
ಬೆಂಗಳೂರು: MeToo ವಿರುದ್ಧ ನಿರ್ದೇಶಕ ಗುರು ಪ್ರಸಾದ್ ಬಿಟ್ಟಿದ್ದ ಬಾಣ ಇದೀಗ ಅವರ ಕಡೆ ತಿರುಗಿದೆ.
ಗುರು ಪ್ರಸಾದ್ ಹೇಳಿಕೆಯಿಂದ ಆಕ್ರೋಶಗೊಂಡಿರುವ ನಟಿ ಸಂಗೀತಾ ಭಟ್ ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದಾರೆ.
ಅವರ ಗಂಡಂದಿರು ಹಾಗು ಕುಟುಂಬದವರಿಗೆ ಇವರು ಪತಿವ್ರತೆಯರು ಅಂತ ಪ್ರೂವ್ ಮಾಡೋಕೆ ಮಿಟೂ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಗುರುಪ್ರಸಾದ್ ಹೇಳಿದ್ದರು.
ಈ ಹೇಳಿಕೆಯಿಂದ ನಟಿ ಸಂಗೀತಾ ಭಟ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. MeToo ಅಭಿಯಾನಕ್ಕೆ ಸಂಗೀತಾ ಭಟ್ ಸಪೋರ್ಟ್ ಮಾಡಿದ್ದರು.
ನನಗೂ ಕೆಲವು ಭಾರಿ ಲೈಂಗಿಕ ಕಿರುಕುಳದ ಅನುಭವ ಆಗಿದೆ ಅಂತ ಹೇಳಿದ್ದರು. ಆದರೆ, ಯಾರು ಎಂಬ ಹೆಸರು ಬಹಿರಂಗ ಪಡಿಸಿಲ್ಲ.
Comments are closed.