
#MeToo ಅಭಿಯಾನದಡಿ ನಟಿ ತನುಶ್ರೀ, ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ನಟಿ ರಾಖಿ ಸಾವಂತ್ ಸಹ ತನುಶ್ರೀ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು.
‘ಇಷ್ಟೇ ಅಲ್ಲ ತನುಶ್ರೀ ಮಾದಕ ವ್ಯಸನಿ. ಈ ಹಿಂದೆ ಅವರು ಮತ್ತಿನಲ್ಲಿದ್ದ ಕಾರಣಕ್ಕೆ ಅವರು ಮಾಡಬೇಕಿದ್ದ ಹಾಡಿಗೆ ನಾನು ಅಭಿನಯಿಸಬೇಕಾಯಿತು. ಒಂದು ದಿನ ಮಾದಕ ವಸ್ತು ಸೇವನೆಯಿಂದ 4 ಗಂಟೆಗಳ ಕಾಲ ಮಲಗಿದ್ದ ತನುಶ್ರೀಯಿಂದಾಗಿ, ಹಾಡಿನಲ್ಲಿ ಅಭಿನಯಿಸಲು ನಾನಾ ಪಾಟೇಕರ್ ನನಗೆ ಕೇಳಿದ್ದರು. ಆಕೆ ಮಾಡುತ್ತಿರುವ ಆರೋಪಗಳೆಲ್ಲ ಕೇವಲ ಪ್ರಚಾರಕ್ಕಾಗಿ. ಆಕೆ ನೋಡಲು ಹುಡುಗನಂತೆ ಇದ್ದಾರೆ. ನನ್ನ ಮೇಲೆ ಸಾಕಷ್ಟು ಸಲ ಅತ್ಯಾಚಾರ ಮಾಡಿದ್ದಾರೆ. #MeToo ತರಹವೇ #SheToo ಅಭಿಯಾನ ಸಹ ಆರಂಭವಾಗಬೇಕು’ ಎಂದು ರಾಖಿ ಆಗ್ರಹಿಸಿದ್ದರು.
ಇದಾದ ನಂತರ ಮವನ ಮುದರಿದ ತನುಶ್ರೀ ‘ನನಗೆ ಈಗ ಪ್ರಚಾರದ ಅಗತ್ಯ ಇಲ್ಲ. ಸಿನಿಮಾ ರಂಗ ಬಿಟ್ಟು ಅಮೆರಿಕಕ್ಕೆ ಹೋಗಿದ್ದೇನೆ. ಅಲ್ಲೇ ನೆಲೆ ನಿಲ್ಲಲಿದ್ದೇನೆ. ತನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ರಾಖಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ. ನನ್ನ ಗೌರವಕ್ಕೆ ಧಕ್ಕೆ ತಂದಿರುವುದಕ್ಕಾಗಿ ರಾಖಿ ವಿರುದ್ಧ 10 ಲಕ್ಷ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದಿದ್ದರು.
ತನುಶ್ರೀ ಹೇಳಿದಂತೆ ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ನಂತರ ರಾಖಿ ಈಗ ತನುಶ್ರೀ ವಿರುದ್ಧ 25 ಪೈಸೆ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Comments are closed.