯಿಸಿದ ಚಿತ್ರಗಳಲ್ಲಿ ‘ಬೆಟ್ಟದ ಹೂವು’ ಇಂದಿಗೂ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿದಿದೆ. ಇದೀಗ ಆ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಮತ್ತೊಮ್ಮೆ ನೆನಪು ಮಾಡಿದ್ದಾರೆ.

ಇತ್ತೀಚೆಗೆ ‘ನಟಸಾರ್ವಭೌಮ’ ಸಿನಿಮಾದ ಚಿತ್ರೀಕರಣದ ವೇಳೆ ಚಿಕ್ಕಮಗಳೂರಿನಲ್ಲಿ ಅತ್ತಿಬೆಲೆ ಮಾರ್ಗವಾಗಿ ಹೋಗುವಾಗ ‘ಬೆಟ್ಟದ ಹೂವು’ ಚಿತ್ರದ ಚಿತ್ರೀಕರಣ ಸ್ಥಳದ ನೆನಪಾಗಿ ಕೂಡಲೇ ಕಾರನ್ನು ಅತ್ತಿಗುಂಡಿ ಕಡೆಗೆ ತಿರುಗಿಸಿ, ಶೂಟಿಂಗ್ ಸ್ಥಳ, ಸೆಟ್ ಎಲ್ಲಿ ಹಾಕಿದ್ದು, ಯಾರ್ಯಾರಿದ್ದರು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ಬಿಡುಗಡೆಯಾದ ಚಿತ್ರದ ಚಿತ್ರೀಕರಣ ಸಂದರ್ಭಗಳನ್ನು ಮೆಲುಕುಹಾಕಿದ್ದಾರೆ. ಅಷ್ಟೇ ಅಲ್ಲದೆ, ಅತ್ತಿಗುಂಡಿಯ ಗ್ರಾಮಸ್ಥರನ್ನು ಭೇಟಿಯಾಗಿ ಚಿತ್ರಿಕರಣದ ಸ್ಥಳಗಳ, ದೃಶ್ಯಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಇದೀಗ ಈ ವೀಡಿಯೋವನ್ನು ತಮ್ಮ ಫೇಸ್ ಬುಕ್ ಅಕೌಂಟ್’ನಲ್ಲಿ ಪುನೀತ್ ರಾಜಕುಮಾರ್ ಶೇರ್ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರಿಗೆ ಹತ್ತು ವರ್ಷವಿದ್ದಾಗ ‘ಬೆಟ್ಟದ ಹೂವು’ ಸಿನಿಮಾ ಚಿತ್ರೀಕರಿಸಲಾಗಿತ್ತು. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯೂ ದೊರೆತಿದೆ.

Comments are closed.