ಮನೋರಂಜನೆ

ಮೀಟೂ ಅಭಿಯಾನಕ್ಕೆ ಬೆಂಬಲಿಸಿರುವ ನಟ ಸೈಫ್ ಅಲಿ ಖಾನ್ ಮೇಲೂ ದೌರ್ಜನ್ಯ ನಡೆದಿದೆಯಂತೆ !

Pinterest LinkedIn Tumblr

ಮುಂಬೈ : #MeToo ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಗಂಡಸರೂ ಕೂಡಾ ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ, ಬೆಂಬಲಕ್ಕೆ ನಿಂತಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೂಡಾ #MeToo ಗೆ ಬೆಂಬಲಿಸಿದ್ದಾರೆ.

ಇದೇ ವೇಳೆ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ನಾನೂ ಕೂಡಾ ದೌರ್ಜನ್ಯಕ್ಕೊಳಗಾಗಿದ್ದೇನೆ. ಅದು ದೈಹಿಕ ದೌರ್ಜನ್ಯ ಅಲ್ಲದೇ ಇರಬಹುದು ಆದರೆ ಮಾನಸಿಕ ಹಿಂಸೆಗೊಳಗಾಗಿದ್ದೇನೆ. 25 ವರ್ಷಗಳ ಹಿಂದೆ ನಡೆದ ಆ ಘಟನೆಯನ್ನು ನಾನಿನ್ನೂ ಮರೆಯಲಾರೆ. ಅದನ್ನು ನೆನೆಸಿಕೊಂಡರೆ ನನಗೀಗಲು ಕೋಪ ಬರುತ್ತದೆ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.

ಬಹುತೇಕ ಜನರು ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಬೇರೆಯವರ ನೋವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ನಾನದರ ಬಗ್ಗೆ ಮಾತನಾಡುವುದಿಲ್ಲ. ನನ್ನ ಜೀವನದಲ್ಲಿ ನಡೆದ ಆ ಘಟನೆ ನೆನದರೆ ಈಗಲೂ ಕೋಪ ಉಕ್ಕುತ್ತದೆ ಎಂದು ಸೈಫ್ ಹೇಳಿದ್ದರು.

ಯಾವ ಘಟನೆ, ನಡೆದಿದ್ದೇನು? ಯಾರ ಬಗ್ಗೆ ಹೇಳುತ್ತಿದ್ದಾರೆ ಎಂದು ಯಾವುದನ್ನೂ ಬಹಿರಂಗಪಡಿಸಿಲ್ಲ.

Comments are closed.